

ವಡೋದರ: ಪ್ರತಿಷ್ಠಿತ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್‌ೈನಲ್ ಶನಿವಾರ ಆರಂಭವಾಗಲಿದೆ. ಮೋತಿಬಾಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ಹಾಗೂ ಆತಿಥೇಯ ಬರೋಡ ತಂಡಗಳು ಮುಖಾಮುಖಿಯಾಗಲಿವೆ. ದಿನದ ಇನ್ನೊಂದು ಕ್ವಾರ್ಟರ್‌ೈನಲ್‌ನಲ್ಲಿ ಮಹಾರಾಷ್ಟ್ರ ಹಾಗೂ ಪಂಜಾಬ್ ತಂಡಗಳು ಕಾದಾಟ ನಡೆಸಲಿವೆ.
ಹಾಲಿ ಆವೃತ್ತಿಯಲ್ಲಿ ಭರ್ಜರಿ ಾರ್ಮ್‌ನಲ್ಲಿರುವ ಕರ್ನಾಟಕ ತಂಡ 2019ರ ಬಳಿಕ ದೇಶೀಯ ಏಕದಿನ ಪ್ರಶಸ್ತಿ ಜಯಿಸುವ ತವಕದಲ್ಲಿದೆ. ಲೀಗ್‌ನಲ್ಲಿ ಆಡಿದ 7 ಪಂದ್ಯಗಳಲ್ಲಿ 6 ಗೆಲುವು, 1 ಸೋಲಿನೊಂದಿಗೆ ಗುಂಪಿನ ಅಗ್ರಸ್ಥಾನಿಯಾಗಿ ಮಯಾಂಕ್ ಬಳಗ ನಾಕೌಟ್‌ಗೇರಿದೆ. ಇತ್ತ ಆಲ್ರೌಂಡರ್ ಕೃನಾಲ್ ಪಾಂಡ್ಯ ಸಾರಥ್ಯದಲ್ಲಿ ಬರೋಡ ಲೀಗ್‌ನಲ್ಲಿ ಆಡಿದ 6 ಪಂದ್ಯಗಳಲ್ಲಿ 5 ಗೆಲುವು,1 ಸೋಲಿನಿಂದಿಗೆ ಗುಂಪಿನ ಅಗ್ರಸ್ಥಾನಿ ಎನಿಸಿದೆ. ಉಭಯ ತಂಡಗಳು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕೊನೆಯದಾಗಿ ಮುಖಾಮುಖಿಯಾದಾಗ ಬರೋಡ 4 ವಿಕೆಟ್‌ಗಳ ಗೆಲುವು ದಾಖಲಿಸಿತ್ತು. ಈ ಸೋಲಿಗೆ ಮುಯ್ಯಿ ತೀರಿಸುವ ಅವಕಾಶ ಕರ್ನಾಟಕ ತಂಡದ ಮುಂದಿದೆ.
ಐದು ಬಾರಿಯ ಚಾಂಪಿಯನ್ ತಮಿಳುನಾಡು ತಂಡ ಟೂರ್ನಿಯಿಂದ ಹೊರಬಿದ್ದ ಬಳಿಕ ಕರ್ನಾಟಕ ತಂಡ ಟೂರ್ನಿಯಲ್ಲಿ ಉಳಿದಿರುವ ಅತ್ಯಂತ ಯಶಸ್ವಿ ತಂಡ ಎನಿಸಿದೆ. ಕರ್ನಾಟಕ ಇದುವರೆಗೆ 4 ಬಾರಿ ದೇಶೀಯ ಏಕದಿನ ಟೂರ್ನಿ ಗೆದ್ದಿದ್ದು, 2019ರಲ್ಲಿ ತಮಿಳುನಾಡು ತಂಡವನ್ನು ಮಣಿಸಿ ಕೊನೆಯದಾಗಿ ಈ ಸಾಧನೆ ಮಾಡಿತ್ತು.
ಭಾರತ ಟೆಸ್ಟ್ ತಂಡದ ಬ್ಯಾಟರ್ ದೇವದತ್ ಪಡಿಕ್ಕಲ್, ವೇಗಿ ಪ್ರಸಿದ್ಧ ಕೃಷ್ಣ ಸೇರ್ಪಡೆ ತಂಡದ ಬಲ ಹೆಚ್ಚಿಸಲಿದ್ದು, ಮಯಾಂಕ್ ಅಗರ್ವಾಲ್ ಹಾಲಿ ಟೂರ್ನಿಯಲ್ಲಿ 4 ಶತಕ, 1 ಅರ್ಧಶತಕ ಸಿಡಿಸಿ ರನ್‌ಮಳೆ ಹರಿಸುತ್ತಿದ್ದಾರೆ. ಅನೀಶ್ ಕೆವಿ (290 ರನ್), ಸ್ಮರಣ್ (228), ಯುವ ವಿಕೆಟ್ ಕೀಪರ್ ಕೆಎಲ್ ಶ್ರೀಜಿತ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಅಗತ್ಯ ರನ್ ಕಲೆಹಾಕಿದ್ದಾರೆ. ವಿದ್ವತ್ ಕಾವೇರಪ್ಪ ಗೈರಿನಲ್ಲೂ ಬೌಲಿಂಗ್ ವಿಭಾಗ ಭರವಸೆ ಮೂಡಿಸಿದೆ. ಉಪನಾಯಕ ಶ್ರೇಯಸ್ ಗೋಪಾಲ್ (14) ರಾಜ್ಯ ತಂಡದ ಗರಿಷ್ಠ ವಿಕೆಟ್ ಟೇಕರ್ ಆಗಿದ್ದು, ವಿ.ಕೌಶಿಕ್ ನಂತರದಲ್ಲಿದ್ದಾರೆ. ಆದರೆ ಬಲಿಷ್ಠ ಬ್ಯಾಟಿಂಗ್ ವಿಭಾಗ ಹೊಂದಿರುವ ಬರೋಡ ಎದುರು ನೈಜ ಸವಾಲು ಎದುರಾಗುವ ಸಾಧ್ಯತೆಗಳಿವೆ.
ಬರೋಡ ತಂಡ ಸಂಘಟಿತ ನಿರ್ವಹಣೆಯೊಂದಿಗೆ ಕ್ವಾರ್ಟರ್‌ೈನಲ್‌ಗೇರಿದ್ದು, ಬ್ಯಾಟರ್‌ಗಳಾದ ವಿಷ್ಣು ಸೋಲಂಕಿ (299), ಶಾಶ್ವತ್ ರಾವತ್ (262) ಲಯದಲ್ಲಿದ್ದಾರೆ. ಸೀಮಿತ ಓವರ್‌ಗಳ ಭಾರತ ತಂಡಕ್ಕೆ ಮರಳುವ ತವಕದಲ್ಲಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.
2-2ರ ಸಮಬಲ
ಕರ್ನಾಟಕ ಹಾಗೂ ಬರೋಡ ತಂಡಗಳು ದೇಶೀಯ ಏಕದಿನದಲ್ಲಿ ಇದುವರೆಗೆ 4 ಬಾರಿ ಮುಖಾಮುಖಿಯಾಗಿದ್ದು, ತಲಾ 2-2ರ ಸಮಬಲ ಹೊಂದಿವೆ. ಕರ್ನಾಟಕ ತಂಡ ಹಿಂದಿನ 2 ಲೀಗ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, ಬರೋಡ ಒಮ್ಮೆ ನಾಕೌಟ್ ಹಾಗೂ ಗುಂಪು ಹಂತದಲ್ಲಿ ರಾಜ್ಯ ತಂಡವನ್ನು ಮಣಿಸಿದೆ.
ಇಂದಿನ ಕ್ವಾರ್ಟರ್‌ೈನಲ್ಸ್
ಕರ್ನಾಟಕ- ಬರೋಡ
ಮಹಾರಾಷ್ಟ್ರ- ಪಂಜಾಬ್
ಆರಂಭ: ಬೆಳಗ್ಗೆ 9
ನೇರಪ್ರಸಾರ: ಜಿಯೋಸಿನಿಮಾ
ತಮಿಳುನಾಡಿಗೆ ಕೂಚ್ ಬೆಹಾರ್ ಟ್ರೋಫಿ
ತಮಿಳುನಾಡು ತಂಡ 33 ವರ್ಷಗಳ ಬಳಿಕ 19 ವಯೋಮಿತಿ ಕೊಚ್ ಬೆಹಾರ್ ಟ್ರೋಫಿ ಚಾಂಪಿಯನ್ ಎನಿಸಿದೆ. ಅಹಮದಾಬಾದ್‌ನಲ್ಲಿ ನಡೆದ ೈನಲ್ ಪಂದ್ಯದಲ್ಲಿ ಗುಜರಾತ್ ಎದುರು ಮೊದಲ ಇನಿಂಗ್ಸ್‌ನ ಮುನ್ನಡೆಯ ಆಧಾರದಲ್ಲಿ ತಮಿಳುನಾಡು 2024-25ನೇ ಆವೃತ್ತಿಯ ದೇಶೀಯ ಪ್ರಶಸ್ತಿ ಒಲಿಸಿಕೊಂಡಿತು. ಕಳೆದ ಬಾರಿ ಪ್ರಶಸ್ತಿ ಜಯಿಸಿದ್ದ ಕರ್ನಾಟಕ ತಂಡ ಈ ಬಾರಿ ನಾಕೌಟ್‌ಗೇರದೆ ನಿರಾಸೆ ಮೂಡಿಸಿತು. ಗುಜರಾತ್:380 ಹಾಗೂ 172/7ಡಿಕ್ಲೇರ್.ತಮಿಳುನಾಡು:413 ಹಾಗೂ 55/1.