

ವಡೋದರ: ಕರ್ನಾಟಕ ತಂಡ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಐದು ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರಿದ ಸಾಧನೆ ಮಾಡಿದೆ. ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ Padikkal (86 ರನ್, 113 ಎಸೆತ, 8 ಬೌಂಡರಿ,1 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ಹಾಗೂ ಎಡಗೈ ವೇಗಿ ಅಭಿಲಾಷ್ ಶೆಟ್ಟಿ (34ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಮಯಾಂಕ್ ಅಗರ್ವಾಲ್ ಪಡೆ ಸೆಮಿೈನಲ್‌ನಲ್ಲಿ ಹಾಲಿ ಚಾಂಪಿಯನ್ ಹರಿಯಾಣ ಎದುರು 5 ವಿಕೆಟ್‌ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಕರ್ನಾಟಕ ತಂಡ Karnataka ಶನಿವಾರ ನಡೆಯಲಿರುವ ಪ್ರಶಸ್ತಿ ಹೋರಾಟದಲ್ಲಿ ವಿದರ್ಭ ಅಥವಾ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.
ಕೋಟಂಬಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಹರಿಯಾಣ ಆರಂಭಿಕ ಹಿಮಾಂಶು ರಾಣಾ (44) ಹಾಗೂ ನಾಯಕ ಅಂಕಿತ್ ಕುಮಾರ್ (48) ಆಟದಿಂದ ಸುಸ್ಥಿತಿಯಲ್ಲಿತ್ತು. ನಂತರ ಅಭಿಲಾಷ್ ಶೆಟ್ಟಿ ಸಹಿತ ಇತರ ಬೌಲರ್‌ಗಳ ದಾಳಿಗೆ ಕುಸಿದು 9 ವಿಕೆಟ್‌ಗೆ 237 ರನ್‌ಗಳಿಗೆ ತೃಪ್ತಿಪಟ್ಟಿತು. ಕೊನೇ ವಿಕೆಟ್‌ಗೆ ಹರಿಯಾಣ 29 ಎಸೆತಗಳಲ್ಲಿ 39 ರನ್‌ಗಳಿಸಿತು.
ಪ್ರತಿಯಾಗಿ ಭರ್ಜರಿ ಾರ್ಮ್‌ನಲ್ಲಿದ್ದ ನಾಯಕ ಮಯಾಂಕ್ ಅಗರ್ವಾಲ್ (0) ವಿಕೆಟ್ ಬೇಗನೆ ಕಳೆದುಕೊಂಡ ಕರ್ನಾಟಕ ಆರಂಭಿಕ ಆಘಾತ ಎದುರಿಸಿತು. ಆಗ ದೇವದತ್ ಪಡಿಕ್ಕಲ್ ಹಾಗೂ ಆರ್. ಸ್ಮರಣ್ (76 ರನ್, 94 ಎಸೆತ, 3 ಬೌಂಡರಿ, 3 ಸಿಕ್ಸರ್) ಜೋಡಿ ಎರಡನೇ ವಿಕೆಟ್‌ಗೆ 146 ಎಸೆತಗಳಲ್ಲಿ 128 ರನ್ ಪೇರಿಸಿ ಚೇಸಿಂಗ್‌ಗೆ ಬಲ ತುಂಬಿದರು. ಪಡಿಕ್ಕಲ್ ನಿರ್ಗಮನದ ಬಳಿಕ ಕೆಎಲ್ ಶ್ರೀಜಿತ್ (3) ನಿರಾಸೆ ಮೂಡಿಸಿದರು. ಆಗ ಸ್ಮರಣ್ ಜತೆಯಾಗಿ ಉಪನಾಯಕ ಶ್ರೇಯಸ್ ಗೋಪಾಲ್ (23*) ಗೆಲುವಿನ ಸನಿಹ ಕೊಂಡೊಯ್ದದರು. ಅಂತಿಮವಾಗಿ ಕರ್ನಾಟಕ 47.2 ಓವರ್‌ಗಳಲ್ಲಿ 5 ವಿಕೆಟ್‌ಗೆ 238 ರನ್‌ಗಳಿಸಿ ಟೂರ್ನಿಯಲ್ಲಿ 5ನೇ ಬಾರಿಗೆ ೈನಲ್‌ಗೇರಿದ ಸಾಧನೆ ಮಾಡಿತು.
ಹರಿಯಾಣ: 9 ವಿಕೆಟ್‌ಗೆ 237(ಹಿಮಾಂಶು 44, ಅಂಕಿತ್ 48, ನಿಶಾಂತ್ 10, ದಿನೇಶ್ 20, ತೇವಾಟಿಯಾ 22, ಸುಮಿತ್ 21, ಅನುಜ್ 23*, ಅಮಿತ್ 15*, ಅಭಿಲಾಷ್ ಶೆಟ್ಟಿ 34ಕ್ಕೆ 4, ಶ್ರೇಯಸ್ 36ಕ್ಕೆ 2, ಪ್ರಸಿದ್ಧ 40ಕ್ಕೆ 2).
ಕರ್ನಾಟಕ: 47.2 ಓವರ್‌ಗಳಲ್ಲಿ 5 ವಿಕೆಟ್‌ಗೆ 238(ಮಯಾಂಕ್ 0, ಪಡಿಕ್ಕಲ್ 86, ಅನೀಶ್ 22, ಸ್ಮರಣ್ 76, ಶ್ರೀಜಿತ್ 3, ಶ್ರೇಯಸ್ 23*, ಅಭಿನವ್ 2*, ನಿಶಾಂತ್ 47ಕ್ಕೆ 2).
5. ಕರ್ನಾಟಕ ತಂಡ ಐದು ವರ್ಷಗಳ ಬಳಿಕ ಹಾಗೂ 5ನೇ ಬಾರಿಗೆ ದೇಶೀಯ ಏಕದಿನ ಟೂರ್ನಿಯಲ್ಲಿ ೈನಲ್‌ಗೇರಿದೆ. ಹಿಂದಿನ ನಾಲ್ಕು ಬಾರಿಯೂ (2013-14, 2014-15, 2017-18 ಹಾಗೂ 2019-20) ಪ್ರಶಸ್ತಿ ಜಯಿಸಿದೆ.
ಇಂದಿನ ಸೆಮಿೈನಲ್
ಮಹಾರಾಷ್ಟ್ರ-ವಿದರ್ಭ
ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಜಿಯೋ ಸಿನಿಮಾ