

ದುಬೈ: ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಲು ವಿಫಲವಾಯಿತು. ಸೋಮವಾರ ನಡೆದ ಔಪಚಾರಿಕ ಹಣಾಹಣಿಯಲ್ಲಿ ನಮೀಬಿಯ ತಂಡವನ್ನು ಮಣಿಸಿ ಟೂರ್ನಿಗೆ ಗೆಲುವಿನ ವಿದಾಯ ಹೇಳಿತು. ಈ ಪಂದ್ಯದ ವೇಳೆ ವಿಕೆಟ್ ಕೀಪರ್ ರಿಷಭ್ ಪಂತ್ ಭಾರತೀಯ ಸಂಸ್ಕಾರ ಅನುಸರಿಸುವ ಮೂಲಕ ಗಮನಸೆಳೆದಿದ್ದಾರೆ. ಇದು ನೆಟ್ಟಿಗರ ಮೆಚ್ಚುಗೆಗೂ ಪಾತ್ರವಾಗಿದೆ. ನಮೀಬಿಯ ಬ್ಯಾಟರ್‌ವೊಬ್ಬನ ಬ್ಯಾಟ್ ಅನ್ನು ರಿಷಭ್ ಪಂತ್ ಹಿಂಬದಿಯಿಂದ ಗೊತ್ತಿಲ್ಲದೆ ತುಳಿದರು. ತಕ್ಷಣವೇ ಎಚ್ಚೆತ್ತುಗೊಂಡ ರಿಷಭ್ ಪಂತ್, ಬ್ಯಾಟ್‌ಗೆ ನಮಸ್ಕರಿಸಿ ಸಂಸ್ಕಾರ ಮೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಭಾರತ ತಂಡದ ಯುವ ವಿಕೆಟ್ ಕೀಪರ್ ಮೈದಾನದಲ್ಲೂ ಉತ್ತಮ ನಿರ್ವಹಣೆ ತೋರುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ. ವಿಕೆಟ್ ಕೀಪಿಂಗ್‌ನಲ್ಲೂ ಚುರುಕಾಗಿರುವ ಕಾರ್ಯನಿರ್ವಹಿಸುತ್ತಿದ್ದಾರೆ. ಭವಿಷ್ಯದ ನಾಯಕ ಅಂತಾನೆ ಗುರುತಿಸಿಕೊಂಡಿರುವ ರಿಷಭ್ ಪಂತ್, ನಮೀಬಿಯ ಎದುರು ತೋರಿದ ಸಂಸ್ಕಾರದಿಂದ ಭಾರತೀಯ ಮನ ಗೆದ್ದಿದ್ದಾರೆ.