

ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಈ ಬಾರಿಯ ಏಕೈಕ ಚಿನ್ನದ ಪದಕವನ್ನು ತಂದುಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಈ ಸಾಧನೆ ಮಾಡಿರುವುದು ವಿಶಿಷ್ಟ ಕೌಶಲ್ಯ ಮತ್ತು ಅಗಾಧ ದೈಹಿಕ ಸಾಮರ್ಥ್ಯದ ಅಗತ್ಯವಿರುವ ಕ್ರೀಡೆಯಾದ ಜಾವಲಿನ್ ಎಸೆತ ಸ್ಪರ್ಧೆಯಲ್ಲಿ.
ನೀರಜ್ ಚೋಪ್ರ ಅವರು ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ತಮ್ಮ ಎರಡನೇ ಅವಕಾಶದಲ್ಲಿ ಅತ್ಯಂತ ದೂರ ಎಂದರೆ, 87.58 ಮೀಟರ್ ದೂರಕ್ಕೆ ಭಲ್ಲೆಯನ್ನು ಎಸೆದರು. ಭಾರತಕ್ಕೆ ಚಿನ್ನ ತಂದು ಕೊಟ್ಟ ಈ ಐತಿಹಾಸಿಕ ಎಸೆತದ ರೋಮಾಂಚಕ ವಿಡಿಯೋ ತುಣಕನ್ನು ಭಾರತದ ಒಲಿಂಪಿಕ್ಸ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.