VIDEO | ಒಲಿಂಪಿಕ್ಸ್​ನಲ್ಲಿ ಕಮಲ್​ಪ್ರೀತ್​ ಕೌರ್​ರ​ ಡಿಸ್ಕಸ್​ ಥ್ರೋ!

kaur1
Published on

ಟೋಕಿಯೋ : ಜಪಾನಿನ ಟೋಕಿಯೋದ ಮುಖ್ಯ ಕ್ರೀಡಾಂಗಣದಲ್ಲಿ ಇಂದು ಭಾರತೀಯ ಅಥ್ಲೀಟ್​ ಕಮಲ್​ಪ್ರೀತ್ ಕೌರ್​ ಅವರು ರೋಮಾಂಚಕ ಪ್ರದರ್ಶನ ನೀಡಿದರು. ಮಹಿಳೆಯರ ಡಿಸ್ಕಸ್​ ಥ್ರೋ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 64 ಮೀಟರ್​ ದೂರ ಸಾಧಿಸಿ, ಹಾಲಿ ವರ್ಲ್ಡ್​ ಚ್ಯಾಂಪಿಯನನ್ನೂ ಮೀರಿಸಿದರು.

ಕೌರ್​ ಅವರ ಡಿಸ್ಕಸ್ ಎಸೆತದ ದೃಶ್ಯವನ್ನು ಡಿಡಿ ನ್ಯೂಸ್​ ಚಾನೆಲ್​ ಪ್ರಸಾರ ಮಾಡಿದ್ದು, ತನ್ನ ಟ್ವಿಟರ್​ ಖಾತೆಯಲ್ಲೂ ಶೇರ್ ಮಾಡಿದೆ.

ಅರ್ಹತಾ ಸುತ್ತು ಬಿ ಸ್ಪರ್ಧೆಯಲ್ಲಿ, ಅಮೆರಿಕದ ವಾಲರೀ ಆಲ್ಮನ್ 66.42 ಮೀಟರ್ ದೂರ ಎಸೆದು ಮೊದಲ ಸ್ಥಾನ ಗಳಿಸಿದರು. ಕಮಲ್​ಪ್ರೀತ್​ ಕೌರ್​ ಅವರು, 64 ಮೀಟರ್​ ದೂರಕ್ಕೆ ಎಸೆದು, ಎರಡನೇ ಸ್ಥಾನ ಗಳಿಸಿದ್ದು, ಆಗಸ್ಟ್​ 2ರ ಅಂತಿಮ ಸ್ಪರ್ಧೆಗೆ ಆಯ್ಕೆಯಾದರು. ಕಮಲ್​ಪ್ರೀತ್​ ಕೌರ್ ಅವರು, ಕಳೆದ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿದ್ದ ಕ್ರೊಯೇಷಿಯಾದ ಸ್ಯಾಂಡ್ರಾ ಪೆರ್ಕೊವಿಕ್​(63.75ಮೀ.) ಮತ್ತು ಹಾಲಿ ವರ್ಲ್ಡ್​ ಚ್ಯಾಂಪಿಯನ್​ ಆದ ಕ್ಯೂಬಾದ ಯೈಮೆ ಪೆರೆಜ್​(63.18ಮೀ.) ಅವರಿಗಿಂತ ಹೆಚ್ಚು ದೂರವನ್ನು ಸಾಧಿಸಿದ್ದು ವಿಶೇಷವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net