ಎಂದಿಗೂ ಆ ರೀತಿ ನಡೆದುಕೊಂಡಿಲ್ಲ! KKR​ ಮಾಲೀಕ ನಟ ಶಾರುಖ್ ಖಾನ್ ಬಗ್ಗೆ ವೆಂಕಟೇಶ್​ ಅಯ್ಯರ್ ಓಪನ್ ಟಾಕ್ ​| IPL 2025

ವಿಜಯವಾಣಿ (45)
Published on

IPL 2025: ಇಂದಿನಿಂದ ಶುರುವಾಗಲಿರುವ ಐಪಿಎಲ್‌ 18ನೇ ಆವೃತ್ತಿಯ ರಣರಂಗದಲ್ಲಿ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಮತ್ತು ಕಳೆದ ಬಾರಿಯ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಕೋಲ್ಕತ ನೈಟ್​ ರೈಡರ್ಸ್​ ತಂಡಗಳು ಸೆಣಸಲಿವೆ. ಶುಭಾರಂಭ ಪಂದ್ಯದಲ್ಲಿ ಎರಡು ಬಲಿಷ್ಠ ಫ್ರಾಂಚೈಸಿಗಳ ಜಿದ್ದಾಜಿದ್ದಿಗೆ ಕ್ಷಣಗಣನೆ ಶುರುವಾಗಿದೆ.

ಮೊದಲ ಪಂದ್ಯಕ್ಕೂ ಮುನ್ನವೇ ಐಪಿಎಲ್​ ಮತ್ತು ಕ್ರಿಕೆಟ್ ಬದುಕಿನ ಕುರಿತಂತೆ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡ ವೆಂಕಟೇಶ್​ ಅಯ್ಯರ್​, ಈ ಬಾರಿ ಐಪಿಎಲ್​ನ ಹರಾಜಿನಲ್ಲಿ ತಮಗೆ ಫ್ರಾಂಚೈಸಿ ನೀಡಿದ ಸಂಭಾವನೆ ದೊಡ್ಡ ಮಟ್ಟದ ಖುಷಿ ನೀಡಿದೆ. ಬದುಕಿನ ದಿಕ್ಕು ಬದಲಾಗಿದೆ ಎಂದು ಸಂತಸ ಹಂಚಿಕೊಂಡರು. ಇದೆಲ್ಲದರ ನಡುವೆ ಕೆಕೆಆರ್​ ಮಾಲೀಕರಾದ, ಬಾಲಿವುಡ್​ ಕಿಂಗ್ ಖಾನ್ ಶಾರುಖ್ ಖಾನ್​ ಬಗ್ಗೆ ಅಯ್ಯರ್​ ಅಭಿಮಾನ ವ್ಯಕ್ತಪಡಿಸಿದ್ದಾರೆ.

"ಶಾರುಖ್ ಖಾನ್ ಅವರು ನಮ್ಮೊಂದಿಗೆ ಎಂದಿಗೂ ಫ್ರಾಂಚೈಸಿ ಮಾಲೀಕರಂತೆ ನಡೆದುಕೊಂಡಿಲ್ಲ. ಒಬ್ಬ ಸಹೋದರನಂತೆ ಭಾವಿಸುತ್ತಾರೆ. ಅವರು ಸದಾ ನಮ್ಮೊಂದಿಗಿದ್ದಾರೆ ಎಂಬ ಭಾವನೆ ಮೂಡಿಸುತ್ತಾರೆ. ಕಿಂಗ್ ಖಾನ್ ಓರ್ವ ವಿಶ್ವ ದರ್ಜೆಯ ತಾರೆ. ಅವರು ತುಂಬಾ ವಿನಮ್ರ ವ್ಯಕ್ತಿ. ಶಾರುಖ್​ ಖಾನ್​ ಅವರನ್ನು ಭೇಟಿಯಾದಾಗ, ನಾನು ಅವರಿಗೆ ವಿಶೇಷವಾಗಿ ಏನಾದರೂ ಮಾಡಬೇಕು, ಉತ್ತಮ ಕೊಡುಗೆ ನೀಡಬೇಕು ಎಂದು ಅನಿಸುತ್ತದೆ ಎಂದಿದ್ದಾರೆ ಅಯ್ಯರ್,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net