ಗೆಲುವಿನ ಹಳಿಗೆ ಮರಳಿದ ಕೆಕೆಆರ್: ಸನ್‌ರೈಸರ್ಸ್‌ಗೆ ಸತತ ಮೂರನೇ ಸೋಲು

New Project
Published on

ಕೋಲ್ಕತ: ಅಂಗಕ್ರಿಶ್ ರಘುವಂಶಿ (50 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ವೆಂಕಟೇಶ್ ಅಯ್ಯರ್ (60 ರನ್, 29 ಎಸೆತ, 7 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಜತೆಗೆ ಬೌಲರ್‌ಗಳ ಸಂಘಟಿತ ನಿರ್ವಹಣೆಯ ನೆರವಿನಿಂದ ಹಾಲಿ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ರನ್ನರ್ ಅಪ್ ಸನ್‌ರೈಸರ್ಸ್‌ ಹೈದರಾಬಾದ್ ಎದುರು 80 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಅಜಿಂಕ್ಯ ರಹಾನೆ ಪಡೆ ಗೆಲುವಿನ ಹಳಿ ಏರಿದರೆ, ಟೂರ್ನಿಯಲ್ಲಿ ಸತತ 3ನೇ ಸೋಲಿಗೆ ತುತ್ತಾದ ಪ್ಯಾಟ್ ಕಮ್ಮಿನ್ಸ್ ಬಳಗ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಜಾರಿತು.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದು ಆರಂಭಿಕ ಅಘಾತ ಎದುರಿಸಿದ ಆತಿಥೇಯ ಕೆಕೆಆರ್ 15 ಓವರ್‌ಗಳಲ್ಲಿ 4 ವಿಕೆಟ್‌ಗೆ 122 ರನ್ ಮಾತ್ರಗಳಿಸಿತ್ತು. ಆಗ ಸ್ಲಾಗ್ ಓವರ್‌ಗಳಲ್ಲಿ ಉಪನಾಯಕ ವೆಂಕಟೇಶ್ ಅಯ್ಯರ್ ಹಾಗೂ ರಿಂಕು ಸಿಂಗ್ (32*) ನಡೆಸಿದ ಬಿರುಸಿನ ಜತೆಯಾಟದ ಬಲದಿಂದ ಅಂತಿಮವಾಗಿ 6 ವಿಕೆಟ್‌ಗೆ ಭರ್ತಿ 200 ರನ್ ಪೇರಿಸಿತು. ಪ್ರತಿಯಾಗಿ ಇಂಪ್ಯಾಕ್ಟ್ ಪ್ಲೇಯರ್ ವೈಭವ್ ಆರೋರ (29ಕ್ಕೆ 3) ನೀಡಿದ ಶಾಕ್‌ನಿಂದ ಸುಧಾರಿಸಿಕೊಳ್ಳದ ಸನ್‌ರೈಸರ್ಸ್‌ ಚೇಸಿಂಗ್‌ನಲ್ಲಿ ಲಯ ತಪ್ಪಿತು. ಅಂತಿಮವಾ ಗಿ 16.4 ಓವರ್‌ಗಳಲ್ಲಿ 120 ರನ್‌ಗಳಿಗೆ ಸರ್ವಪತನ ಕಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net