ಕಾಮನ್ವೆಲ್ತ್ ಎಕ್ವಿಪ್ಡಿ ಬೆಂಚ್ ಪ್ರೆಸ್ ಚಾಂಪಿಯನ್‌ಷಿಪ್: ಚಿನ್ನ ಗೆದ್ದ ಬೆಂಗಳೂರಿನ ವೈಶಾಲಿ

New-Project-3
Published on

ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಎಕ್ವಿಪ್ಡಿ ಬೆಂಚ್ ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಬೆಂಗಳೂರು ಮೂಲದ ಬಿ.ಎಂ ವೈಶಾಲಿ ಅಮಿತ್ ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ಜತೆಗೆ ಕಾಮನ್ವೆಲ್ತ್‌ನ ಅತ್ಯುತ್ತಮ ಲಿಫ್ಟರ್ ಎಂಬ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಬುಧವಾರ ರಾತ್ರಿ ನಡೆದ ಮಹಿಳೆಯರ 76 ಕೆಜಿ ಮುಕ್ತ ವಿಭಾಗದ ಸ್ಪರ್ಧೆಯಲ್ಲಿ 112.5 ಕೆಜಿ ಭಾರ ಎತ್ತಿ ಅಗ್ರಸ್ಥಾನ ಪಡೆಯುವ ಮೂಲಕ ವೈಶಾಲಿ ಈ ಸಾಧನೆ ಮಾಡಿದ್ದಾರೆ.ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಅಹ ಆಗಿರುವ ಇವರು, ಬೆಂಗಳೂರಿನ ಸೂಪರ್ ಬಾಡಿಸ್ ಜಿಮ್ ಕೇಂದ್ರದಲ್ಲಿ ಕೋಚ್ ಹರೀಶ್ ಸಿಂಗ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ಟೂರ್ನಿಯಲ್ಲಿ ಒಟ್ಟು 12 ದೇಶದ ಲಿಫ್ಟರ್ ಗಳು ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net