ಐಪಿಎಲ್ ನಡುವೆ ಗುಡ್ ನ್ಯೂಸ್ ನೀಡಿದ ರಾಬಿನ್ ಉತ್ತಪ್ಪ!

uthappa web
Published on

ಬೆಂಗಳೂರು: ಕರ್ನಾಟಕದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮತ್ತು ಶೀತಲ್ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಪರ ಆಡುತ್ತಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಇನ್‌ಸ್ಟಾಗ್ರಾಂನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.

2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಉತ್ತಪ್ಪ ದಂಪತಿ ಈಗಾಗಲೆ ನೀಲ್ ಎಂಬ 4 ವರ್ಷ ಮಗನನ್ನು ಹೊಂದಿದ್ದಾರೆ. ‘ನಮ್ಮ ಹೊಸ ಸೂಪರ್‌ಹೀರೋ ನಿರೀಕ್ಷೆಯಲ್ಲಿದ್ದೇವೆ’ ಎಂದು 36 ವರ್ಷದ ಉತ್ತಪ್ಪ ಬರೆದುಕೊಂಡಿದ್ದಾರೆ. ‘ನಮ್ಮ ಕುಟುಂಬ ಮತ್ತೆ ಬೆಳೆಯುತ್ತಿದೆ. 3ರಿಂದ 4 ಆಗುತ್ತಿದ್ದೇವೆ’ ಎಂದು ಮಾಜಿ ಟೆನಿಸ್ ಆಟಗಾರ್ತಿಯೂ ಆಗಿರುವ ಶೀತಲ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾ ಪರ 46 ಏಕದಿನ ಮತ್ತು 13 ಟಿ20 ಪಂದ್ಯ ಆಡಿರುವ ರಾಬಿನ್ ಉತ್ತಪ್ಪ ಸದ್ಯ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಮಿಂಚುತ್ತಿದ್ದಾರೆ. ಇದುವರೆಗೆ ಆಡಿರುವ 10 ಪಂದ್ಯಗಳ 9 ಇನಿಂಗ್ಸ್‌ಗಳಲ್ಲಿ 2 ಅರ್ಧಶತಕಗಳ ಸಹಿತ 229 ರನ್ ಬಾರಿಸಿದ್ದು, 139.63 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. 14 ಸಿಕ್ಸರ್ ಸಿಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net