

ನವದೆಹಲಿ: ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ (ಐಒಎ) ಹಾಲಿ ಅಧ್ಯೆ ಪಿ.ಟಿ. ಉಷಾ, ಅತ್ಯುತ್ತಮ ಅರ್ಹತೆಯ ಮಹಿಳಾ ಕ್ರೀಡಾಪಟು (ಎಸ್ಒಎಂ) ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಮಾಜಿ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಮಾಜಿ ಲಾಂಗ್ಜಂಪ್ ತಾರೆ ಅಂಜು ಬಾಬಿ ಜಾರ್ಜ್, ಮಾಜಿ ಬಿಲ್ಗಾರ್ತಿ ಡೋಲಾ ಬ್ಯಾನರ್ಜಿ ಮತ್ತು ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್ ನಾಲ್ವರು ಮಹಿಳಾ ಎಸ್ಒಎಂಗಳಾಗಿ ಆಯ್ಕೆಯಾಗಿದ್ದಾರೆ.
ತಲಾ 40 ಪುರುಷ-ಮಹಿಳೆಯರನ್ನು ಒಳಗೊಂಡಂತೆ 80 ಮಾಜಿ ಕ್ರೀಡಾತಾರೆಯರು ಮತದಾನ ಮಾಡಿದರು. ಪುರುಷ ಎಸ್ಒಎಂಗಳಾಗಿ ಮಾಜಿ ಶೂಟರ್ ಗಗನ್ ನಾರಂಗ್, ಬಾಕ್ಸರ್ ವಿಜೇಂದರ್ ಸಿಂಗ್, ಮಾಜಿ ಕುಸ್ತಿಪಟು ಯೋಗೇಶ್ವರ್ ದತ್ ಮತ್ತು ಮಾಜಿ ಟೇಬಲ್ ಟೆನಿಸ್ ಆಟಗಾರ ಕಮಲೇಶ್ ಮೆಹ್ತಾ ಶನಿವಾರವೇ ಅವಿರೋಧ ಆಯ್ಕೆಯಾಗಿದ್ದರು.
ಇನ್ನು ಯಾವುದಾದರೂ ರಾಷ್ಟ್ರೀಯ ಕ್ರೀಡಾ ಒಕ್ಕೂಟ (ಎನ್ಎಸ್ಎಫ್) ನಾಮನಿರ್ದೇಶನ ಮಾಡಿದರೆ ಮಾತ್ರ ಪಿ.ಟಿ. ಉಷಾ ಡಿ.5ರ ಐಒಎ ಚುನಾವಣೆಯಲ್ಲಿ ಮರುಆಯ್ಕೆಗೆ ಸ್ಪರ್ಧಿಸಬಹುದಾಗಿದೆ.