ಪ್ರೇಕ್ಷಕರಿಲ್ಲದ ಯುಎಸ್ ಓಪನ್, ಟೆನಿಸ್​ ಆಟಗಾರರಿಗೆ ಬರೆ!

us-open-trophy
Published on

ನ್ಯೂಯಾರ್ಕ್: ಕರೊನಾ ವೈರಸ್ ಭೀತಿಯಿಂದಾಗಿ ಈ ಬಾರಿ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಬಹುಮಾನ ಮೊತ್ತವನ್ನು ಕಳೆದ ವರ್ಷಕ್ಕಿಂತ ಶೇ. 93.3ರಷ್ಟು ಕಡಿತಗೊಳಿಸಲಾಗಿದೆ. 2019ರಲ್ಲಿ ಒಟ್ಟು 428 ಕೋಟಿ ರೂ. ಬಹುಮಾನ ವಿತರಣೆಯಾಗಿದ್ದರೆ, ಈ ಬಾರಿ 400 ಕೋಟಿ ರೂ. ಬಹುಮಾನ ನೀಡಲಾಗುತ್ತಿದೆ.

ಸಿಂಗಲ್ಸ್ ವಿಭಾಗದ ವಿಜೇತರು 22.49 ಕೋಟಿ ರೂ. ಬಹುಮಾನ ಪಡೆಯಲಿದ್ದಾರೆ. ಇದು ಕಳೆದ ವರ್ಷಕ್ಕಿಂತ ಶೇ. 22ರಷ್ಟು ಕಡಿಮೆಯಾಗಿದೆ. ಆದರೆ ಮೊದಲ ಸುತ್ತಿನಲ್ಲಿ ಆಡುವ ಆಟಗಾರರಿಗೆ ನೀಡುವ ಬಹುಮಾನ ಮೊತ್ತವನ್ನು ಏರಿಸಲಾಗಿದೆ.

ಕಳೆದ ಬಾರಿ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ ಆಟಗಾರ 43.49 ಲಕ್ಷ ರೂ. ಪಡೆದಿದ್ದರೆ, ಈ ಬಾರಿ 45.74 ಲಕ್ಷ ರೂ. ವಿತರಿಸಲಾಗುವುದು. 2 ಮತ್ತು 3ನೇ ಸುತ್ತಿನಲ್ಲಿ ನಿರ್ಗಮಿಸುವ ಆಟಗಾರರು ಹಿಂದಿನ ಮೊತ್ತವನ್ನೇ ಪಡೆಯಲಿದ್ದಾರೆ. ನಂತರ 4ನೇ ಸುತ್ತಿನಿಂದ ೈನಲ್‌ವರೆಗೆ ಬಹುಮಾನ ಮೊತ್ತವನ್ನು ಕಡಿತಗೊಳಿಸಲಾಗಿದೆ.

ಡಬಲ್ಸ್ ವಿಭಾಗದಲ್ಲಿ ಹೆಚ್ಚಿನ ಕಡಿತ ಮಾಡಲಾಗಿದೆ. ಡಬಲ್ಸ್ ವಿಜೇತರು ಕಳೆದ ವರ್ಷಕ್ಕಿಂತ ಶೇ. 46ರಷ್ಟು ಕಡಿಮೆ ಅಂದರೆ 3 ಕೋಟಿ ರೂ. ಬಹುಮಾನ ಪಡೆಯಲಿದ್ದಾರೆ. ಕಳೆದ ವರ್ಷದ ವಿಜೇತರು 5.55 ಕೋಟಿ ರೂ. ಬಹುಮಾನ ಪಡೆದಿದ್ದರು. ಈ ಬಾರಿ ಮಿಶ್ರ ಡಬಲ್ಸ್ ವಿಭಾಗದ ಸ್ಪರ್ಧೆ ಇರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net