ಝೀಲ್- ರಶ್ಮಿಕಾ ಫೈನಲ್ ಫೈಟ್: ಏಷ್ಯಾಡ್ ಪದಕ ವಿಜೇತೆ ಋತುಜಾ ಬೋಸಲೆಗೆ ಶಾಕ್

Published on

ಬೆಂಗಳೂರು: ಏಷ್ಯನ್ ಗೇಮ್ಸ್ ಮಿಶ್ರ ಡಬಲ್ಸ್ ಚಿನ್ನದ ಪದಕ ವಿಜೇತೆ, ಮೂರನೇ ಶ್ರೇಯಾಂಕಿತೆ ಋತುಜಾ ಬೋಸಲೆಗೆ ಸೆಮಿೈನಲ್ ಶಾಕ್ ನೀಡಿದ ಭಾರತದ ಶ್ರೇಯಾಂಕ ರಹಿತೆ ಆಟಗಾರ್ತಿ ಝೀಲ್ ದೇಸಾಯಿ ಐಟಿಎ್ ಮಹಿಳಾ ವರ್ಲ್ಡ್ ಟೆನಿಸ್ ಟೂರ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ೈನಲ್‌ಗೇರಿದ್ದಾರೆ. ಪ್ರಶಸ್ತಿ ಸುತ್ತಿನಲ್ಲಿ ಭಾರತದವರೇ ಆದ ರಶ್ಮಿಕಾ ಭಮಿಡಿಪಟಿ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಝೀಲ್ ದೇಸಾಯಿ 3-6, 6-4, 7-5 ಅಂತರದಿಂದ ಭಾರತದ ಅಗ್ರ ಟೆನಿಸ್ ಆಟಗಾರ್ತಿ ಋತುಜಾ ಎದುರು ಅಚ್ಚರಿಯ ಗೆಲುವು ದಾಖಲಿಸಿದರು. ಇನ್ನೊಂದು ಸೆಮೀಸ್ ಪಂದ್ಯದಲ್ಲಿ ರಾಷ್ಟ್ರೀಯ ಚಾಂಪಿಯನ್ ರಶ್ಮಿಕಾ 6-2, 6-1 ರಿಂದ ಎರಡನೇ ಶ್ರೇಯಾಂಕಿತೆ ಥಾಯ್ಲೆಂಡ್‌ನ ಲನ್ಲನಾ ತರರುಡೀ ಎದುರು ಗೆದ್ದು ಬೀಗಿದರು.

ಡಬಲ್ಸ್ ೈನಲ್‌ನಲ್ಲಿ ಇಟಲಿಯ ಡಿಲೆಟ್ಟಾ ಚೆರುಬಿನಿ ಮತ್ತು ಜರ್ಮನಿಯ ಆಂಟೋನಿಯಾ ಸ್ಮಿತ್ 4-6, 7-5, 10-4 ರಿಂದ 4ನೇ ಶ್ರೇಯಾಂಕಿತ ಥೈಲ್ಯಾಂಡ್‌ನ ಪುನ್ನಿನ್ ಕೊವಾಪಿಟುಕ್ಟೆಡ್ -ಅನ್ನಾ ಉರೆಕೆ ಜೋಡಿಯನ್ನು ಪರಾಭವಗೊಳಿಸಿ ಚಾಂಪಿಯನ್ ಎನಿಸಿದರು. ಇದರೊಂದಿಗೆ 50 ಡಬ್ಲುೃಟಿಎ ಅಂಕದೊಂದಿಗೆ 1.20 ಲಕ್ಷ ರೂಪಾಯಿ ಬಹುಮಾನ ಮೊತ್ತ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net