ಕಿರಿಯರ ಚೆಸ್​ ಚಾಂಪಿಯನ್​ಷಿಪ್​: ನಿಮಲನ, ರಿಹಾನ್ಯಿಗೆ ಪ್ರಶಸ್ತಿ

ವಿಜೇತರೊಂದಿಗೆ ಕೆಎಸ್​ಸಿಎ ಕಾರ್ಯದರ್ಶಿ ಸಚಿನ್​ ಪಿ.ಎಸ್​, ವಿನ್​ಮೋರ್​ ಅಕಾಡೆಮಿ ಪ್ರಾಂಶುಪಾಲ ಡೇವಿಡ್​, ಪಂಚಜನ್ಯ ಅಕಾಡೆಮಿ ಸ್ಥಾಪಕ ಸುರೇಶ್​ ಬಾಬು.
ವಿಜೇತರೊಂದಿಗೆ ಕೆಎಸ್​ಸಿಎ ಕಾರ್ಯದರ್ಶಿ ಸಚಿನ್​ ಪಿ.ಎಸ್​, ವಿನ್​ಮೋರ್​ ಅಕಾಡೆಮಿ ಪ್ರಾಂಶುಪಾಲ ಡೇವಿಡ್​, ಪಂಚಜನ್ಯ ಅಕಾಡೆಮಿ ಸ್ಥಾಪಕ ಸುರೇಶ್​ ಬಾಬು.
Published on
ಬೆಂಗಳೂರು: ಕರ್ನಾಟಕ ರಾಜ್ಯ ಚೆಸ್​ ಸಂಸ್ಥೆ (ಕೆಎಸ್​ಸಿಎ) ಆಶ್ರಯದಲ್ಲಿ ಆಯೋಜಿಸಿದ್ದ 7 ವಯೋಮಿತಿ ಓಪನ್​ ಹಾಗೂ ಬಾಲಕಿಯರ ಚೆಸ್ (Chess)​ ಚಾಂಪಿಯನ್​ಷಿಪ್​ನಲ್ಲಿ ಕ್ರಮವಾಗಿ ನಿಮಲನ ಧರಣಿಪತಿ, ರಿಹಾನ್ಯಿ ಮುನಗಾಲಾ ಪ್ರಶಸ್ತಿ ಗೆದ್ದುಕೊಂಡಿದ್ದು, ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಚೆಸ್​ ಚಾಂಪಿಯನ್​ಷಿಪ್​ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಓಪನ್​ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿಮಲನ ಅಂತಿಮ ಸುತ್ತಿನಲ್ಲಿ ಸಾತ್ವಿಕ್​ ವಿ ಭಟ್​ರನ್ನು ಮಣಿಸಿ 9 ಅಂಕದೊಂದಿಗೆ ಅಗ್ರಸ್ಥಾನ ಪಡೆದರೆ, ಸೈಷನ್​ ಸೂರ್ಯ ಸಿ. (7.5 ಅಂಕ) ದ್ವೀತಿಯ ಸ್ಥಾನಕ್ಕೆ ತೃಪ್ತಿಪಟ್ಟರು. ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ರಿಹಾನ್ಯಿ 9 ಅಂಕಗಳಿಸಿದರೆ, ಧನಿಷ್ಕಾ ಗಣೇಶ್​ 7 ಅಂಕದೊಂದಿಗೆ ರನ್ನರ್​ ಅಪ್​ ಎನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net