

ಮಸ್ಕತ್ (ಓಮನ್): ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಆಘಾತಕಾರಿ ಸೋಲು ಅನುಭವಿಸಿದ್ದ ಭಾರತ ತಂಡ ಇದೀಗ 19 ವಯೋಮಿತಿ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಸೆಮಿೈನಲ್ಗೇರಲು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಲಕ್ಷ್ಯ ರಾಯ್ಚಂದಾನಿ ಸಾರಥ್ಯದ ಭಾರತ ತಂಡ ಮಂಗಳವಾರ ನಡೆಯಲಿರುವ ಎ ಗುಂಪಿನ ತನ್ನ 3ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಯುಎಇ ವಿರುದ್ಧ ಆಡಲಿದ್ದು, ಗೆದ್ದರಷ್ಟೇ ಉಪಾಂತ್ಯಕ್ಕೇರಲಿದೆ. ಮೊದಲ ಪಂದ್ಯದಲ್ಲಿ ನೇಪಾಳ ಎದುರು ಸುಲಭ ಗೆಲುವು ಸಾಧಿಸಿದ್ದ ಭಾರತ ತಂಡ, ಕಳೆದ ಪಂದ್ಯದಲ್ಲಿ ಪಾಕ್ ಎದುರು ಎಡವಿತ್ತು.
ಮತ್ತೊಂದೆಡೆ ಯುಎಇ ಕೂಡ ಪಾಕ್ ಎದುರು ಸೋತು ನೇಪಾಳ ಎದುರು ಜಯಿಸಿದೆ. ಹೀಗಾಗಿ ಭಾರತ-ಯುಎಇ ಸದ್ಯ ತಲಾ 2 ಅಂಕ ಗಳಿಸಿವೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಗುರುವಾರ ಸೆಮಿಫೈನಲ್ನಲ್ಲಿ ಬಿ ಗುಂಪಿನ ಅಗ್ರಸ್ಥಾನಿ ಅಫ್ಘಾನಿಸ್ತಾನ ಎದುರಾಗಲಿದೆ.
ಆರಂಭ: ಬೆಳಗ್ಗೆ 10.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.