

ಮೆಲ್ಬೋರ್ನ್: ಭಾರತೀಯ ತಂಡದ ವೇಗದ ಎಸೆತಗಾರ ಉಮೇಶ್ ಯಾದವ್ ಎರಡನೇ ಟೆಸ್ಟ್ನ ಎರಡನೇ ದಿನದ ಆಟದ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಸೋಮವಾರ ಆರಂಭವಾಗಿದ್ದು, ಇಂದಿನ ಆಟಕ್ಕೆ ಯಾದವ್ ಲಭ್ಯರಿಲ್ಲ.
ನಿನ್ನೆ ಆಸ್ಟ್ರೇಲಿಯಾದ ಸೆಕೆಂಡ್ ಇನ್ನಿಂಗ್ಸ್ ಆರಂಭದಲ್ಲಿ ಎಂಟು ರನ್ ಆಗಿದ್ದಾಗ ತಮ್ಮ ಎರಡನೇ ಓವರ್ನಲ್ಲಿ ಉಮೇಶ್ ಯಾದವ್ ಆರಂಭಿಕ ಆಟಗಾರ ಜೋ ಬರ್ನ್ಸ್ ರನ್ನು ಪೆವಿಲಿಯನ್ಗೆ ಕಳುಹಿಸಿದ್ದರು. ನಾಲ್ಕನೇ ಓವರ್ ಎಸೆತ ಆರಂಭಿಸಿದ ವೇಳೆ ಮೊಣಕಾಲಿಗೆ ಗಾಯವಾಗಿದ್ದು, ಕೂಡಲೇ ವೈದ್ಯಕೀಯ ನೆರವು ಪಡೆದುಕೊಂಡು ಡ್ರೆಸ್ಸಿಂಗ್ ರೂಮಿಗೆ ತೆರಳಿದ್ದರು. ಎಂಟನೆ ಓವರ್ ಅನ್ನು ಮೊಹಮ್ಮದ್ ಸಿರಾಜ್ ಪೂರ್ಣಗೊಳಿಸಿದರು.
ಭಾರತೀಯ ತಂಡಕ್ಕೆ ಈಗಾಗಲೇ ವೇಗಿಗಳಾದ ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಅವರ ಅನುಪಸ್ಥಿತಿ ಕಾಡಿದೆ. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಎರಡನೆ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯ ತಂಡವನ್ನು 195 ರನ್ಗೆ ಕಟ್ಟಿಹಾಕುವಲ್ಲಿ ಭಾರತೀಯ ತಂಡ ಯಶಕಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ 326 ರನ್ ಕಲೆ ಹಾಕಿ 131 ರನ್ಗಳ ಮುನ್ನಡೆ ಸಾಧಿಸಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..