

ಪಾಟ್ಚೆಫ್ಸ್ಟ್ರೋಮ್(ದಕ್ಷಿಣಆಫ್ರಿಕಾ): ಮೊಹಮದುಲ್ ಹಸನ್ ಜಯ್ (100 ರನ್, 127 ಎಸೆತ, 13 ಬೌಂಡರಿ) ಶತಕ ಹಾಗೂ ಸಂಘಟಿತ ಬೌಲಿಂಗ್ ನೆರವಿನಿಂದ ಬಾಂಗ್ಲಾದೇಶ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಚೊಚ್ಚಲ ಬಾರಿಗೆ ಪ್ರಶಸ್ತಿ ಸುತ್ತಿಗೇರಿತು. ಸೆನ್ವೇಸ್ ಪಾರ್ಕ್ನಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾ ತಂಡ 6 ವಿಕೆಟ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವನ್ನು ಬಾಂಗ್ಲಾ ಎದುರಿಸಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 8 ವಿಕೆಟ್ಗೆ 211 ರನ್ಗಳಿಸಿತು. ಪ್ರತಿಯಾಗಿ ಬಾಂಗ್ಲಾದೇಶ ತಂಡ 44.1 ಓವರ್ಗಳಲ್ಲಿ 4 ವಿಕೆಟ್ಗೆ 215 ರನ್ ಕಲೆಹಾಕಿ ಜಯದ ನಗೆ ಬೀರಿತು. ಬಾಂಗ್ಲಾದೇಶ ಕ್ವಾರ್ಟರ್ಫೈನಲ್ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತ್ತು. ಬಾಂಗ್ಲಾ ತಂಡ 2016ರಲ್ಲಿ ತವರಲ್ಲಿ ನಡೆದ ವಿಶ್ವಕಪ್ನಲ್ಲಿ ಸೆಮೀಸ್ಗೇರಿದ್ದು ಇದುವರೆಗಿನ ಉತ್ತಮ ನಿರ್ವಹಣೆಯಾಗಿತ್ತು.
ನ್ಯೂಜಿಲೆಂಡ್: 8 ವಿಕೆಟ್ಗೆ 211 (ವೀಲರ್ ಗ್ರೀನಾಲ್ 75*, ಲಿಡ್ಸ್ಟೋನ್ 44, ಶೋರಿಫುಲ್ ಇಸ್ಲಾಂ 45ಕ್ಕೆ 3, ಮುರಾದ್ 34ಕ್ಕೆ 2, ಶಮಿಮ್ ಹುಸೇನ್ 31ಕ್ಕೆ 2), ಬಾಂಗ್ಲಾದೇಶ: 44.1 ಓವರ್ಗಳಲ್ಲಿ 4 ವಿಕೆಟ್ಗೆ 215 ( ಹಸನ್ ಜಯ್ 100, ತೌಹಿದ್ ಹ್ರಿಡೊಯ್ 40, ಶಾಹದತ್ ಹುಸೇನ್ 40*, ಆದಿತ್ಯ ಅಶೋಕ 44ಕ್ಕೆ 1).