U19 Asia Cup; ಪಾಕ್​ ವಿರುದ್ಧ ಮುಗ್ಗರಿಸಿದ ಭಾರತ ಕಿರಿಯರ ತಂಡ

U19 Asia Cup
Published on

ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂಡರ್​-19 ಏಷ್ಯಾಕಪ್​ (U19 Asia Cup) ಪಂದ್ಯದಲ್ಲಿ ಭಾರತ ತನ್ನ ಸಾಂಪಾದ್ರಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 43 ರನ್​ಗಳ ಸೋಲು ಕಂಡಿದೆ.

ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ತಂಡವು ಆರಂಭಿಕ ಶಹಬಾಜ್​ ಖಾನ್​ (159 ರನ್​, 147 ಎಸೆತ, 5 ಬೌಂಡರಿ, 10 ಸಿಕ್ಸರ್​), ಉಸ್ಮಾನ್​ ಖಾನ್​ (60 ರನ್​, 94 ಎಸೆತ, 6 ಬೌಂಡರಿ) ಉಪಯುಕ್ತ ಆಟದ ಫಲವಾಗಿ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 281 ರನ್​ಗಳಿಸಿತ್ತು.

ಗುರಿ ಬೆನ್ನತ್ತಿದ್ದ ಭಾರತ ತಂಡದ ಪರ ನಿಖಿಲ್​ ಕುಮಾರ್​ (67 ರನ್​, 77 ಎಸೆತ, 6 ಬೌಂಡರಿ, 3 ಸಿಕ್ಸರ್​) ಪ್ರತಿರೋಧದ ಹೊರತಾಗಿಯೂ ಗೆಲುವಿನ ದಡ ಮುಟ್ಟಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ತಂಡವು 47.1 ಓವರ್​ಗಳಲ್ಲಿ 238 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿತ್ತು.

ಗ್ರೂಪ್​ ಎ ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ತಂಡವು ಡಿಸೆಂಬರ್ 2 ರಂದು ಶಾರ್ಜಾದಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ. ಡಿಸೆಂಬರ್​ 04ರಂದು ಶಾರ್ಜಾದಲ್ಲಿ ಯುಎಇ ವಿರುದ್ಧ ತನ್ನ ಲೀಗ್​ ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಡಿಸೆಂಬರ್​ 08ರಂದು ಟೂರ್ನಿಯ ಫೈನಲ್​ ಪಂದ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net