ವಿಶ್ವಕಪ್ ತಂಡಕ್ಕೆ ಮರಳಲು ಏಕದಿನ ಕ್ರಿಕೆಟ್ ನಿವೃತ್ತಿ ಹಿಂಪಡೆಯಲಿದ್ದಾರೆ ಇಂಗ್ಲೆಂಡ್‌ನ ಸ್ಟಾರ್ ಆಲ್ರೌಂಡರ್

ST
Published on

ಲಂಡನ್: ಇಂಗ್ಲೆಂಡ್ ತಂಡಕ್ಕೆ 2019ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಟೆಸ್ಟ್ ತಂಡದ ನಾಯಕ ಮತ್ತು ವಿಶ್ವದ ಸ್ಟಾರ್ ಆಲ್ರೌಂಡರ್ 2022ರ ಜುಲೈನಲ್ಲಿ ಏಕದಿನ ಮಾದರಿಗೆ ದಿಢೀರ್ ವಿದಾಯ ಪ್ರಕಟಿಸಿ ಅಚ್ಚರಿ ಮೂಡಿಸಿದದ್ದರು. ಆದರೆ ಮುಂಬರುವ ವಿಶ್ವಕಪ್‌ಗೆ ಏಕದಿನ ಕ್ರಿಕೆಟ್ ನಿವೃತ್ತಿ ಹಿಂಪಡೆಯಲು ಸಿದ್ಧರಾಗಿದ್ದು, ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

2019ರ ವಿಶ್ವಕಪ್ ೈನಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ 32 ವರ್ಷದ ಸ್ಟೋಕ್ಸ್, ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡುವ ಸಾಧ್ಯತೆಗಳಿವೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುವ ಇಂಗ್ಲೆಂಡ್ ತಂಡಕ್ಕೆ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ಟೋಕ್ಸ್ ನೆರವಾಗಲಿದ್ದಾರೆ ಎಂದು ಆಂಗ್ಲ ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ವಿಶ್ವಕಪ್‌ನಲ್ಲಿ ಆಡುವ ನಿಟ್ಟಿನಲ್ಲಿ ಬೆನ್ ಸ್ಟೋಕ್ಸ್ ಮುಂಬರುವ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯಲು ಸಿದ್ದರಾಗಿದ್ದಾರೆ. ಆದಕ್ಕೂ ಮುನ್ನ ಮೊಣಕಾಲಿನ ಗಾಯದ ಸಮಸ್ಯೆಗೆ ತುತ್ತಾಗಿರುವ ಸ್ಟೋಕ್ಸ್, ಏಕದಿನ ಕ್ರಿಕೆಟ್‌ಗೆ ಮರಳುವ ಮುನ್ನ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರೀಕ್ಷೆಯಿದೆ. ನಿವೃತ್ತಿ ಹೇಳುವ ಮುನ್ನ ಸ್ಟೋಕ್ಸ್ ಇಂಗ್ಲೆಂಡ್ ಪರ 105 ಏಕದಿನ ಪಂದ್ಯವನ್ನಾಡಿದ್ದಾರೆ. ಅಕ್ಟೋಬರ್ 5 ರಂದು ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಹಾಲಿ ರನ್ನರ್ ಅಪ್ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.

ಬೆನ್ ಸ್ಟೋಕ್ಸ್ ನಿವೃತ್ತಿ ಹಿಂಪಡೆದು ವಿಶ್ವಕಪ್‌ನಲ್ಲಿ ಆಡುವ ವಿಚಾರವಾಗಿ ನಾಯಕ ಜೋಸ್ ಬಟ್ಲರ್ ಮಾತುಕತೆ ನಡೆಸಲಿದ್ದಾರೆ. ಆದರೆ ಸ್ಟೋಕ್ಸ್ ತನ್ನ ನಿರ್ಧಾರದ ಬದಲಾವಣೆಯ ಬಗ್ಗೆ ಸ್ಪಷ್ಟ ಉತ್ತರ ನೀಡಿಲ್ಲ. ಅವರು ತಂಡಕ್ಕೆ ಮರಳುವ ವಿಶ್ವಾಸ ಹೊಂದಿದ್ದೇವೆ ಎಂಬ ಹೇಳಿಕೆ ಮೂಲಕ ಬೆನ್ ಸ್ಟೋಕ್ಸ್ ಏಕದಿನ ತಂಡಕ್ಕೆ ಮರಳುವ ಬಗ್ಗೆ ಏಕದಿನ ತಂಡದ ಕೋಚ್ ಮ್ಯಾಥ್ಯೊ ಮೊಟ್ ಸುಳಿವು ನೀಡಿದ್ದರು.

ಭಾರತದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಇಂಗ್ಲೆಂಡ್ ಮಂಗಳವಾರ 18 ಆಟಗಾರರ ಸಂಭಾವ್ಯ ತಂಡವನ್ನು ಪ್ರಕಟಿಸಲಿದೆ. ಇದರಲ್ಲಿ ಸ್ಟೋಕ್ಸ್ ಮತ್ತು ಆರ್ಚರ್ ಇಬ್ಬರಿಗೂ ಸ್ಥಾನ ಕಲ್ಪಿಸುವ ಬಗ್ಗೆ ಮೊಟ್ ಆಸಕ್ತಿ ಹೊಂದಿದ್ದಾರೆ. ಸಂಪೂರ್ಣ ಫಿಟ್ ಆಗದ ಕಾರಣದಿಂದಾಗಿ ಕಳೆದ ಆಶಸ್ ಸರಣಿ ತಪ್ಪಿಸಿಕೊಂಡಿದ್ದ ವೇಗಿ ಜ್ರೋಾ ಆರ್ಚರ್, ಈಗಾಗಲೆ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಇತ್ತೀಚೆಗೆ ಆಶಸ್ ಸರಣಿಯಲ್ಲಿ ಮೊಯಿನ್ ಅಲಿ ಟೆಸ್ಟ್ ನಿವೃತ್ತಿಯನ್ನು ಹಿಂಪಡೆದು ಮರಳಿ ಕಣಕ್ಕಿಳಿದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net