ಯು ಮುಂಬಾಗೆ ಶರಣಾದ ಬೆಂಗಳೂರು ಬುಲ್ಸ್: ದಬಾಂಗ್ ದೆಹಲಿ ಗೆಲುವಿನ ಓಟ

New-Project-6
Published on

ಮುಂಬೈ: ಸರ್ವಾಂಗೀಣ ನಿರ್ವಹಣೆ ತೋರಿದ ಆತಿಥೇಯ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು 40-35 ಅಂಕಗಳಿಂದ ಮಣಿಸಿದೆ. ಯು ಮುಂಬಾ ಸತತ 4ನೇ ಗೆಲುವು ತನ್ನದಾಗಿಸಿಕೊಂಡಿದೆ. ಡೋಮ್ ಕ್ರೀಡಾಂಗಣಲ್ಲಿ ಶುಕ್ರವಾರ ಆರಂಭಗೊಂಡ ಮುಂಬೈ ಚರಣದ 2ನೇ ಪಂದ್ಯದಲ್ಲಿ ಆರಂಭದಿಂದಲೂ ಯು ಮುಂಬಾ ಮುನ್ನಡೆ ಸಾಧಿಸಿತು.

ಮೊದಲಾರ್ದಧದಲ್ಲಿ ಬುಲ್ಸ್ ತಂಡವನ್ನು ಆಲೌಟ್ ಮಾಡಿ 19-10 ಮುನ್ನಡೆ ಸಾಧಿಸಿತು. ಮುಂಬಾ ಪರ ಗುಮನ್ ಸಿಂಗ್, ಜಾರ್‌ದಾನೇಶ್ ತಲಾ 7 ಅಂಕಗಳಿಸಿದರು.

ಹ್ಯಾಟ್ರಿಕ್ ಗೆಲುವು: ರೈಡರ್ ಅಶು ಮಲಿಕ್ (10) ತೋರಿದ ನಿರ್ವಹಣೆಯಿಂದ ದಿನದ ಮೊದಲ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡ 38-37ರಿಂದ ರೋಚಕ ಗೆಲುವು ದಾಖಲಿಸಿದೆ. ಮೊದಲಾರ್ಧದಲ್ಲಿ ದಬಾಂಗ್ ದೆಹಲಿ 26-13ರಿಂದ ಪ್ಯಾಬಲ್ಯ ಸಾಧಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net