ಭವಿಷ್ಯದ ತಾರೆ ಎಸ್.ತಾನ್ಯಾಗೆ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಎರಡು ಚಿನ್ನ

thanya (2)
Published on

ಮೈಸೂರು: ಭವಿಷ್ಯದ ತಾರೆ ಎಸ್.ತಾನ್ಯಾ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಪಡೆದು ಗಮನ ಸೆಳೆದಿದ್ದಾರೆ. ಆ ಮೂಲ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ 2 ಪಕದ ಸಾಧನೆ ಮಾಡಿದ ಮೈಸೂರಿನ ಮೊದಲ ಮಹಿಳಾ ಈಜುಪಟು ಎನಿಸಿಕೊಂಡಿದ್ದಾರೆ. ಆ ಮೂಲಕ ಸಾಂಸ್ಕೃತಿಕ ನಗರಿಯ ಕೊರಗನ್ನು ನೀಗಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುವ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿರುವ ತಾನ್ಯಾ, ಬುಧವಾರ 200 ಮೀಟರ್ ವೈಯಕ್ತಿಕ ಮಿಡ್ಲೆ(ಐಎಂ)ನಲ್ಲಿ ಚಿನ್ನ, 200 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಫೆ. 13ರವರೆಗೆ ನಡೆಯುವ ಸ್ಪರ್ಧೆಯಲ್ಲಿ ಫೆ.9 ರಂದು 400 ಮೀಟರ್ ವೈಯಕ್ತಿಕ ಮಿಡ್ಲೆ(ಐಎಂ) ಸ್ಪರ್ಧೆಯಲ್ಲೂ ಭಾಗಿಯಾಗಲಿದ್ದಾರೆ.

ತಾನ್ಯಾ ಜೆ.ಪಿ.ನಗರ ಈಜು ಕೊಳದಲ್ಲಿ ಪಿ.ಪವನ್ ಕುಮಾರ್ ಅವರ ಬಳಿ ಅಭ್ಯಾಸ ನಡೆಸುತ್ತಿದ್ದಾರೆ. ಜೆ.ಪಿ.ನಗರದ ಎಸ್.ಪಿ.ಷಡಕ್ಷರಿ ಮತ್ತು ಎನ್.ಶ್ವೇತಾ ದಂಪತಿಯ ಪುತ್ರಿ ತಾನ್ಯಾ, ಶ್ರೀ ಶಾರದಾ ಪಬ್ಲಿಕ್ ಸ್ಕೂಲ್‌ನಲ್ಲಿ 9ನೇ ತರಗತಿ ವಿದ್ಯಾರ್ಥಿನಿ.

ಇತ್ತೀಚೆಗೆ ನವ ಹೆಹಲಿಯಲ್ಲಿ ನಡೆದ ರಾಷ್ಟ್ರೀಯ ಈಜು ಸ್ಪರ್ಧೆಯ 400 ಮೀಟರ್ ವೈಯಕ್ತಿಕ ಮಿಡ್ಲೆ(ಐಎಂ)ನಲ್ಲಿ ಚಿನ್ನ, 200 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಹಾಗೂ 100*4 ಮೀಟರ್ ಮಿಡ್ಲೆ ರಿಲೇಯಲ್ಲಿ ಕಂಚಿನ ಪದಕ ಪಡೆದಿದ್ದರು. ಅಲ್ಲದೆ, ಚೆನ್ನೈನಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್-2024 ಈಜು ಸ್ಪರ್ಧೆಯ 400 ಮೀಟರ್ ವೈಯಕ್ತಿಕ ಮಿಡ್ಲೆ(ಐಎಂ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net