ಬೆಂಗಳೂರಿನಲ್ಲಿ ಭಾರತದ ಪ್ರಪ್ರಥಮ ಆಬ್‌ಸ್ಟಕಲ್ ಕೋರ್ಸ್ ರೇಸ್ ನಡೆಸಿದ ಟಿವಿಎಸ್ ಅಪಾಚಿ ಸ್ಪಾರ್ಟಾನ್

TVS
Published on

ಭಾರತದ ಪ್ರಪ್ರಥಮ ಟಿವಿಎಸ್ ಅಪಾಚಿ ಸ್ಪಾರ್ಟಾನ್ ರೇಸ್‌ನ ಪುರುಷ ಹಾಗೂ ಮಹಿಳಾ ಸ್ಪರ್ಧಾತ್ಮಕ ವರ್ಗಗಳಲ್ಲಿ ಮೊದಲ ಸ್ಥಾನ ಗಳಿಸಿದ ಆಗ್ರಾದ ಸಂಜಯ್ ನೇಗಿ ಮತ್ತು ಸಿಂಗಪೂರ್‌ನ ಐ ಪಿಂಗ್ ಯೋ(Ai Ping Yeo)

ಬೆಂಗಳೂರು: ಜಗತ್ಪ್ರಸಿದ್ಧ ಆಬ್‌ಸ್ಟಕಲ್ ಕೋರ್ಸ್ ರೇಸ್ ಮುಂದಾಳು ಸಂಸ್ಥೆಯಾದ ಸ್ಪಾರ್ಟಾನ್ ರೇಸ್‌ನ ಭಾರತೀಯ ಶಾಖೆಯಾದ ಟಿವಿಎಸ್ ಅಪಾಚಿ ಸ್ಪಾರ್ಟಾನ್, ಬೆಂಗಳೂರಿನ ಎಂಬೆಸಿ ಇಂಟರ್‌ನ್ಯಾಶನಲ್ ರೈಡಿಂಗ್ ಸ್ಕೂಲ್‌ನಲ್ಲಿ ಭಾರತದ ಪ್ರಪ್ರಥಮ ರೇಸ್ ಪ್ರಾರಂಭಿಸಿತು. 2,000 ಕ್ಕಿಂತ ಹೆಚ್ಚಿನ ಭಾಗೀದಾರರು ಈ ರೇಸ್‌ನಲ್ಲಿ ಭಾಗವಹಿಸಿದ್ದರು. ಸಿಂಗಪೂರ್, ಯುಎಸ್‌ಎ, ಡೆನ್ಮಾರ್ಕ್, ಗ್ರೇಟ್ ಬ್ರಿಟನ್, ದಿ ಫಿಲಿಪೀನ್ಸ್, ಇಟಲಿ, ಮೆಕ್ಸಿಕೊ ಒಳಗೊಂಡಂತೆ 12 ವಿವಿಧ ರಾಷ್ಟ್ರಗಳಿಂದ ಭಾಗೀದಾರರು ರೇಸ್‌ನಲ್ಲಿ ಪಾಲ್ಗೊಂಡು ಇದನ್ನು ನಿಜವಾಗಿಯೂ ಒಂದು ಜಾಗತಿಕ ಮಾರ್ಯಕ್ರಮವನ್ನಾಗಿ ಮಾಡಿದರು.

ಟಿವಿಎಸ್ ಅಪಾಚಿ ಸ್ಪಾರ್ಟಾನ್ ರೇಸ್ ಬೆಳಿಗ್ಗೆ 7 ಘಂಟೆಗೆ ಆರಂಭವಾದ ರೇಸ್, ನೀರು ಮತ್ತು ಮಣ್ಣು ತುಂಬಿದ ಕಠಿಣವಾದ ಆಫ್-ರೋಡ್ ಉದ್ದಕ್ಕೂ 20 ಸವಾಲೊಡ್ಡುವ ಅಡೆತಡೆಗಳನ್ನು(ಆಬ್‌ಸ್ಟಕಲ್ಸ್) ಒಳಗೊಂಡಿತ್ತು. ಹೊಸ ಭಾಗೀದಾರರು ಹಾಗೂ ಅನುಭವಿ ಫಿಟ್ನೆಸ್ ಉತ್ಸಾಹಿಗಳಿಬ್ಬರಿಗೂ ಸೂಕ್ತವಾಗಿರುವಂತೆ ರೇಸ್ ಮೂರು ವರ್ಗಗಳನ್ನು ಹೊಂದಿತ್ತು: ಸ್ಪರ್ಧಾತ್ಮಕ, ಕಾರ್ಪೊರೇಟ್ ಮತ್ತು ಮುಕ್ತ ವರ್ಗ-ಎಲ್ಲರೂ ಕೋರ್ಸ್ ಹಾದು ತಮ್ಮ ಬಲಾಬಲಗಳನ್ನು ಸಾಬೀತುಪಡಿಸಬೇಕಾಗಿತ್ತು.

ಪುರುಷರ ಸ್ಪರ್ಧಾತ್ಮಕ ವರ್ಗದಲ್ಲಿ ಆಗ್ರಾದ ಸಂಜಯ್ ನೇಗಿ ಅವರು, 25:25 ದಲ್ಲಿ ರೇಸ್ ಪೂರ್ಣಗೊಳಿಸಿ ಪ್ರಥಮ ಸ್ಥಾನ ಗಳಿಸಿದರೆ, ಇವರ ನಂತರ ಬೆಂಗಳೂರಿನ ಯಧು ಕೃಷ್ಣನ್ ಎಮ್ ಹಾಗೂ ಚೆನ್ನೈನ ಎಬಿ ವಿಕ್ಟರ್ 29:49 ಮತ್ತು 31:09 ಸಮಯದಲ್ಲಿ ರೇಸ್ ಪೂರ್ಣಗೊಳಿಸಿ ಕ್ರಮವಾಗಿ, ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

TVS

ಮಹಿಳೆಯರ ಸ್ಪರ್ಧಾತ್ಮಕ ವರ್ಗದಲ್ಲಿ ಸಿಂಗಪೂರ್‌ನ ಐ ಪಿಂಗ್ ಯೋ ಅಗ್ರಸ್ಥಾನ ಗಳಿಸಿ 37:24 ದಲ್ಲಿ ರೇಸ್ ಪೂರ್ಣಗೊಳಿಸಿದರೆ, ದೆಹಲಿಯ ಏಕ್ತಾ ರಾವತ್ 38:36 ದಲ್ಲೂ ಮತ್ತು ಯುಎಸ್‌ಎದ ಮಿಸ್ಟಿ ಮೊಕ್ರೊಸ್ 39:26 ಸಮಯದಲ್ಲಿ ರೇಸ್ ಪೂರ್ಣಗೊಳಿಸಿ ಕ್ರಮವಾಗಿ, ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ಸ್ಪರ್ಧಾತ್ಮಕ ವರ್ಗದ ವಿಜೇತರು, ಪುರುಷರು ಹಾಗೂ ಮಹಿಳೆಯರ ವರ್ಗಗಳೆರಡಲ್ಲೂ, ಮೊದಲ ಮೂರು ಅಂತಿಮ ಸ್ಪರ್ಧಿಗಳಿಗಾಗಿ ಇರುವ ನಗದು ಬಹುಮಾನಗಳೊಂದಿಗೆ ಟಿವಿಎಸ್ ಅಪಾಚಿ RTR 200 ಬೈಕ್‌ಗಳನ್ನು ಸ್ವೀಕರಿಸಿದರು. ಟಿವಿಎಸ್ ಅಪಾಚಿ ಸ್ಪಾರ್ಟಾನ್ ಒಂದು ಪ್ರಮುಖ ಕ್ಷಣದಲ್ಲಿ ಆರಂಭಗೊಳ್ಳುತ್ತಿದೆ, ಏಕೆಂದರೆ, ಆಬ್ಸ್‌ಸ್ಟಕಲ್ ರೇಸಿಂಗ್‌ಅನ್ನು ಇತ್ತೀಚೆಗಷ್ಟೇ 2028 ಲಾಸ್ ಏಂಜೆಲಿಸ್ ಒಲಿಂಪಿಕ್ಸ್‌ಗೆ ಅನುಮೋದಿಸಲಾಗಿತ್ತು.

ಪ್ರಾರಂಭೋತ್ಸವ ರೇಸ್ ಬಗ್ಗೆ ಮಾತನಾಡುತ್ತಾ, ಟಿವಿಎಸ್ ಅಪಾಚಿ ಸ್ಪಾರ್ಟಾನ್ ರೇಸ್‌ಅನ್ನು ಭಾರತಕ್ಕೆ ಪರಿಚಯಿಸುತ್ತಿರುವ ಪಿಎಮ್‌ಜಿ ಸ್ಪೋರ್ಟ್ಸ್‌ನ ಸಿಇಒ ಮಲ್ರಾಯ್ ಡಿಸೂಜಾ, “ಈ ಪ್ರಪ್ರಥಮ ರೇಸ್‌ಗೆ ದೊರೆತಿರುವ ಪ್ರತಿಕ್ರಿಯೆ ಯಾವ ಉತ್ಸಾಹಕ್ಕೂ ಕಡಿಮೆ ಇಲ್ಲ. ಬೆಂಗಳೂರಿನ ಫಿಟ್ನೆಸ್ ಸಮುದಾಯವು ಬಹಳ ಸಕ್ರಿಯವಾಗಿದ್ದು, ನಾವು ಬೃಹತ್ ಸಂಖ್ಯೆಗಳಲ್ಲಿ ಭಾಗವಹಿಸುವಿಕೆ ನೋಡಿದೆವು. ಆಬ್‌ಸ್ಟಕಲ್ ರೇಸ್, ಸ್ಪೋರ್ಟ್ಸ್ ಮತ್ತು ಫಿಟ್ನೆಸ್ ಉತ್ಸಾಹಿಗಳು ತಮ್ಮ ದೈಹಿಕ ಸಾಮರ್ಥ್ಯಗಳಿಗೆ ಸವಾಲೊಡ್ಡುವ ವಿಶಿಷ್ಟ ವಿಧಾನ ಒದಗಿಸುತ್ತದೆ. ಅಥ್ಲೀಟ್‌ಗಳು, ಫಿಟ್ನೆಸ್ ಉತ್ಸಾಹಿಗಳು, ಕಾರ್ಪೊರೇಟ್ ತಂಡಗಳು ಮತ್ತು ಸಾಮಾನ್ಯ ಜನತೆಯ ಸಂಘಟಿತ ಶಕ್ತಿಯ ಇದರ ಒಟ್ಟಾರೆ ಅನುಭವವನ್ನು ವರ್ಧಿಸಿತ್ತು. ಭಾರತದಲ್ಲಿ ಸ್ಪಾರ್ಟಾನ್ ರೇಸ್‌ಅನ್ನು ಪರಿಚಯಿಸುತ್ತಿರುವುದು ನಮಗೆ ಗೌರವದ ವಿಷಯವಾಗಿದೆ.” ಎಂದರು.

ಈ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ, ಟಿವಿಎಸ್ ಮೋಟಾರ್ ಕಂಪನಿಯ ಪ್ರೀಮಿಯಮ್ ಬಿಜಿನೆಸ್ ವಿಭಾಗದ ಮುಖ್ಯಸ್ಥ ವಿಮಲ್ ಸಂಬ್ಲಿ, “ಬೆಂಗಳೂರಿನಲ್ಲಿ ಭಾರತದ ಪ್ರಪ್ರಥಮ ಸ್ಪಾರ್ಟಾನ್ ರೇಸ್‌ಅನ್ನು ನೋಡುವುದೇ ಒಂದು ಉತ್ಸಾಹ. ಶೀರ್ಷಿಕೆ ಪ್ರಾಯೋಜಕರಾಗಿ ನಾವು, ಈ ಉನ್ನತ-ಶಕ್ತಿಯ, ಜಾಗತಿಕ ಪರಿಕಲ್ಪನೆಯನ್ನು ಭಾರತಕ್ಕೆ ತರುತ್ತಿರುವುದಕ್ಕೆ ಸಂತೋಷಿಸುತ್ತೇವೆ. ಟಿವಿಎಸ್ ಅಪಾಚಿ ಸೀರೀಸ್, ಜಾಗತಿಕವಾಗಿ ಕಾರ್ಯಕ್ಷಮತೆ ಹಾಗೂ ಆವಿಷ್ಕಾರಕ್ಕೆ ಹೆಸರುವಾಸಿಯಾದ ಬ್ರ್ಯಾಂಡ್‌ಗಳ ಪೈಕಿ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಮ್ ಮೋಟಾರುಸೈಕಲ್ ಬ್ರ್ಯಾಂಡ್ಗಳಲ್ಲಿ ಒಂದಾಗಿದೆ. ಈ ಕೌತುಕಮಯವಾದ ಪಯಣದ ಮುನ್ನೆಲೆಯಲ್ಲಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ಎಲ್ಲಾ ಭಾಗೀದಾರರನ್ನೂ ನಾವು ಶ್ಲಾಘಿಸುತ್ತೇವೆ ಮತ್ತು ತಮ್ಮ ಅಮೋಘ ಚೈತನ್ಯ ಹಾಗೂ ದೃಢತೆಗಾಗಿ ವರ್ಗ ವಿಜೇತರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ.” ಎಂದು ಹೇಳಿದರು.

TVS

ಸ್ಪಾರ್ಟಾನ್ ರೇಸ್ ಇನ್‌ಕ್‌ನ ಎಪಿಎಸಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಹರ್ಷ್ ವೀರ್ ಸಿಂಗ್ ಸಲೂಜ ತಮ್ಮ ಮಾತುಗಳನ್ನು ಸೇರಿಸುತ್ತಾ, “ಭಾರತಕ್ಕೆ ಸ್ಪಾರ್ಟಾನ್ ರೇಸ್ ತರುತ್ತಿರುವುದಕ್ಕೆ ನಮಗೆ ಅತ್ಯಂತ ಉತ್ಸಾಹವೆನಿಸುತ್ತಿದೆ. ದೇಶಾದ್ಯಂತದ ಜನರು ತಮಗೇ ಸ್ವತಃ ಸವಾಲೊಡ್ಡಿಕೊಂಡು ಅವರು ಯಾವುದು ಅಸಾಧ್ಯವೆಂದುಕೊಂಡರೋ ಅದನ್ನು ಸಾಧಿಸುವುದಕ್ಕೆ ಒಂದು ಪ್ರೇರಣೆಯ ವೇದಿಕೆಯನ್ನು ಇದು ಒದಗಿಸುತ್ತದೆ. ಭಾರತದ ಬೆಳೆಯುತ್ತಿರುವ ಫಿಟ್ನೆಸ್ ಚಳುವಳಿಯಲ್ಲಿ ಜನರನ್ನು ಒಗ್ಗೂಡಿಸಿ ಸಮುದಾಯದ ಪ್ರಬಲ ಭಾವನೆಯನ್ನು ನಿರ್ಮಾಣ ಮಾಡುವಲ್ಲಿ ಸ್ಪಾರ್ಟಾನ್ ರೇಸ್‌ಗಳು ದೊಡ್ಡ ಪಾತ್ರ ವಹಿಸಲಿವೆ.” ಎಂದರು. ಟಿವಿಎಸ್ ಅಪಾಚಿ ಸ್ಪಾರ್ಟಾನ್ ರೇಸ್‌ಗಳ ಉಳಿದ ರೇಸ್‌ಗಳು ಪುಣೆಯಲ್ಲಿ ಡಿಸಂಬರ್ 2024ನಲ್ಲಿ ಮತ್ತು ನೋಯ್ಡಾದಲ್ಲಿ ಮಾರ್ಚ್ 2025ದಲ್ಲಿ ನಡೆಯಲು ಸಜ್ಜಾಗಿವೆ.

ಸ್ಪಾರ್ಟಾನ್ ಗ್ಲೋಬಲ್ ಕುರಿತು: ಸ್ಪಾರ್ಟಾನ್, ಆರು ಖಂಡಗಳಲ್ಲಿ ೪೦ಕ್ಕಿಂತ ಹೆಚ್ಚಿನ ದೇಶಗಳಾದ್ಯಂತ ೨೫೦ಕ್ಕಿಂತ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಿಕೊಡುವ ಜಗತ್ತಿನ ಅತಿದೊಡ್ಡ ಆಬ್‍೬ಸ್ಟಕಲ್ ಕೋರ್ಸ್ ರೇಸ್ (OCR) ಮತ್ತು ಸಹಿಷ್ಣುತೆ ಬ್ರ್ಯಾಂಡ್ ಆಗಿದೆ. ಕ್ರೀಡೆಗಳ ಮೂಲಕ ಪರಿವರ್ತನೆ ಒದಗಿಸುತ್ತಾ, ಸ್ಪಾರ್ಟಾನ್ ಪ್ರಾರಂಭಿಸುವವರಿಂದ ಹಿಡಿದು ಎಲೈಟ್‌ವರೆಗೆ ಎಲ್ಲಾ ಫಿಟ್ನೆಸ್ ಮಟ್ಟಗಳಾದ್ಯಂತ ಒಂದು ದಶಲಕ್ಷಕ್ಕಿಂತ ಹೆಚ್ಚಿನ ಭಾಗೀದಾರರನ್ನು ಆಕರ್ಷಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಭೇಟಿ ನೀಡಿ https://www.spartan.com/

ಪಿಎಮ್‌ಜಿ ಸ್ಪೋರ್ಟ್ಸ್(PMG Sports) ಕುರಿತು: ಪಿಎಮ್‌ಜಿ ಸ್ಪೋರ್ಟ್ಸ್, ಭಾರತದ ಮುಂಚೂಣಿ ಸ್ಪೋರ್ಟ್ಸ್ ಮಾರುಕಟ್ಟೆ ಸಂಸ್ಥೆಯಾಗಿದೆ. ಸಮಾಲೋಚನೆ, ಪ್ರಾಯೋಜಕತ್ವ, ಬ್ರ್ಯಾಂಡ್ ರಾಯಭಾರಗಳು, ಕಂಟೆಂಟ್ ರಚನೆ ಹಾಗೂ ಐಪಿಗಳ ಪರಿಕಲ್ಪನೆ ಹಾಗೂ ಅನುಷ್ಠಾನ ಮುಂತಾದ ಐದು ಸಮಾನಾಂತರ ವರ್ಗಗಳಾದ್ಯಂತ ಅದು ಕಾರ್ಯ ನಿರ್ವಹಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net