

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 2-1ರಿಂದ ಮುನ್ನಡೆ ಸಾಧಿಸಿದ್ದು, ಭಾರತದ ಪಾಲಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಬಹುತೇಕ ಮುಚ್ಚಿದೆ. ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 295ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಉತ್ತಮ ಆರಂಭ ಪಡೆದಿದ್ದ ಭಾರತ ತಂಡವು (Team India) ಸರಣಿಯಲ್ಲಿ ಹಿಡಿತ ಸಾಧಿಸುವ ಮುನ್ಸೂಚನೆಯನ್ನು ನೀಡಿತ್ತು. ಆದರೆ, ಅಂದುಕೊಂಡಂತೆ ಯಾವುದೇ ನಡೆಯದ ಪರಿಣಾಮ ಹೀನಾಯವಾಗಿ ಸೋಲುಂಡಿದ್ದು, ತೀವ್ರ ಮುಖಭಂಗವನ್ನು ಅನುಭವಿಸಿದೆ.
ಹಾಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border-Gavaskar Trophy) ಮೊದಲ ಪಂದ್ಯ ಹೊರತುಪಡಿಸಿದರೆ ಉಳಿದ ಮ್ಯಾಚ್ಗಳಲ್ಲಿ ಭಾರತದ (Team India) ಬ್ಯಾಟರ್ಗಳು ಹೇಳಿಕೊಳ್ಳುವಂತಹ ಪ್ರದರ್ಶವನ್ನು ನೀಡಿಲ್ಲ. ಬೌಲಿಂಗ್ ವಿಚಾರಕ್ಕೆ ಬರುವುದಾದರೆ ಬುಮ್ರಾಗೆ ಸಮರ್ಥವಾಗಿ ಉಳಿದ ಬೌಲರ್ಗಳು ಸಾಥ್ ನೀಡುತ್ತಿಲ್ಲ. ಈ ಎಲ್ಲಾ ವಿಚಾರಗಳು ಆಡಳಿತ ಮಂಡಳಿಯ ನಿದ್ದೆ ಕೆಡಿಸಿರುವ ನಡುವೆಯೇ ತಂಡಕ್ಕೆ ಅನುಭವಗಳ ಅವಶ್ಯಕತೆ ಬಗ್ಗೆ ಕ್ರೀಡಾ ಪಂಡಿತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುವ ನಡುವೆಯೇ ಟೀಮ್ ಇಂಡಿಯಾ (Team India) ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ (Boxing Day Test) ಭಾರತದ ಸೋಲಿಗೆ ಕಾರಣವಾದ ಅಂಶವನ್ನು ಉಲ್ಲೇಖಿಸಿದ್ದು, ಈ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ (Ravi Shastri), ನನ್ನ ಪ್ರಕಾರ ರಿಷಭ್ ಪಂತ್ (Rishabh Pant) ಔಟಾಗಿದ್ದು, ಪಂದ್ಯದ ಟರ್ನಿಂಗ್ ಪಾಯಿಂಟ್ ಎಂದು ಹೇಳಲು ಬಯಸುತ್ತೇನೆ. ಮೂರು ವಿಕೆಟ್ ಕಳೆದುಕೊಂಡ ನಂತರ ಲಂಚ್ಬ್ರೇಕ್ ವೇಳೆಗೆ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅವರಿಗೆ (Team India) ತಿಳಿದಿತ್ತು. ರೋಹಿತ್ ಹೇಳಿದಂತೆ ಒಂದು ಪ್ಲಾಟ್ಫಾರ್ಮ್ ಸೆಟ್ ಇದ್ದರೆ ಮಾತ್ರ ನಿಮಗೆ ಗೆಲ್ಲುವ ಅವಕಾಶವಿದೆ. ತದನಂತರ, ರಿಷಬ್ ಪಂತ್ ಚಹಾ ಮುಗಿಸಿ ಹೊರಬಂದಾಗ, ಅದು ಆಸ್ಟ್ರೇಲಿಯನ್ನರನ್ನು ಮೇಲಕ್ಕೆತ್ತಿತು. ಆಸ್ಟ್ರೇಲಿಯಾದವರು ಅದರ ಲಾಭ ಪಡೆದು ಗೆಲುವಿನ ನಗೆ ಬೀರಿದರು ಎಂದು ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತದ ಸೋಲಿಗೆ ಕಾರಣವಾದ ಅಂಶವನ್ನು ಉಲ್ಲೇಖಿಸಿದ್ದಾರೆ.
ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar) ಟೆಸ್ಟ್ ಸರಣಿಯೂ ನವೆಂಬರ್ 22, 2024ರಂದು ಆರಂಭವಾಗಿದ್ದು, ಜನವರಿ 7, 2025ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.