

ನಾಟಿಂಗ್‌ಹ್ಯಾಮ್:ಆರಂಭಿಕ ಟ್ರಾವಿಸ್ ಹೆಡ್ (154* ರನ್, 129 ಎಸೆತ, 20 ಬೌಂಡರಿ, 5 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 1-0 ರಿಂದ ಮುನ್ನಡೆ ಸಾಧಿಸಿರುವ ವಿಶ್ವಚಾಂಪಿಯನ್ನರು ಏಕದಿನ ಕ್ರಿಕೆಟ್‌ನಲ್ಲಿ ಅಜೇಯ ಓಟವನ್ನು 13ನೇ ಪಂದ್ಯಕ್ಕೆ ವಿಸ್ತರಿಸಿದೆ.
ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್, ಆರಂಭಿಕ ಬೆನ್ ಡಕೆಟ್ (95 ರನ್, 91 ಎಸೆತ, 11 ಬೌಂಡರಿ) ಹಾಗೂ ವಿಲ್ ಜಾಕ್ಸ್ (62 ರನ್, 56 ಎಸೆತ, 5 ಬೌಂಡರಿ, 2 ಸಿಕ್ಸರ್) ಜತೆಯಾಟದ ನೆರವಿನಿಂದ 49.4 ಓವರ್‌ಗಳಲ್ಲಿ 315 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಟ್ರಾವಿಸ್ ಹೆಡ್ ಹಾಗೂ ಮಾರ್ನಸ್ ಲಬುಶೇನ್ (77* ರನ್, 61 ಎಸೆತ, 7 ಬೌಂಡರಿ, 2 ಸಿಕ್ಸರ್) ದಿಟ್ಟ ಜತೆಯಾಟದ ಬಲದಿಂದ 44 ಓವರ್‌ಗಳಲ್ಲಿ 3 ವಿಕೆಟ್‌ಗೆ 317 ರನ್‌ಗಳಿಸಿ ಜಯದ ನಗೆ ಬೀರಿತು. ಟ್ರಾವಿಸ್ ಹೆಡ್ ಏಕದಿನ ಕ್ರಿಕೆಟ್‌ನಲ್ಲಿ ಆರನೇ ಶತಕ ಸಿಡಿಸಿದರು. ಸ್ಪಿನ್ನರ್ ಆಡಂ ಜಂಪಾ ನೂರನೇ ಏಕದಿನ ಪಂದ್ಯವನ್ನಾಡುವ ಮೂಲಕ ಒಂದೂ ಟೆಸ್ಟ್ ಆಡದೆ ಈ ಸಾಧನೆ ಮಾಡಿದ ಮೊದಲ ಆಸೀಸ್ ಆಟಗಾರ ಎನಿಸಿದರು.
ಇಂಗ್ಲೆಂಡ್: 49.4 ಓವರ್‌ಗಳಲ್ಲಿ 315 (ಸಾಲ್ಟ್ 17, ಡಕೆಟ್ 95, ಜಾಕ್ಸ್ 62, ಬ್ರೂಕ್ 39, ಜೆಮಿ ಸ್ಮಿತ್ 23, ಬೆತೆಲ್ 35, ಲಬುಶೇನ್ 39ಕ್ಕೆ 3, ಜಂಪಾ 49ಕ್ಕೆ 3).
ಆಸ್ಟ್ರೇಲಿಯಾ: 44 ಓವರ್‌ಗಳಲ್ಲಿ 3 ವಿಕೆಟ್‌ಗೆ 317 (ಮಿಚೆಲ್ 10, ಹೆಡ್ 154*, ಸ್ಮಿತ್ 32, ಗ್ರೀನ್ 32, ಲಬುಶೇನ್ 77*, ಬೆತೆಲ್ 20ಕ್ಕೆ 1). ಪಂದ್ಯಶ್ರೇಷ್ಠ: ಟ್ರಾವಿಸ್ ಹೆಡ್.