Paris Olympic: ಭಾರತದ ಮಹಿಳಾ ಬಾಕ್ಸರ್​ಗಳಿಗೆ ಕಷ್ಟಕರ ಹಾದಿ; ಪುರುಷರ ವಿಭಾಗದಲ್ಲಿ ಸುಲಭ ಸವಾಲು

web boxing
Published on

ಪ್ಯಾರಿಸ್​: ವಿಶ್ವ ಚಾಂಪಿಯನ್​ಷಿಪ್​ ಪದಕ ವಿಜೇತೆ ನಿಖತ್​ ಜರೀನ್​ ಮತ್ತು ಟೋಕಿಯೊ ಗೇಮ್ಸ್​ ಕಂಚು ವಿಜೇತೆ ಲವ್ಲಿನಾ ಬೋಗೋರ್ಹೈನ್​ ಒಲಿಂಪಿಕ್ಸ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಕಠಿಣ ಡ್ರಾ ಪಡೆದಿದ್ದಾರೆ. ಇದರಿಂದಾಗಿ ಪದಕದ ಕನಸು ನನಸಾಗಿಸಲು ಇವರಿಬ್ಬರು ಕಷ್ಟಕರ ಹಾದಿಯಲ್ಲಿ ಸಾಗಬೇಕಾದ ಸವಾಲು ಎದುರಿಸಿದ್ದಾರೆ. ಪುರುಷರ ವಿಭಾಗದಲ್ಲಿ ನಿಶಾಂತ್​ ದೇವ್​ ಮತ್ತು ಅಮಿತ್​ ಪಾಂಗಲ್​ ಸುಲಭ ಡ್ರಾ ಪಡೆದಿದ್ದಾರೆ.

ಒಲಿಂಪಿಕ್ಸ್​ನಲ್ಲಿ ಇದುವರೆಗೆ ಭಾರತದ ಮೂವರು ಬಾಕ್ಸರ್​ಗಳು ಕಂಚಿನ ಪದಕ ಜಯಿಸಿದ್ದಾರೆ. ಅವರೆಂದರೆ ವಿಜೇಂದರ್​ ಸಿಂಗ್​ (2008), ಮೇರಿ ಕೋಮ್​ (2012) ಮತ್ತು ಲವ್ಲಿನಾ (2021). ಈ ಬಾರಿ ಭಾರತದ 6 ಬಾಕ್ಸರ್​ಗಳು ಕಣದಲ್ಲಿದ್ದು, ಪದಕದ ಬಣ್ಣ ಬದಲಾಯಿಸುವ ನಿರೀಕ್ಷೆ ಇದೆ.

ಮಹಿಳೆಯರ 50 ಕೆಜಿ ವಿಭಾಗದಲ್ಲಿ 28 ವರ್ಷದ ಜರೀನ್​ ಜರ್ಮನಿಯ ಮ್ಯಾಕ್ಸಿ ಕ್ಲೋಟ್ಜೆರ್​ ಎದುರು ಭಾನುವಾರ ಮೊದಲ ಪಂದ್ಯ ಆಡಲಿದ್ದಾರೆ. ಬೆನ್ನಲ್ಲೇ ಏಷ್ಯನ್​ ಗೇಮ್ಸ್​ ಅಗ್ರ ಶ್ರೇಯಾಂಕಿತೆ ಹಾಗೂ ಹಾಲಿ ಚಾಂಪಿಯನ್​ ಚೀನಾದ ವು ಯು ವಿರುದ್ಧ ಆಡುವ ಸವಾಲು ಹೊಂದಿದ್ದಾರೆ. ಈ ಸುತ್ತು ದಾಟಿದರೆ ಏಷ್ಯನ್​ ಗೇಮ್ಸ್​ ರಜತ ವಿಜೇತೆ ಥಾಯ್ಲೆಂಡ್​ನ ಚುತಮತ್​ ರಕ್ಸತ್​ ಸವಾಲು ಎದುರಾಗಲಿದೆ. ಇವೆರಡು ಸವಾಲು ಗೆದ್ದರೆ ಅವರು ಚಿನ್ನ ಗೆಲ್ಲುವ ೇವರಿಟ್​ ಎನಿಸಲಿದ್ದಾರೆ.

ಟೋಕಿಯೊದಲ್ಲಿ 69 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿದ್ದ ಅಸ್ಸಾಂ ಬಾಕ್ಸರ್​ ಲವ್ಲಿನಾ ಈ ಬಾರಿ 75 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯಲಿದ್ದು, ಮೊದಲ ಸುತ್ತಿನಲ್ಲಿ ನಾರ್ವೆಯ ಸುನ್ನಿವಾ ಹೋಪ್ಸ್​ಟಡ್​ ವಿರುದ್ಧ ಆಡಲಿದ್ದಾರೆ. ಕ್ವಾರ್ಟರ್​ೈನಲ್​ನಲ್ಲಿ ಹಾಲಿ ಏಷ್ಯಾಡ್​ ಚಾಂಪಿಯನ್​, 2 ಬಾರಿಯ ಒಲಿಂಪಿಕ್ಸ್​ ಮತ್ತು ವಿಶ್ವ ಚಾಂಪಿಯನ್​ಷಿಪ್​ ಪದಕ ವಿಜೇತೆ ಚೀನಾದ ಲಿ ಕ್ವಿಯಾನ್​ ವಿರುದ್ಧ ಆಡುವ ಕಠಿಣ ಸವಾಲಿದೆ.

ಏಷ್ಯನ್​ ಗೇಮ್ಸ್​ ಕಂಚು ವಿಜೇತೆ ಪ್ರೀತಿ ಪನ್ವರ್​ (54 ಕೆಜಿ) ಶನಿವಾರವ ಭಾರತದ ಬಾಕ್ಸಿಂಗ್​ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಮೊದಲ ಸುತ್ತಿನಲ್ಲಿ ವಿಯೇಟ್ನಾಂನ ವೊ ಥಿ ಕಿಮ್​ ಅನ್ಹ ವಿರುದ್ಧ ಸೆಣಸಲಿದ್ದಾರೆ. ಜಾಸ್ಮಿನ್​ ಲಂಬೋರಿಯಾ (57 ಕೆಜಿ) ಭಾರತೀಯ ಬಾಕ್ಸರ್​ಗಳಲ್ಲೇ ಅತ್ಯಂತ ಕಠಿಣ ಡ್ರಾ ಪಡೆದಿದ್ದಾರೆ. ಜಾಸ್ಮಿನ್​ಗೆ ಮೊದಲ ಸುತ್ತಿನಲ್ಲೇ ಟೋಕಿಯೊ ಗೇಮ್ಸ್​ ರಜತ ವಿಜೇತೆ ಹಾಗೂ ಮಾಜಿ ವಿಶ್ವ ಚಾಂಪಿಯನ್​ ಫಿಲಿಪ್ಪಿನ್ಸ್​ನ ನೆಸ್ಥಿ ಪೆಟೆಸಿಯೊ ಸವಾಲು ಎದುರಾಗಲಿದೆ.

ಅಮಿತ್​, ನಿಶಾಂತ್​ಗೆ ಬೈ

ಪುರುಷರ ವಿಭಾಗದಲ್ಲಿ ಅಮಿತ್​ ಪಾಂಗಲ್​ (51 ಕೆಜಿ) ಮತ್ತು ನಿಶಾಂತ್​ ದೇವ್​ (71 ಕೆಜಿ) ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಇವರಿಬ್ಬರು ನೇರವಾಗಿ 16ರ ಟ್ಟದಲ್ಲಿ ಕಣಕ್ಕಿಳಿಯಲಿದ್ದಾರೆ. ಅಮಿತ್​ಗೆ ಆಫ್ರಿಕನ್​ ಗೇಮ್ಸ್​ ಚಾಂಪಿಯನ್​ ಜಂಬಿಯಾದ ಪ್ಯಾಟ್ರಿಕ್​ ಚಿನ್ಯೆಂಬಾ ಮೊದಲ ಸವಾಲಾಗಿದ್ದಾರೆ. ಇವರೆದುರು ಅಮಿತ್​ ಕಳೆದ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಗೆದ್ದಿದ್ದರು. ನಿಶಾಂತ್​ ಮೊದಲ ಪಂದ್ಯದಲ್ಲಿ ಈಕ್ವೆಡಾರ್​ನ ರೋಡ್ರಿಗಸ್​ ಟೆನೊರಿಯೊ ವಿರುದ್ಧ ಆಡಲಿದ್ದಾರೆ. ನಿಶಾಂತ್​ ಸೆಮೀಸ್​ ತನಕ ಭಾರತೀಯ ಬಾಕ್ಸರ್​ಗಳಲ್ಲೇ ಸುಲಭ ಡ್ರಾ ಪಡೆದಿದ್ದಾರೆ. ಸೆಮೀಸ್​ನಲ್ಲಿ ಅವರಿಗೆ ಅಗ್ರ ಶ್ರೇಯಾಂಕಿತ ಜಪಾನ್​ನ ಒಕಜವ ಸವಾಲು ಎದುರಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net