ಡರ್ಜಾ ಸೆಮೆನಿಸ್ಟಾಜಾಗೆ ಬೆಂಗಳೂರು ಐಟಿಎಫ್ ಟೂರ್ನಿಯಲ್ಲಿ ಡಬಲ್ ಪ್ರಶಸ್ತಿ ಸಂಭ್ರಮ

New-Project-13-1
Published on

ಬೆಂಗಳೂರು: ಅಗ್ರ ಶ್ರೇಯಾಂಕಿತೆ ಡರ್ಜಾ ಸೆಮೆನಿಸ್ಟಾಜಾ ಬೆಂಗಳೂರು ಐಟಿಎ್ ಮಹಿಳಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟವೇರಿದರು. ಶನಿವಾರವಷ್ಟೇ ಡಬಲ್ಸ್ ವಿಭಾಗದಲ್ಲೂ ಪ್ರಶಸ್ತಿ ಜಯಿಸಿದ್ದ 21 ವರ್ಷದ ಡರ್ಜಾ ಡಬಲ್ ಸಂಭ್ರಮ ಕಂಡರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಅಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಲಾತ್ವಿಯಾದ ಡರ್ಜಾ ಮೊದಲ ಸೆಟ್ ಅನ್ನು 6-1ರಿಂದ ವಶಪಡಿಸಿಕೊಂಡು ಫ್ರಾನ್ಸ್ನ ಕರೊಲೆ ಮೊನೆಟ್ ಎದುರು ಮೇಲುಗೈ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಡರ್ಜಾ 3-0 ಮುನ್ನಡೆಯಲ್ಲಿದ್ದಾಗ ಎದುರಾಳಿ ಮೊನೆಟ್ ಬೆನ್ನು ನೋವಿನಿಂದಾಗಿ ಪಂದ್ಯ ತ್ಯಜಿಸಿದರು. ಡರ್ಜಾಗೆ ಇದು ವೃತ್ತಿಜೀವನದ 15ನೇ ಐಟಿಎ್ ಪ್ರಶಸ್ತಿಯಾಗಿದೆ. ಜತೆಗೆ 50 ಡಬ್ಲುೃಟಿಎ ಅಂಕ ಹಾಗೂ 5 ಲಕ್ಷ ರೂ. ಬಹುಮಾನ ಮೊತ್ತ ಪಡೆದರು. ಸೆಮೀಸ್‌ನಲ್ಲಿ ಭಾರತದ ಋತುಜಾ ಬೋಸಲೆ ಎದುರು ಗೆಲುವು ದಾಖಲಿಸಿದ್ದ ಕರೊಲೆ ಮೊನೆಟ್ ರನ್ನರ್ ಅಪ್ ಟ್ರೋಫಿಯೊಂದಿಗೆ ₹ 2 ಲಕ್ಷ 70 ಸಾವಿರ ಹಾಗೂ 33 ಡಬ್ಲುೃಟಿಎ ಅಂಕಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net