

ಮೆಲ್ಬೋರ್ನ್: ಐಪಿಎಲ್ ಹರಾಜಿನಲ್ಲಿ 1.5 ಕೋಟಿ ರೂ. ಮೌಲ್ಯಕ್ಕೆ ಆರ್ಸಿಬಿ ತಂಡ ಸೇರಿರುವ ಇಂಗ್ಲೆಂಡ್ ಆಲ್ರೌಂಡರ್ ಟಾಮ್ ಕರನ್ಗೆ ಆಸ್ಟ್ರೆಲಿಯಾದ ಬಿಗ್ ಬಾಷ್ ಲೀಗ್ನಲ್ಲಿ 4 ಪಂದ್ಯ ನಿಷೇಧ ಹೇರಲಾಗಿದೆ.
ಸಿಡ್ನಿ ಸಿಕ್ಸರ್ ಆಟಗಾರರಾಗಿರುವ ಟಾಮ್, ಹೋರ್ಬಟ್ ಹರಿಕೇನ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಪಿಚ್ ಮೇಲೆ ಓಡಿದ್ದಕ್ಕಾಗಿ ಈ ಶಿಕ್ಷೆಗೆ ಗುರಿಯಾಗಿದ್ದಾರೆ. ಬೌಲಿಂಗ್ ಲೈನ್ ಅಪ್ ಅಭ್ಯಾಸ ನಡೆಸುತ್ತಿದ್ದ ಟಾಮ್ಗೆ ಅಂಪೈರ್ ಎಚ್ಚರಿಕೆ ನೀಡಿದರೂ, ಅವರ ಮಾತು ಕೇಳದೆ ಪಿಚ್ ಮೇಲೆ ಓಡಿದ್ದರು.
ಇಂಗ್ಲೆಂಡ್ ಯುವ ಆಲ್ರೌಂಡರ್ ಸ್ಯಾಮ್ ಕರ್ರನ್ ಅವರ ಅಣ್ಣನಾಗಿರುವ ಟಾಮ್ ಕರ್ರನ್, ಅಂಪೈರ್ ಎಚ್ಚರಿಕೆಯನ್ನು ಲೆಕ್ಕಿಸದೆ ಕ್ರಿಕೆಟ್ ನಿಯಮವನ್ನು ಮೀರಿರುವುದು ವ್ಯಾಪಕ ಟೀಕೆಗೂ ಗುರಿಯಾಗಿದೆ. ಕೆಲ ಕ್ರಿಕೆಟ್ ಪ್ರೇಮಿಗಳು ಈ ಶಿಕ್ಷೆ ಕಡಿಮೆಯಾಯಿತು ಎಂದೂ ವಾದಿಸಿದ್ದಾರೆ.