ಟೋಕಿಯೋ ಒಲಿಂಪಿಕ್ಸ್​ಗೆ ಮುಹೂರ್ತ ಫಿಕ್ಸ್​, 2021ರ ಜುಲೈ 23ರಿಂದ ಆಗಸ್ಟ್​ 8ವರೆಗೆ ಕ್ರೀಡಾಕೂಟ

tokyo
Published on

ಟೋಕಿಯೋ: ಕೋವಿಡ್​ 19 ಪಿಡುಗಿನ ಹಿನ್ನೆಲೆಯಲ್ಲಿ ಮುಂದೂಲ್ಪಟ್ಟಿರುವ ಟೋಕಿಯೋ ಒಲಿಂಪಿಕ್ಸ್​ ನಿಖರವಾಗಿ ಒಂದು ವರ್ಷ ತಡವಾಗಿ ಆರಂಭವಾಗಲಿದೆ.

ಸೋಮವಾರ ಈ ಬಗ್ಗೆ ಮಾಹಿತಿ ನೀಡಿರುವ ಟೋಕಿಯೋ ಒಲಿಂಪಿಕ್ಸ್​ ಸಂಟನಾ ಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ ಮತ್ತು ಸಿಇಒ ಟೋಶಿರೋ ಮೊಟೋ 2021ರ ಜುಲೈ 23ರಿಂದ ಆಗಸ್ಟ್​ 8ವರೆಗೆ ಕ್ರೀಡಾಕೂಟ ನಡೆಯಲಿದೆ ಎಂದು ಹೇಳಿದ್ದಾರೆ.

ಈ ಹಿಂದೆ ನಿಗದಿಯಾಗಿದ್ದಂತೆ ಟೋಕಿಯೋ ಒಲಿಂಪಿಕ್ಸ್​ 2020ರ ಜುಲೈ 24ಕ್ಕೆ ಆರಂಭವಾಗಿ ಆಗಸ್ಟ್​ 9ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಜಗತ್ತಿನಾದ್ಯಂತ ಕರೊನಾ ಪಿಡುಗು ಹಬ್ಬಿರುವ ಹಿನ್ನೆಲೆಯಲ್ಲಿ ಕ್ರೀಡಾಕೂಟವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿ ಬಂದಿತ್ತು.

ಈ ಹಿಂದೆ ಕ್ರೀಡಾಕೂಟವನ್ನು ಬೇಸಿಗೆಯ ಬದಲು ಜಪಾನ್​ನ ವಸಂತಕಾಲದಲ್ಲಿ ಆಯೋಜಿಸುವ ಬಗ್ಗೆ ಚಿಂತನೆ ನಡೆದಿತ್ತು. ಆಗ ಜಪಾನ್​ನಲ್ಲಿ ಚೆರ್ರಿ ಹಣ್ಣು ಕಟಾವಿಗೆ ಬಂದಿರುತ್ತದೆ ಎಂಬುದು ಇದಕ್ಕೆ ಕಾರಣವಾಗಿತ್ತು. ಆದರೆ ಯುರೋಪಿಯನ್​ ಸಕರ್​ ಮತ್ತು ನಾರ್ತ್​ ಅಮೆರಿಕನ್​ ಸ್ಪೋರ್ಟ್ಸ್​ನ ದಿನಾಂಕದೊಂದಿಗೆ ತಾಕಲಾಟ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೇಸಿಗೆಯಲ್ಲೇ ಕ್ರೀಡಾಕೂಟ ಆಯೋಜಿಸುವ ಬಗ್ಗೆ ನಿರ್ಧರಿಸಲಾಯಿತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net