

ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಸ್ಪರ್ಧೆಯಲ್ಲಿ ಮೊದಲ ದಿನವೇ ಪದಕ ಜಯಿಸಿದ ಬಳಿಕ ಸತತ 3 ದಿನಗಳಲ್ಲಿ ನಿರಾಸೆ ಅನುಭವಿಸಿರುವ ಭಾರತ ತಂಡ ಕ್ರೀಡಾಸ್ಪರ್ಧೆಯ 5ನೇ ದಿನವೂ ಯಾವುದೇ ಪದಕ ನಿರೀಕ್ಷೆ ಹೊಂದಿಲ್ಲ. ಭಾರತಕ್ಕೆ ಬುಧವಾರವೇ ಪದಕ ಖಚಿತವಾಗುವಂಥ ಯಾವುದೇ ಸ್ಪರ್ಧೆಗಳಿಲ್ಲ. ಆದರೆ ಸ್ವರ್ಣ ಪದಕದ ಪ್ರಮುಖ ಆಕಾಂಕ್ಷಿ ಹಾಗೂ ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಬುಧವಾರ 2ನೇ ಪಂದ್ಯವಾಡಲಿದ್ದಾರೆ. ಬಾಕ್ಸಿಂಗ್, ಆರ್ಚರಿಯಲ್ಲೂ ಭಾರತೀಯರು ಪದಕದಾಸೆ ಜೀವಂತವಿಡಲು ಹೋರಾಡಲಿದ್ದಾರೆ.
ಇಂದು ಭಾರತದ ಕ್ರೀಡಾಸ್ಪರ್ಧೆಗಳು:
ಬ್ಯಾಡ್ಮಿಂಟನ್: ಬೆಳಗ್ಗೆ 7.30: ಮಹಿಳಾ ಸಿಂಗಲ್ಸ್ ಜೆ ಗುಂಪು: ಪಿವಿ ಸಿಂಧುಗೆ ಹಾಂಕಾಂಗ್‌ನ ಚೆಯುಂಗ್ ಎನ್‌ಗನ್ ಯಿ ಎದುರಾಳಿ, ಮಧ್ಯಾಹ್ನ 2.30: ಪುರುಷರ ಡಿ ಗುಂಪು: ಸಾಯಿ ಪ್ರಣೀತ್‌ಗೆ ನೆದರ್ಲೆಂಡ್ಸ್‌ನ ಮಾರ್ಕ್ ಕಲ್ಜೊವ್ ಎದುರಾಳಿ.
ಆರ್ಚರಿ: ಪುರುಷರ ವಿಭಾಗ: ಬೆಳಗ್ಗೆ 7.30: ತರುಣ್‌ದೀಪ್ ರೈಗೆ 32ರ ಘಟ್ಟದಲ್ಲಿ ಉಕ್ರೇನ್‌ನ ಒಲೆಕ್ಸಿ ಹನ್‌ಬಿನ್ ಎದುರಾಳಿ, ಅತನು ದಾಸ್‌ಗೆ ಚೀನಾ ತೈಪೆಯ ಡೆಂಗ್ ಯು-ಚೆಂಗ್ ಎದುರಾಳಿ, ಮಧ್ಯಾಹ್ನ 12.30: ಪ್ರವೀಣ್ ಜಾಧವ್‌ಗೆ 32ರ ಘಟ್ಟದಲ್ಲಿ ರಷ್ಯಾದ ಗಲ್ಸನ್ ಬಜರ್ಜಾಪೋವ್ ಎದುರಾಳಿ; ಮಹಿಳಾ ವಿಭಾಗ: ಮಧ್ಯಾಹ್ನ 2.15: ದೀಪಿಕಾ ಕುಮಾರಿಗೆ 32ರ ಘಟ್ಟದಲ್ಲಿ ಭೂತಾನ್‌ನ ಕರ್ಮಾ ಎದುರಾಳಿ.
ಬಾಕ್ಸಿಂಗ್: ಮಧ್ಯಾಹ್ನ 2.33: ಮಹಿಳೆಯರ 75ಕೆಜಿ ವಿಭಾಗ: ಪೂಜಾ ರಾಣಿಗೆ 16ರ ಘಟ್ಟದಲ್ಲಿ ಅಲ್ಜೀರಿಯಾದ ಇಕ್ರಕ್ ಚೈಬ್ ಎದುರಾಳಿ.
ಹಾಕಿ: ಬೆಳಗ್ಗೆ 6.30: ಮಹಿಳೆಯರ ವಿಭಾಗದಲ್ಲಿ ಬ್ರಿಟನ್ ಎದುರಾಳಿ.
ರೋಯಿಂಗ್: ಬೆಳಗ್ಗೆ 8: ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್ ಸೆಮಿಫೈನಲ್ಸ್: ಅರ್ಜುನ್ ಲಾಲ್-ಅರವಿಂದ್ ಸಿಂಗ್ ಸ್ಪರ್ಧೆ.
ಸೈಲಿಂಗ್: ಬೆಳಗ್ಗೆ 8.45: 49ಇಆರ್ ವಿಭಾಗ: 4-5-6ನೇ ರೇಸ್: ಕೆಸಿ ಗಣಪತಿ, ವರುಣ್ ಠಕ್ಕರ್ ಕಣಕ್ಕೆ.
*25: ಕ್ರೀಡಾಸ್ಪರ್ಧೆಯ 5ನೇ ದಿನವಾದ ಬುಧವಾರ ಒಟ್ಟು 25 ಸ್ವರ್ಣ ಪದಕಗಳು ಪಣಕ್ಕಿವೆ. ರೋಯಿಂಗ್‌ನಲ್ಲಿ 6, ಈಜಿನಲ್ಲಿ 5, ಜುಡೋ, 3/3 ಬಾಸ್ಕೆಟ್‌ಬಾಲ್, ರೋಡ್ ಸೈಕ್ಲಿಂಗ್, ಸರ್ಫಿಂಗ್‌ನಲ್ಲಿ ತಲಾ 2, ಫೆನ್ಸಿಂಗ್, ಈಕ್ವೆಸ್ಟ್ರಿಯನ್, ರಗ್ಬಿ ಸೆವೆನ್ಸ್, ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್, ಡೈವಿಂಗ್, ವೇಟ್‌ಲಿಫ್ಟಿಂಗ್‌ನಲ್ಲಿ ತಲಾ 1 ಚಿನ್ನದ ಪದಕ ನಿರ್ಧಾರವಾಗಲಿದೆ.