

ಅಹಮದಾಬಾದ್: ದಿಟ್ಟ ನಿರ್ವಹಣೆಯ ಹೊರತಾಗಿಯೂ ಆರ್ಸಿಬಿ ವಿರುದ್ಧ ಕೇವಲ 1 ರನ್ನಿಂದ ಸೋಲು ಕಂಡು ನಿರಾಸೆ ಅನುಭವಿಸಿದ ಹಾಲಿ ರನ್ನರ್ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಐಪಿಎಲ್&14ರಲ್ಲಿ ಗುರುವಾರದ 2ನೇ ಪಂದ್ಯದಲ್ಲಿ ಕೋಲ್ಕತ ನೈಟ್ರೈಡರ್ಸ್ ತಂಡದ ಸವಾಲು ಎದುರಾಗಲಿದೆ. ಅಸ್ಥಿರ ಬ್ಯಾಟಿಂಗ್ ನಿರ್ವಹಣೆಯ ನಡುವೆಯೂ ಕಳೆದ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳಿರುವ ಇವೊಯಿನ್ ಮಾರ್ಗನ್ ಪಡೆ ಇದೀಗ ಅದನ್ನು ಉಳಿಸಿಕೊಳ್ಳುವ ಹಂಬಲದಲ್ಲಿದೆ. ಹ್ಯಾಟ್ರಿಕ್ ಗೆಲುವಿನ ಲಯದಲ್ಲಿದ್ದ ಡೆಲ್ಲಿ ತಂಡ ಆರ್ಸಿಬಿ ವಿರುದ್ಧದ ಕಳೆದ ಪಂದ್ಯದಲ್ಲಿ ವೀರೋಚಿತವಾಗಿ ಸೋಲು ಕಂಡಿದ್ದರೆ, ಕೆಕೆಆರ್ ತಂಡ ಸತತ 4 ಸೋಲಿನ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಗೆಲುವಿನ ಹಳಿಗೇರಿದೆ. ಡೆಲ್ಲಿ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಉತ್ತಮ ಾಮ್ರ್ನಲ್ಲೇ ಇದ್ದರೆ, ಕೆಕೆಆರ್ ತಂಡ ಇದಕ್ಕೆ ವ್ಯತಿರಿಕ್ತವಾಗಿ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಸೋತಿದೆ.
ಕೆಕೆಆರ್ಗೆ ಆರಂಭದ್ದೇ ಸಮಸ್ಯೆ
ಸುನೀಲ್ ನಾರಾಯಣ್ ಮತ್ತು ವರುಣ್ ಚಕ್ರವತಿರ್ ಸ್ಪಿನ್ ಬಲದಿಂದ ಕಳೆದ ಪಂದ್ಯದಲ್ಲಿ ಪಂಜಾಬ್ ತಂಡದ ಬಲಿಷ್ಠ ಬ್ಯಾಟಿಂಗ್ಗೆ ಕಡಿವಾಣ ಹಾಕಿರುವ ಕೆಕೆಆರ್ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಚಿಂತೆಯಾಗಿದೆ. ಶುಭಮಾನ್ ಗಿಲ್ ಆಡಿದ 6 ಪಂದ್ಯಗಳಲ್ಲಿ 89 ರನ್ ಮಾತ್ರ ಗಳಿಸಿದ್ದಾರೆ. ಪಂಜಾಬ್ ವಿರುದ್ಧ 124 ರನ್ ಬೆನ್ನಟ್ಟುವ ಯತ್ನದಲ್ಲಿ 17 ರನ್ಗೆ 3 ವಿಕೆಟ್ ಕಳೆದುಕೊಂಡಿತ್ತು. ಬಳಿಕ ನಾಯಕ ಮಾರ್ಗನ್ ಸಾಹಸದಿಂದ ಗೆಲುವಿನ ದಡ ಸೇರುವಲ್ಲಿ ಸಫಲವಾಗಿತ್ತು. ಇದೀಗ ರಬಾಡ, ಆವೇಶ್ ಖಾನ್, ಇಶಾಂತ್ ಶರ್ಮ, ಅರ್ ಪಟೇಲ್ ಮತ್ತು ಅಮಿತ್ ಮಿಶ್ರಾ ಒಳಗೊಂಡ ಡೆಲ್ಲಿ ತಂಡ ಬಲಿಷ್ಠ ಬೌಲಿಂಗ್ ವಿಭಾಗದ ಎದುರು ಕೆಕೆಆರ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಸತ್ವಪರೀಕ್ಷೆ ಎದುರಾಗಲಿದೆ.
ಡೆಲ್ಲಿ ಬ್ಯಾಟಿಂಗ್ ಬಲಿಷ್ಠ
ಆರ್ಸಿಬಿ ವಿರುದ್ಧದ ರೋಚಕ ಸೋಲಿನ ಹೊರತಾಗಿಯೂ ಡೆಲ್ಲಿ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಶಿಖರ್ ಧವನ್, ಪೃಥ್ವಿ ಷಾ, ಸ್ಟೀವನ್ ಸ್ಮಿತ್, ನಾಯಕ ರಿಷಭ್ ಪಂತ್ ಜತೆಗೆ ಕಳೆದ ಪಂದ್ಯದಲ್ಲಿ ಶಿಮ್ರೋನ್ ಹೆಟ್ಮೆಯರ್ ಕೂಡ ಕಳೆದ ಪಂದ್ಯದಲ್ಲಿ ಬಿರುಸಿನ ಆಟವಾಡಿದ್ದರು. ಯುವ ವೇಗಿ ಆವೇಶ್ ಖಾನ್ 6 ಪಂದ್ಯಗಳಲ್ಲಿ 12 ವಿಕೆಟ್ ಕಬಳಿಸಿ ಡೆಲ್ಲಿ ತಂಡದ ಬೌಲಿಂಗ್ ಬಲ ಹೆಚ್ಚಿಸಿದ್ದಾರೆ. ಕರೊನಾದಿಂದ ಚೇತರಿಸಿಕೊಂಡ ಆಲ್ರೌಂಡರ್ ಅರ್ ಪಟೇಲ್ ಸೇರ್ಪಡೆಯೂ ತಂಡದ ಸಂಯೋಜನೆಯನ್ನು ಬಲಿಷ್ಠಗೊಳಿಸಿದೆ. ಆದರೆ ಮಾರ್ಕಸ್ ಸ್ಟೋಯಿನಿಸ್ ಈ ಬಾರಿ ಕಳೆದ ಆವೃತ್ತಿಯ ಗೆಲುವಿನ ಆಟವನ್ನು ಇನ್ನೂ ಪ್ರದಶಿರ್ಸದಿರುವುದು ಮಾತ್ರ ಡೆಲ್ಲಿಗೆ ಹಿನ್ನಡೆಯಾಗಿದೆ. ಪ್ರಮುಖವಾಗಿ ಬೌಲಿಂಗ್ನಲ್ಲಿ ಸ್ಟೋಯಿನಿಸ್ ಇನ್ನೂ ಪರಿಣಾಮಕಾರಿ ಎನಿಸಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್: ಆರ್ಸಿಬಿ ವಿರುದ್ಧದ ಸೋಲಿನ ಹೊರತಾಗಿಯೂ ತಂಡದ ಸಂಯೋಜನೆ ಬದಲಾಗುವ ಸಾಧ್ಯತೆ ಕಡಿಮೆ. ಟೂನಿರ್ಯಿಂದ ಹಿಂದೆ ಸರಿದ ಸ್ಪಿನ್ನರ್ ಆರ್. ಅಶ್ವಿನ್ ಸ್ಥಾನವನ್ನು ವೇಗಿ ಇಶಾಂತ್ ಶರ್ಮ ಸಮರ್ಥವಾಗಿಯೇ ತುಂಬಿದ್ದಾರೆ.
ಕಳೆದ ಪಂದ್ಯ: ಆರ್ಸಿಬಿ ವಿರುದ್ಧ 1 ರನ್ ಸೋಲು.
ಕೋಲ್ಕತ ನೈಟ್ರೈಡರ್ಸ್: ದಿಗ್ಗಜ ಸುನೀಲ್ ಗಾವಸ್ಕರ್ ಅವರು, ಸುನೀಲ್ ನಾರಾಯಣ್ ಅವರು ರಾಹುಲ್ ತ್ರಿಪಾಠಿ ಜತೆಗೆ ಇನಿಂಗ್ಸ್ ಆರಂಭಿಸಬೇಕು ಮತ್ತು ಶುಭಮಾನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕೆಂದು ಸಲಹೆ ನೀಡಿದ್ದಾರೆ. ಇದನ್ನು ಕೆಕೆಆರ್ ತಂಡ ಸ್ವೀಕರಿಸುವುದೇ ಎಂಬುದನ್ನು ಕಾದುನೋಡಬೇಕಿದೆ.
ಕಳೆದ ಪಂದ್ಯ: ಪಂಜಾಬ್ ಕಿಂಗ್ಸ್ ವಿರುದ್ಧ 5 ವಿಕೆಟ್ ಜಯ.
ಮುಖಾಮುಖಿ: 25
ಡೆಲ್ಲಿ: 11
ಕೆಕೆಆರ್: 14
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್