ಇಂದು ಏಕದಿನ ವಿಶ್ವಕಪ್​ ಮಹಾಸಮರ: ಭಾರತಕ್ಕೆ 3ರ ಕನಸು; ಆಸೀಸ್​ಗೆ 6ರ ತವಕ

World Cup
Published on

ಅಹಮದಾಬಾದ್: ತವರಿನ ವಿಶ್ವಕಪ್​ನಲ್ಲಿ ಸರ್ವಾಂಗೀಣ ನಿರ್ವಹಣೆ ಮೆರೆದು ಸತತ 10 ಪಂದ್ಯಗಳಲ್ಲಿ ವಿಜಯದುಂದುಭಿ ಮೊಳಗಿಸಿರುವ ಭಾರತ ತಂಡ 3ನೇ ಬಾರಿ ಏಕದಿನ ವಿಶ್ವ ಚಾಂಪಿಯನ್ ಪಟ್ಟಕ್ಕೇರಲು ಸಜ್ಜಾಗಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಪ್ರಶಸ್ತಿ ಹೋರಾಟದಲ್ಲಿ ರೋಹಿತ್ ಶರ್ಮ ನಾಯಕತ್ವದ ತಂಡ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿ 140 ಕೋಟಿ ಭಾರತೀಯರ ಕನಸು ನನಸಾಗಿಸುವ ತವಕದಲ್ಲಿದೆ.

ಎಲ್ಲಿ: ನರೇಂದ್ರ ಮೋದಿ ಸ್ಟೇಡಿಯಂ

ಆರಂಭ: ಮಧ್ಯಾಹ್ನ 2.00

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಭಾರತ

* ಐಸಿಸಿ ಏಕದಿನ ರ್ಯಾಂಕ್: 1

ಬಲ

* ಕೊಹ್ಲಿ, ರೋಹಿತ್, ಶ್ರೇಯಸ್, ರಾಹುಲ್ ಭರ್ಜರಿ ಫಾರ್ಮ್​

* ಶಮಿ ವಿಕೆಟ್ ಬೇಟೆ; ಬುಮ್ರಾ, ಕುಲದೀಪ್, ಜಡೇಜಾ ಬಿಗಿದಾಳಿ

* ತವರಿನ ಮೈದಾನ, ಪ್ರೇಕ್ಷಕರ ಬೆಂಬಲದ ಲಾಭ

ದೌರ್ಬಲ್ಯ

* ಆರನೇ ಬೌಲರ್ ಕೊರತೆ; ಹಾರ್ದಿಕ್ ಪಾಂಡ್ಯ ಗೈರಿನ ಹಿನ್ನಡೆ.

* ಸತತ ಜಯದಿಂದ ಅತಿಯಾದ ಆತ್ಮವಿಶ್ವಾಸ ಕಾಡುವ ಭೀತಿ

* ಐಸಿಸಿ ಟೂರ್ನಿಗಳಲ್ಲಿ ಆಸೀಸ್ ವಿರುದ್ಧದ ಕಳಪೆ ದಾಖಲೆ

ಆಸ್ಟ್ರೇಲಿಯಾ

ಐಸಿಸಿ ಏಕದಿನ ರ್ಯಾಂಕ್: 2

ಬಲ

* ಟ್ರಾವಿಸ್ ಹೆಡ್ ಆಲ್ರೌಂಡ್ ಆಟ; ವಾರ್ನರ್, ಮಾರ್ಷ್ ಬ್ಯಾಟಿಂಗ್.

* ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಸ್ಪೋಟಕ ಆಟ.

* ಆಡಂ ಜಂಪಾ ವಿಕೆಟ್ ಬೇಟೆ; ಸ್ಟಾರ್ಕ್, ಹ್ಯಾಸಲ್​ವುಡ್ ಬಿಗಿ ದಾಳಿ.

ದೌರ್ಬಲ್ಯ

* ಜಂಪಾಗೆ ಸೂಕ್ತ ಬೆಂಬಲ ನೀಡುವ ತಜ್ಞ 2ನೇ ಸ್ಪಿನ್ನರ್ ಕೊರತೆ

* ಲೀಗ್ ಹಂತದಲ್ಲಿ ಭಾರತ ತಂಡದ ವಿರುದ್ಧ ಪರಾಭವ

* 11 ಆಟಗಾರರಷ್ಟೇ ಅಲ್ಲ, 1.30 ಲಕ್ಷ ಪ್ರೇಕ್ಷಕರೂ ಎದುರಾಳಿ

ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತೀಯರ ಗೆಲುವನ್ನು ಸಂಭ್ರಮಿಸಲು ನಾನೂ ಎಲ್ಲರಂತೆ ಕಾತರನಾಗಿದ್ದೇನೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್... ಎಲ್ಲ ವಿಭಾಗಗಳಲ್ಲೂ ನಮ್ಮದು ಪರಿಪೂರ್ಣ ತಂಡವಾಗಿರುವುದರಿಂದ ಈ ಬಾರಿಯ ವಿಶ್ವಕಪ್ ಭಾರತದ ಮಡಿಲು ಸೇರುವುದು ನಿಶ್ಚಿತ. | ಸಿದ್ದರಾಮಯ್ಯ ಮುಖ್ಯಮಂತ್ರಿ

ವರ್ಣರಂಜಿತ ಸಮಾರೋಪ

* ಸೂರ್ಯಕಿರಣ್ ಏರ್​ಶೋ

* ಗುಜರಾತಿ ಗಾಯಕ ಆದಿತ್ಯ ಗಾಧಿ್ವ ಸಂಗೀತಸುಧೆ

* ಪ್ರೀತಂ ಚಕ್ರವರ್ತಿ, ಜೋನಿತಾ ಗಾಂಧಿ, ನಕಾಶ್ ಅಜೀಜ್, ತುಷಾರ್ ಜೋಶಿ ಗಾನವೈಭವ

* ಲೇಸರ್-ಲೈಟ್ ಶೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net