ಇಂದು-ನಾಳೆ ಪ್ರೊ ಕಬಡ್ಡಿ ಲೀಗ್​ ಆಟಗಾರರ ಹರಾಜು ಪ್ರಕ್ರಿಯೆ

web pkl
Published on

ಮುಂಬೈ: ಪ್ರೊ ಕಬಡ್ಡಿ ಲೀಗ್​ 11ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ಮತ್ತು ಶುಕ್ರವಾರ ಮುಂಬೈನಲ್ಲಿ ನಡೆಯಲಿದೆ. 500ಕ್ಕೂ ಅಧಿಕ ಆಟಗಾರರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಪ್ರದಿಪ್​ ನರ್ವಾಲ್​, ಪವನ್​ ಸೆಹ್ರಾವತ್​, ಮಣಿಂದರ್​ ಸಿಂಗ್​, ಸಚಿನ್​ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಪ್ರಮುಖ ಆಟಗಾರರಾಗಿದ್ದಾರೆ.

12 ತಂಡಗಳು ಈಗಾಗಲೆ ಒಟ್ಟು 88 ಆಟಗಾರರನ್ನು ರಿಟೇನ್​ ಮಾಡಿಕೊಂಡಿದ್ದು, ಹರಾಜಿನಲ್ಲಿ ಗರಿಷ್ಠ 212 ಆಟಗಾರರ ಖರೀದಿಗೆ ಅವಕಾಶವಿದೆ. ಈ ಪೈಕಿ 22 ಎಲೈಟ್​ ಆಟಗಾರರಾಗಿದ್ದಾರೆ. ಹರಾಜಿನಲ್ಲಿ ಆಟಗಾರರ ಖರೀದಿಗೆ ಪ್ರತಿ ತಂಡ 5 ಕೋಟಿ ರೂ. ಬಜೆಟ್​ ಮಿತಿ ಹೊಂದಿದೆ. ಆಟಗಾರರನ್ನು ಎ, ಬಿ, ಸಿ, ಡಿ ಎಂಬ 4 ಕೆಟಗರಿಯಲ್ಲಿ ವಿಂಗಡಿಸಲಾಗಿದ್ದು, ಕ್ರಮವಾಗಿ 30, 20, 13, 9 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ.

ಆಲ್ರೌಂಡರ್​, ರೈಡರ್​, ಡಿೆಂಡರ್​ಗಳೆಂದು ಪ್ರತ್ಯೇಕ ಪಟ್ಟಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿ ತಂಡ ಕನಿಷ್ಠ 18ರಿಂದ ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದೆ. ಪ್ರತಿ ತಂಡ ಕನಿಷ್ಠ ಇಬ್ಬರು ಮತ್ತು ಗರಿಷ್ಠ ನಾಲ್ವರು ವಿದೇಶಿ ಆಟಗಾರರನ್ನು ಹೊಂದಿರಬೇಕು.

ಹರಾಜು ಪ್ರಕ್ರಿಯೆ ಆರಂಭ: ರಾತ್ರಿ 7.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಡಿಸ್ನಿ+ಹಾಟ್​ಸ್ಟಾರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net