ಇಂದು ಪಂಜಾಬ್​ ಕಿಂಗ್ಸ್​-ಕೋಲ್ಕತ ನೈಟ್​ರೈಡರ್ಸ್​ ಫೈಟ್​; ಮಾಜಿ ತಂಡಕ್ಕೆ ಶ್ರೇಯಸ್​ ಸವಾಲು

web kkr vs pbks
Published on

ಮುಲ್ಲನ್​ಪುರ: ಬೃಹತ್​ ಮೊತ್ತ ಪೇರಿಸಿಯೂ ಅಭಿಷೇಕ್​ ಶರ್ಮ ಬ್ಯಾಟಿಂಗ್​ ಅಬ್ಬರದ ಎದುರು ಮಣಿದಿರುವ ಪಂಜಾಬ್​ ಕಿಂಗ್ಸ್​ ಮತ್ತು ಸಿಎಸ್​ಕೆ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಭರ್ಜರಿ ಗೆಲುವು ದಾಖಲಿಸಿರುವ ಕೋಲ್ಕತ ನೈಟ್​ರೈಡರ್ಸ್​ ತಂಡಗಳು ಐಪಿಎಲ್​ 18ನೇ ಆವೃತ್ತಿಯಲ್ಲಿ ಮಂಗಳವಾರ ಮುಖಾಮುಖಿ ಆಗಲಿವೆ. ಕಳೆದ ವರ್ಷ ಕೆಕೆಆರ್​ ನಾಯಕರಾಗಿ ಚಾಂಪಿಯನ್​ ಪಟ್ಟಕ್ಕೇರಿಸಿದ್ದ ಶ್ರೇಯಸ್​ ಅಯ್ಯರ್​ ಈ ಬಾರಿ ಅದೇ ತಂಡದ ವಿರುದ್ಧ ಪಂಜಾಬ್​ ಕಿಂಗ್ಸ್​ ನಾಯಕರಾಗಿ ಆಡಲಿದ್ದು, ಮಾಜಿ ತಂಡದ ವಿರುದ್ಧ ಅವರ ನಿರ್ವಹಣೆ ಕುತೂಹಲ ಕೆರಳಿಸಿದೆ.

ಅಜಿಂಕ್ಯ ರಹಾನೆ ಪಡೆ ಆಡಿದ 6 ಪಂದ್ಯಗಳಲ್ಲಿ ತಲಾ 3 ಜಯ, ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ, ಪಂಜಾಬ್​ ಕಿಂಗ್ಸ್​ 5 ಪಂದ್ಯಗಳಲ್ಲಿ 3 ಜಯ, 2 ಸೋಲಿನೊಂದಿಗೆ 6ನೇ ಸ್ಥಾನದಲ್ಲಿದೆ. ಉಭಯ ತಂಡಗಳು ತಲಾ 6 ಅಂಕ ಗಳಿಸಿದ್ದರೂ, ರನ್​ರೇಟ್​ ಲೆಕ್ಕಾಚಾರದಲ್ಲಿ ಕೆಕೆಆರ್​ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸುವ ಅವಕಾಶವಿದೆ.

*ಮುಖಾಮುಖಿ: 33

ಪಂಜಾಬ್​: 12

ಕೆಕೆಆರ್​: 21

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​

ಪಂಜಾಬ್​ಗೆ ಬ್ಯಾಟಿಂಗ್​ ಶಕ್ತಿ

ಪಂಜಾಬ್​ ತಂಡ ಟೂರ್ನಿಯಲ್ಲಿ ಇದುವರೆಗೆ 3 ಪಂದ್ಯಗಳಲ್ಲಿ 200 ಪ್ಲಸ್​, ಅದರಲ್ಲೂ 2ರಲ್ಲಿ 240 ಪ್ಲಸ್​ ಮೊತ್ತ ಪೇರಿಸಿದೆ. ಇದು ಪಂಜಾಬ್​ ತಂಡದ ಬ್ಯಾಟಿಂಗ್​ ವಿಭಾಗದ ಶಕ್ತಿಗೆ ಸಾಯಾಗಿದೆ. ಈ ಬಾರಿ ಬಲಿಷ್ಠ ಬೌಲಿಂಗ್​ ವಿಭಾಗವನ್ನು ಹೊಂದಿರುವ ಕೆಕೆಆರ್​ ಎದುರು ಪಂಜಾಬ್​ ಬ್ಯಾಟಿಂಗ್​ ವಿಭಾಗಕ್ಕೆ ಸತ್ವ ಪರೀೆ ಎದುರಾಗಲಿದೆ. ನಾಯಕ ಶ್ರೇಯಸ್​, ಪ್ರಿಯಾಂಶ್​, ಪ್ರಭ್​ಸಿಮ್ರನ್​, ನೇಹಲ್​ ವಧೇರ, ಶಶಾಂಕ್​ ಸಿಂಗ್​, ಸ್ಟೋಯಿನಿಸ್​ ಬ್ಯಾಟಿಂಗ್​ ವಿಭಾಗಕ್ಕೆ ಬಲ ತುಂಬಿದ್ದಾರೆ. ಬೌಲಿಂಗ್​ನಲ್ಲಿ ಕಳೆದ ಪಂದ್ಯದಲ್ಲಿ ಎಡಗೈ ವೇಗಿ ಅರ್ಷದೀಪ್​ ಸಿಂಗ್​ ಒಬ್ಬರೇ ಪ್ರತಿಹೋರಾಟ ನಡೆಸಿದ್ದರು. ಲಾಕಿ ಗ್ಯುರ್ಸನ್​ ಗಾಯ ದೊಡ್ಡ ಹಿನ್ನಡೆಯಾಗಿತ್ತು. ಇದಲ್ಲದೆ ಗ್ಲೆನ್​ ಮ್ಯಾಕ್ಸ್​ವೆಲ್​ ಮತ್ತು ಸ್ಪಿನ್ನರ್​ ಯಜುವೇಂದ್ರ ಚಾಹಲ್​ ವೈಲ್ಯ ಪಂಜಾಬ್​ಗೆ ಹೊಡೆತ ನೀಡುತ್ತಿದೆ. ಮ್ಯಾಕ್ಸ್​ವೆಲ್​ 5 ಪಂದ್ಯಗಳಲ್ಲಿ 34 ರನ್​ ಮಾತ್ರ ಗಳಿಸಿದ್ದರೆ, ಚಾಹಲ್​ ಕೇವಲ ಎರಡೇ ವಿಕೆಟ್​ ಗಳಿಸಿದ್ದಾರೆ.

ವಿಶ್ವಾಸದಲ್ಲಿ ಕೆಕೆಆರ್​

ಅಸ್ಥಿರ ನಿರ್ವಹಣೆಯ ನಡುವೆ ಕಳೆದ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು 103 ರನ್​ಗಳಿಗೆ ಕಟ್ಟಿಹಾಕಿ ಗೆದ್ದಿರುವುದು ಕೆಕೆಆರ್​ ಆತ್ಮವಿಶ್ವಾಸವನ್ನು ವೃದ್ಧಿಸಿದೆ. ಸ್ಪಿನ್ನರ್​ಗಳಾದ ವರುಣ್​ ಚಕ್ರವರ್ತಿ, ಸುನೀಲ್​ ನಾರಾಯಣ್​, ವೇಗಿಗಳಾದ ಹರ್ಷಿತ್​ ರಾಣಾ, ವೈಭವ್​ ಅರೋರ ಪಂಜಾಬ್​ ಬ್ಯಾಟಿಂಗ್​ ವಿಭಾಗವನ್ನು ಕಟ್ಟಿಹಾಕುವ ಸವಾಲು ಹೊಂದಿದ್ದಾರೆ. ಬ್ಯಾಟಿಂಗ್​ನಲ್ಲಿ ಡಿಕಾಕ್​, ನಾರಾಯಣ್​, ರಹಾನೆ, ರುವಂಶಿ, ರಿಂಕು ಸಿಂಗ್​ ಉತ್ತಮ ಲಯದಲ್ಲಿದ್ದಾರೆ. ಆಂಡ್ರೆ ರಸೆಲ್​ ಅವರ ಸ್ಫೋಟಕ ಹೊಡೆತಗಳನ್ನಷ್ಟೇ ಕೆಕೆಆರ್​ ತಂಡ ಸದ್ಯಕ್ಕೆ ಮಿಸ್​ ಮಾಡಿಕೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net