ಇಂದು ಬಿಸಿಸಿಐ ಮಹತ್ವದ ಸಭೆ; ಐಪಿಎಲ್​, ಟಿ20 ವಿಶ್ವಕಪ್​ ಬಗ್ಗೆ ನಿರ್ಧಾರ

ipl wc web
Published on

ಮುಂಬೈ: ಬಿಸಿಸಿಐನ ವಿಶೇಷ ಮಹಾಸಭೆ (ಎಸ್​ಜಿಎಂ) ಶನಿವಾರ ನಡೆಯಲಿದ್ದು, ಐಪಿಎಲ್​ 14ನೇ ಆವೃತ್ತಿಯ 2ನೇ ಭಾಗ ಮತ್ತು ಟಿ20 ವಿಶ್ವಕಪ್​ ಟೂರ್ನಿಯ ಆತಿಥ್ಯದ ಬಗ್ಗೆ ಮಹತ್ವದ ನಿರ್ಧಾರಗಳು ಹೊರಬೀಳುವ ನಿರೀಕ್ಷೆ ಇದೆ. ಜತೆಗೆ ರಣಜಿ ಕ್ರಿಕೆಟಿಗರಿಗೆ ಪರಿಹಾರ ನೀಡುವುದನ್ನು ಸೇರಿದಂತೆ ದೇಶೀಯ ಕ್ರಿಕೆಟ್​ ಬಗ್ಗೆಯೂ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.

ಸೆಪ್ಟೆಂಬರ್​ 15ರಿಂದ ಅಕ್ಟೋಬರ್​ 15ರ ನಡುವೆ ಐಪಿಎಲ್​ ಟೂನಿರ್ಯ ಮುಂದುವರಿದ ಭಾಗವನ್ನು ಆಯೋಜಿಸಲು ಬಿಸಿಸಿಐ ಈಗಾಗಲೆ ಯೋಜನೆ ರೂಪಿಸಿದ್ದು, ಇದಕ್ಕಾಗಿ 3 ವಾರಗಳ ವೇಳಾಪಟ್ಟಿಯನ್ನೂ ಅಂತಿಮಗೊಳಿಸುವ ನಿರೀಕ್ಷೆ ಇದೆ. ಕರೊನಾ ವೈರಸ್​ ಹಾವಳಿಯ ನಡುವೆ ಟಿ20 ವಿಶ್ವಕಪ್​ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ಬಿಸಿಸಿಐ ಒಲವು ತೋರಿದ್ದು, ಜೂನ್​ 1ರಂದು ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ಕುರಿತು ಚರ್ಚೆಗಳು ನಡೆಯಲಿವೆ.

ಸಭೆ ವರ್ಚುವಲ್​ ಮೂಲಕ ನಡೆದರೂ, ಬಿಸಿಸಿಐ ಅಧ್ಯ ಸೌರವ್​ ಗಂಗೂಲಿ ಶನಿವಾರ ಕೋಲ್ಕತದಿಂದ ಮುಂಬೈಗೆ ಆಗಮಿಸಿ ಸಭೆಯ ಅಧ್ಯತೆ ವಹಿಸಲಿದ್ದಾರೆ. ಐಪಿಎಲ್​ ಟೂನಿರ್ಯನ್ನು ಸೆಪ್ಟೆಂಬರ್​ 18 ಅಥವಾ 20ರಂದು ಪುನರಾರಂಭಿಸಿ ಅಕ್ಟೋಬರ್​ 10ರಂದು ಫೈನಲ್​ ನಡೆಸಲು ಮತ್ತು ಯುಎಇಯ ಅಬುಧಾಬಿ, ದುಬೈ, ಶಾರ್ಜಾ ಮೈದಾನಗಳಲ್ಲೇ ಪಂದ್ಯ ನಡೆಸಲು ಬಿಸಿಸಿಐ ಯೋಜಿಸಿದೆ. ಇದರಲ್ಲಿ ಒಟ್ಟು 10 ಡಬಲ್​ ಹೆಡರ್ಸ್​ (ಒಂದೇ ದಿನ 2 ಪಂದ್ಯ) ಇರಲಿದೆ ಎನ್ನಲಾಗಿದೆ.

ಹಾಲಿ ವೇಳಾಪಟ್ಟಿಯ ಅನ್ವಯ ಭಾರತ ತಂಡ ಟಿ20 ವಿಶ್ವಕಪ್​ಗೆ ಮುನ್ನ ದಣ ಆಫ್ರಿಕಾ ಮತ್ತು ನ್ಯೂಜಿಲೆಂಡ್​ ವಿರುದ್ಧ ಸೀಮಿತ ಓವರ್​ ಸರಣಿ ಆಡಬೇಕಾಗಿದೆ. ಆದರೆ ಐಪಿಎಲ್​ ಟೂರ್ನಿಯ ಸಲುವಾಗಿ ಇವೆರಡೂ ಸರಣಿಗಳನ್ನು ಬಿಸಿಸಿಐ ರದ್ದುಗೊಳಿಸುವ ಸಾಧ್ಯತೆ ಇದೆ.

ಕಳೆದ ವರ್ಷ ರಣಜಿ ಟ್ರೋಫಿ ಟೂರ್ನಿ ನಡೆಯದ ಕಾರಣ ಭಾರತದ 700ಕ್ಕೂ ಅಧಿಕ ದೇಶೀಯ ಕ್ರಿಕೆಟಿಗರು ಆಥಿರ್ಕ ನಷ್ಟ ಎದುರಿಸಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಬಿಸಿಸಿಐ ಕಳೆದ ಜನವರಿಯಲ್ಲೇ ಪ್ರಕಟಿಸಿದ್ದರೂ, ಪರಿಹಾರ ಮೊತ್ತದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಬಾರಿಯ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net