ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಟಿಕೆಟ್​ ಮಾರಾಟ ಆರಂಭ

maharaja web
Published on

ಬೆಂಗಳೂರು: ಐಪಿಎಲ್​ ಮಾದರಿಯ ರಾಜ್ಯದ ಚುಟುಕು ಕ್ರಿಕೆಟ್​ ಹಬ್ಬವೆನಿಸಿರುವ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 ಟೂರ್ನಿಯ ಪಂದ್ಯಗಳ ಟಿಕೆಟ್​ ಮಾರಾಟ ಪ್ರಕ್ರಿಯೆ ಆರಂಭಗೊಂಡಿದೆ. ಕನಿಷ್ಠ 150 ರೂ.ನಿಂದ ಗರಿಷ್ಠ ಒಂದು ಸಾವಿರ ರೂ. ಟಿಕೆಟ್​ ಬೆಲೆ ನಿಗದಿಪಡಿಸಲಾಗಿದೆ.

ಟೂರ್ನಿಯ ಮೊದಲ 5 ದಿನಗಳಾದ ಆಗಸ್ಟ್​ 13ರಿಂದ 17ರವರೆಗೆ ಪ್ರತಿ ದಿನ ನಡೆಯುವ ತಲಾ 2 ಪಂದ್ಯಗಳ ಟಿಕೆಟ್​ ಮಾರಾಟ ಈಗಾಗಲೆ ಶುರುವಾಗಿದ್ದು, ಒಂದೇ ಟಿಕೆಟ್​ನಲ್ಲಿ ದಿನದ ಎರಡೂ ಪಂದ್ಯಗಳನ್ನು ವೀಸಬಹುದಾಗಿದೆ. www.insider.in ವೆಬ್​ಸೈಟ್​ನಲ್ಲಿ ಆನ್​ಲೈನ್​ ಟಿಕೆಟ್​ಗಳನ್ನು ಖರೀದಿಸಬಹುದಾಗಿದೆ.

ಒಟ್ಟು 6 ತಂಡಗಳು ಆಡಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಲ್ಬರ್ಗಾ ಮಿಸ್ಟಿಕ್ಸ್​ ಮತ್ತು ರನ್ನರ್​ಅಪ್​ ಬೆಂಗಳೂರು ಬ್ಲಾಸ್ಟರ್ಸ್​ ತಂಡಗಳು ಮುಖಾಮುಖಿ ಆಗಲಿವೆ. ಪಂದ್ಯಗಳು ಸ್ಟಾರ್​ ಸ್ಪೋರ್ಟ್ಸ್​ ಕನ್ನಡ ಚಾನಲ್​ನಲ್ಲಿ ನೇರಪ್ರಸಾರ ಕಾಣಲಿವೆ. ಟೂರ್ನಿಯ ಎಲ್ಲ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿವೆ.

ಟಿಕೆಟ್​ ವಿವರ: ಪಿ ಕಾರ್ಪೋರೇಟ್​: 1,000 ರೂ.; ಪಿ ಟೆರೆಸ್​: 750 ರೂ.; ಎನ್​ ಸ್ಟ್ಯಾಂಡ್​​: 300 ರೂ.; ಸಿ ಲೋವರ್​ ಸ್ಟ್ಯಾಂಡ್​​: 200 ರೂ.; ಪಿ1 ಸ್ಟ್ಯಾಂಡ್​​ (ಯೆಲ್ಲೋ, ರೆಡ್​): 300 ರೂ.; ಡಿ ಕಾರ್ಪೋರೇಟ್​​: 150 ರೂ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net