ದಕ್ಷಿಣ ಆಫ್ರಿಕಾ ವಿರುದ್ಧ ಮಹಿಳೆಯರ ಕ್ರಿಕೆಟ್​ ಸರಣಿಗೆ ಮೂವರು ಕನ್ನಡತಿಯರು ಆಯ್ಕೆ

web women kar
Published on

ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಬೆಂಗಳೂರು ಮತ್ತು ಚೆನ್ನೆ$ನಲ್ಲಿ ನಡೆಯಲಿರುವ ಏಕದಿನ, ಟಿ20 ಮತ್ತು ಟೆಸ್ಟ್​ ಸರಣಿಗೆ ಹರ್ಮಾನ್​ಪ್ರೀತ್​ ಕೌರ್​ ಸಾರಥ್ಯದ ಭಾರತದ ಮಹಿಳಾ ಕ್ರಿಕೆಟ್​ ತಂಡವನ್ನು ಪ್ರಕಟಿಸಲಾಗಿದ್ದು, ಮೂವರು ಕನ್ನಡತಿಯರು ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.

ಆಲ್ರೌಂಡರ್​ ಶ್ರೇಯಾಂಕಾ ಪಾಟೀಲ್​ ಏಕದಿನ ಮತ್ತು ಟಿ20 ತಂಡದಲ್ಲಿದ್ದರೆ, ಅನುಭವಿ ಸ್ಪಿನ್ನರ್​ ರಾಜೇಶ್ವರಿ ಗಾಯಕ್ವಾಡ್​ ಮತ್ತು ಬ್ಯಾಟರ್​ ಶುಭಾ ಸತೀಶ್​ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜೆಮೀಮಾ ರೋಡ್ರಿಗಸ್​ ಮತ್ತು ಪೂಜಾ ವಸ್ತ್ರಾಕರ್​ಗೆ ಮೂರೂ ಮಾದರಿಯ ತಂಡದಲ್ಲಿ ಸ್ಥಾನ ಕಲ್ಪಿಸಿದ್ದರೂ, ಫಿಟ್ನೆಸ್​ ಆಧಾರದಲ್ಲಿ 11ರ ಬಳಗಕ್ಕೆ ಅವರ ಆಯ್ಕೆ ನಡೆಯಲಿದೆ. ಬ್ಯಾಟರ್​ ಪ್ರಿಯಾ ಪೂನಿಯಾ ಏಕದಿನ ತಂಡಕ್ಕೆ ಪುನರಾಗಮನ ಕಂಡಿದ್ದಾರೆ.

ಜೂನ್​ 16, 19, 23ರಂದು ಬೆಂಗಳೂರಿನಲ್ಲಿ 3 ಏಕದಿನ ಪಂದ್ಯಗಳು ನಡೆಯಲಿವೆ. ಬಳಿಕ ಜೂನ್​ 28ರಿಂದ ಜುಲೈ 1ರವರೆಗೆ ಚೆನ್ನೆ$ನಲ್ಲಿ ಏಕೈಕ ಟೆಸ್ಟ್​ ನಡೆಯಲಿದೆ. ಜುಲೈ 5, 7, 9ರಂದು 3 ಟಿ20 ಪಂದ್ಯಗಳೂ ಚೆನ್ನೆ$ನಲ್ಲೇ ನಿಗದಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net