

ನವದೆಹಲಿ: ವೇಗಿ ಜಸ್ಪ್ರೀತ್ ಬುಮ್ರಾ, ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ಆರಂಭಿಕ ಯಶಸ್ವಿ ಜೈಸ್ವಾಲ್ ಸಹಿತ ಭಾರತದ ಮೂವರು ಆಟಗಾರರು ಐಸಿಸಿಯ 2024ರ ಸಾಲಿನ ವರ್ಷದ ಟೆಸ್ಟ್ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಆಸ್ಟ್ರೆಲಿಯಾದ ಪ್ಯಾಟ್ ಕಮ್ಮಿನ್ಸ್ ಈ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಐಸಿಸಿ ವರ್ಷದ ಏಕದಿನ ತಂಡದಲ್ಲಿ ಭಾರತ, ಆಸೀಸ್, ಇಂಗ್ಲೆಂಡ್, ದ. ಆಫ್ರಿಕಾದ ಒಬ್ಬರೂ ಆಟಗಾರರಿಲ್ಲ. ಶ್ರೀಲಂಕಾ (4), ಅಫ್ಘಾನಿಸ್ತಾನ (3), ಪಾಕಿಸ್ತಾನ (3) ಪ್ರಾಬಲ್ಯ ಸಾಧಿಸಿದೆ.
ಐಸಿಸಿ ವರ್ಷದ ಟೆಸ್ಟ್ ತಂಡ: ಜೈಸ್ವಾಲ್, ಬೆನ್ ಡಕೆಟ್, ವಿಲಿಯಮ್ಸನ್, ರೂಟ್, ಹ್ಯಾರಿ ಬ್ರೂಕ್, ಕಮಿಂಡು ಮೆಂಡಿಸ್, ಜೇಮಿ ಸ್ಮಿತ್ (ವಿ.ಕೀ), ಜಡೇಜಾ, ಕಮ್ಮಿನ್ಸ್ (ನಾಯಕ), ಮ್ಯಾಟ್ ಹೆನ್ರಿ, ಬುಮ್ರಾ.
ಮಹಿಳಾ ಏಕದಿನ ತಂಡದಲ್ಲಿ ಭಾರತದ ಸ್ಮೃತಿ, ದೀಪ್ತಿಗೆ ಸ್ಥಾನ
ಐಸಿಸಿ ಪ್ರಕಟಿಸಿರುವ ವರ್ಷದ ಮಹಿಳಾ ಏಕದಿನ ತಂಡದಲ್ಲಿ ಭಾರತದ ಸ್ಮೃತಿ ಮಂದನಾ ಮತ್ತು ದೀಪ್ತಿ ಶರ್ಮ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಲೌರಾ ವೊಲ್ವಾರ್ಡ್ ಈ ತಂಡದ ನಾಯಕಿಯಾಗಿದ್ದಾರೆ.
ವರ್ಷದ ಮಹಿಳಾ ಏಕದಿನ ತಂಡ: ಸ್ಮೃತಿ, ವೊಲ್ವಾರ್ಡ್ (ನಾಯಕಿ), ಚಾಮರಿ ಅಟಪಟ್ಟು, ಹ್ಯಾಲಿ ಮ್ಯಾಥ್ಯೂಸ್, ಮರಿಜಾನ್ ಕಾಪ್, ಗಾರ್ಡ್ನರ್, ಸುದರ್ಲ್ಯಾಂಡ್, ಆಮಿ ಜೋನ್ಸ್ (ವಿ.ಕೀ), ದೀಪ್ತಿ ಶರ್ಮ, ಎಕ್ಲೆಸ್ಟೋನ್, ಕೇಟ್ ಕ್ರಾಸ್.