

ಶಿವಮೊಗ್ಗ: ಸಾಗರದ ಯುವ ಆಟಗಾರನೊಬ್ಬ ಕೇವಲ 165 ಎಸೆತಗಳಲ್ಲಿ ಬರೋಬ್ಬರಿ 407 ರನ್‌ಗಳನ್ನು ಬಾರಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಸರ್ವಕಾಲಿಕ ದಾಖಲೆ ಸೃಷ್ಟಿ ಮಾಡಿದ್ದಾರೆ. 16 ವರ್ಷದೊಳಗಿನ ಈ ಆಟಗಾರ ಒಂದೇ ಪಂದ್ಯದಲ್ಲಿ 48 ಬೌಂಡರಿ ಮತ್ತು 24 ಸಿಕ್ಸರ್ ಸಿಡಿಸಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾನೆ.
ಬೃಹತ್ ಮೊತ್ತ ಬೆನ್ನತ್ತಿದ್ದ ಭದ್ರಾವತಿಯ ಎನ್‌ಟಿಸಿಸಿ ತಂಡ ಕೇವಲ 73 ರನ್‌ಗಳಿಗೆ ಆಲೌಟ್ ಆಗಿದ್ದು 510 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಎ.ಅಂಶು 5 ವಿಕೆಟ್ ಮತ್ತು ಅಜಿತ್ ನಾಲ್ಕು ವಿಕೆಟ್ ಪಡೆದರು.