

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಆವೃತ್ತಿಗೆ ಸದ್ಯ ದಿನಗಣನೆ ಆರಂಭಗೊಂಡಿದ್ದು, ಈ ಬಾರಿ ಅದ್ದೂರಿ ಓಪನಿಂಗ್ ಕಾರ್ಯಕ್ರಮ ಚೆನ್ನೈನ ಚೇಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಕುರಿತು ಈಗಾಗಲೇ ಬಿಸಿಸಿಐ ಅಧಿಕೃತ ಮಾಹಿತಿ ಪ್ರಕಟಿಸಿದ್ದು, ಈ ಸೀಸನ್ನ ಮೊದಲ 21 ದಿನಗಳ ಪಂದ್ಯಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆಗೊಳಿಸಿದೆ.
ಮಾರ್ಚ್ 22ರಂದು ನಡೆಯಲಿರುವ ಐಪಿಎಲ್ 2024ರ ಕಿಕ್ಸ್ಟಾರ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಐದು ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿರುವ ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ಸಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿದೆ. ಮೊದಲ ಪಂದ್ಯದ ಮೂಲಕ ಯಾರು ಈ ಸೀಸನ್ ಶುಭಾರಂಭ ಮಾಡಲಿದ್ದಾರೆ ಎಂಬುದು ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ.
ಒಂದೆಡೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸ್ಟಾರ್ ಆಟಗಾರರು ಕಣಕ್ಕಿಳಿಯುವ ಮೂಲಕ ಭರ್ಜರಿ ಮನರಂಜನೆ ನೀಡಲು ಸಜ್ಜಾದರೆ, ಮತ್ತೊಂದೆಡೆ ಬಹುನಿರೀಕ್ಷಿತ ಆಟಗಾರರೇ ಈ ಸೀಸನ್ನಿಂದ ಹೊರಗುಳಿದಿದ್ದಾರೆ. ಹಾಗಾದ್ರೆ, ಯಾವ ತಂಡದ ಸ್ಟಾರ್ ಕ್ರಿಕಟಿಗ ಐಪಿಎಲ್ ಲೀಗ್ನಿಂದ ಹೊರಗುಳಿದಿದ್ದಾರೆ ಎಂಬುದರ ವಿವರ ಹೀಗಿದೆ ನೋಡಿ.
ಮೊಹಮ್ಮದ್ ಶಮ್ಮಿ: ಗುಜರಾತ್ ಟೈಟನ್ಸ್
ಲುಂಗಿ ಎನ್ಗಿಡಿ: ಡೆಲ್ಲಿ ಕ್ಯಾಪಿಟಲ್ಸ್
ಪ್ರಸಿದ್ಧ್ ಕೃಷ್ಣ: ರಾಜಸ್ಥಾನ ರಾಯಲ್ಸ್
ಮಾರ್ಕ್ ವುಡ್: ಲಕ್ನೋ ಸೂಪರ್ ಜೈಂಟ್ಸ್
ಜೇಸನ್ ರಾಯ್: ಕೊಲ್ಕತ್ತಾ ನೈಟ್ ರೈಡರ್ಸ್
ಗಸ್ ಅಟ್ಕಿನ್ಸನ್: ಕೊಲ್ಕತ್ತಾ ನೈಟ್ ರೈಡರ್ಸ್
ಹ್ಯಾರಿ ಬ್ರೂಕ್: ಡೆಲ್ಲಿ ಕ್ಯಾಪಿಟಲ್ಸ್