CSK ಗೆಲುವಿನ ಬಗ್ಗೆ ಚಿಂತಿಸಲ್ಲ, ಆದ್ರೆ, ಇವರದ್ದು ಮಾತ್ರ ಅದೇ ಸಂಸ್ಕ್ರತಿ! ಮಾಜಿ ಕ್ರಿಕೆಟಿಗ ಅಂಬಟಿ ರಾಯಡು

WhatsApp-Image-2024-04-25-at-5.07.36-PM
Published on

ಐಪಿಎಲ್​ 17ನೇ ಆವೃತ್ತಿ ಪ್ರಾರಂಭವಾದಗಿನಿಂದಲೂ 10 ಬಲಿಷ್ಠ ತಂಡಗಳ ನಡುವೆ ಭರ್ಜರಿ ಪೈಪೋಟಿ ಕಂಡುಬಂದಿದ್ದು, ಪ್ರತಿ ಪಂದ್ಯವೂ ರೋಚಕವಾಗಿ ಮೂಡಿಬರುತ್ತಿದೆ. ಸದ್ಯ ಅಂಕಪಟ್ಟಿಯಲ್ಲಿ ರುತುರಾಜ್ ಗಾಯಕ್ವಾಡ್​ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ಐದನೇ ಸ್ಥಾನವನ್ನು ಅಲಂಕರಿಸಿದ್ದರೆ, ಮತ್ತೊಂದೆಡೆ ಮುಂಬೈ ಇಂಡಿಯನ್ಸ್​ ಸತತ ಸೋಲುಗಳಿಂದ 8ನೇ ಸ್ಥಾನದಲ್ಲಿದೆ.

ಇಡೀ ಐಪಿಎಲ್ ಆವೃತ್ತಿಯಲ್ಲಿ ಎಲ್ಲರ ಕಣ್ಣು ಐದು ಬಾರಿ ಐಪಿಎಲ್ ಚಾಂಪಿಯನ್ಸ್​ ಪಟ್ಟ ಪಡೆದಿರುವ ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳ ಮೇಲಿತ್ತು. ಆದರೆ, ಈ ಎರಡು ಟೀಮ್​ಗಳು ಅದ್ಯಾಕೋ ಸತತ ಸೋಲುಗಳಿಂದ ಮತ್ತು ಯಶಸ್ವಿ ಪ್ರದರ್ಶನ ನೀಡದೆ ಹೀನಾಯ ಸೋಲನ್ನು ಅನುಭವಿಸುತ್ತಿದೆ. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಕೊಂಚ ಗೊಂದಲ ಮೂಡಿಸಿದ್ದೇ ಆದರೂ ಸೋಲಿನ ಹಿಂದಿರುವ ಅಸಲಿ ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಿದ್ದಾರೆ.

ಈ ಎರಡು ಚಾಂಪಿಯನ್ಸ್ ತಂಡಗಳ ಸೋಲಿನ ಬಗ್ಗೆ ಅಚ್ಚರಿ ಸಂಗತಿ ಬಿಚ್ಚಿಟ್ಟ ಮಾಜಿ ಟೀಂ ಇಂಡಿಯಾ ಆಟಗಾರ ಅಂಬಟಿ ರಾಯಡು, ಎಂಐ ಹಾಗೂ ಸಿಎಸ್​ಕೆ ಮಧ್ಯೆ ಇರುವ ಒಂದು ದೊಡ್ಡ ವ್ಯತ್ಯಾಸವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. 2013, 2015 ಮತ್ತು 2017ರಲ್ಲಿ ಮುಂಬೈ ಇಂಡಿಯನ್ಸ್​ನಲ್ಲಿದ್ದು ಚಾಂಪಿಯನ್​ ಆಗಿದ್ದರು. ತದನಂತರ ಚೆನ್ನೈ ತಂಡದಲ್ಲಿ ಅದ್ದೂರಿ ಪ್ರದರ್ಶನ ನೀಡುವ ಮೂಲಕ ಎಲ್ಲರಿಂದ ಅಪಾರ ಮೆಚ್ಚುಗೆ ಗಳಿಸಿದ್ದರು. ಎರಡು ತಂಡಗಳಲಿದ್ದ ಅಂಬಟಿಗೆ, ಅವರ ನ್ಯೂನತೆ ಮತ್ತು ಬಲ ಏನು ಎಂಬುದು ಚೆನ್ನಾಗಿ ಗೊತ್ತಿತ್ತು ಎಂಬುದು ಈ ಹೇಳಿಕೆಯಿಂದ ಸ್ಪಷ್ಟವಾಗಿದೆ.

"ಈ ತಂಡಗಳ ಸಂಸ್ಕೃತಿ ಬಿಡಿಸಿ ಹೇಳುವುದಾದರೆ, ಸಿಎಸ್​ಕೆ ಗೆಲುವಿಗೆ ಏನು ಬೇಕೋ ಅದರ ಬಗ್ಗೆ ಮಾತ್ರ ಹೆಚ್ಚು ಗಮನಹರಿಸುತ್ತದೆ. ಅವರು ಎಂದಿಗೂ ಫಲಿತಾಂಶದ ಕುರಿತು ತಲೆಕೆಡಿಸಿಕೊಳ್ಳಲ್ಲ. ಆದರೆ, ಈ ವಿಷಯದಲ್ಲಿ ಮುಂಬೈ ಇಂಡಿಯನ್ಸ್​ನವರು ಹಾಗಲ್ಲ. ಇವರಿಗೆ ಗೆಲುವು ಬೇಕೇ ಬೇಕು. ಹಾಗಾಗಿ ಗೆಲುವಿನ ಬಗ್ಗೆಯೇ ಹೆಚ್ಚು ಚಿಂತಿಸುತ್ತಾರೆ. ಗೆಲುವೇ ಎಲ್ಲಾ ಎಂಬುದೇ ಅವರ ಸಂಸ್ಕೃತಿ" ಎಂದು ಬಹಿರಂಗವಾಗಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net