ಈ ನಿರ್ಧಾರ ಸರಿಯಿಲ್ಲ... ಕೋಚ್ ಗಂಭೀರ್​-ಕ್ಯಾಪ್ಟನ್ ರೋಹಿತ್​ ವಿರುದ್ಧ ಸುನಿಲ್ ಗವಾಸ್ಕರ್​ ಕೆಂಡಾಮಂಡಲ! | Sunil Gavaskar

Sunil Gavaskar
Published on

ಮುಂಬೈ: ಇಂದು ಪುಣೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್​ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ನಡೆದಿದ್ದು, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಿವೀಸ್​ ಪಡೆ, 259 ರನ್​ ಗಳಿಸಿ ಇದೀಗ ಆಲ್​ಔಟ್ ಆಗಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ನ್ಯೂಜಿಲೆಂಡ್​ ತಂಡವು ಡೆವೊನ್ ಕಾನ್ವೆ (76 ರನ್, 141 ಎಸೆತ, 11 ಬೌಂಡರಿ), ಕನ್ನಡಿಗ ರಚಿನ್​ ರವೀಂದ್ರ (65 ರನ್​, 105 ಎಸೆತ, 5 ಬೌಡಂರಿ, 1ಸಿಕ್ಸರ್​) ಅರ್ಧಶತಕಗಳ ಸಹಾಯದಿಂದ 79.1 ಓವರ್​ನಲ್ಲಿ 259 ರನ್​ ಗಳಿಸಿ ಆಲೌಟ್​ ಆಯಿತು. ಮೊದಲನೇ ಸೆಷನ್​ನಲ್ಲಿ ಉತ್ತಮವಾಗಿ ಬ್ಯಾಟಿಂಗ್​ ಮಾಡಿದ ಕಿವೀಸ್​, ವಾಷಿಂಗ್ಟನ್​ ಸುಂದರ್​ (23.1-4-59-7) ಮತ್ತು ಆರ್​. ಅಶ್ವಿನ್​ (24-2-64-3) ದಾಳಿಗೆ ನೆಲಕಚ್ಚಿತು (Sunil Gavaskar Slams).

ಇವರಿಬ್ಬರ ನಿರ್ಧಾರ ನನಗೆ ಸರಿ ಅನಿಸಲಿಲ್ಲ

ಇನ್ನು ಎರಡನೇ ಟೆಸ್ಟ್​​ ಆರಂಭಕ್ಕೂ ಮುನ್ನ ತಂಡದ ಬೌಲಿಂಗ್ ಲೈನ್​ನಲ್ಲಿ ಕೊಂಚ ಬದಲಾವಣೆ ಮಾಡಿದ ಕ್ಯಾಪ್ಟನ್ ರೋಹಿತ್ ಶರ್ಮ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್​, ಸ್ಪಿನ್ ದಾಳಿಯಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಕುಲದೀಪ್​ ಯಾದವ್​ರನ್ನು ಕೆಳಗಿಳಿಸಿ, ಆ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್​​ ಕರೆತಂದರು. ಕುಲದೀಪ್​ ಬದಲಿಗೆ ಸುಂದರ್​ರನ್ನು ಆಯ್ಕೆ ಮಾಡಿಕೊಂಡ ಗಂಭೀರ್​ ಹಾಗೂ ರೋಹಿತ್​ ನಿರ್ಧಾರವನ್ನು ವಿರೋಧಿಸಿದ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ, ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್​, ಇವರಿಬ್ಬರ ನಿರ್ಧಾರ ನನಗೆ ಸರಿ ಅನಿಸಲಿಲ್ಲ ಎಂದು ಕಿಡಿಕಾರಿದ್ದಾರೆ.

ಒಳ್ಳೆಯ ಬ್ಯಾಟರ್​ ಅದರ ಬಗ್ಗೆ ಮಾತಿಲ್ಲ

"ಕ್ಯಾಪ್ಟನ್ ಹಾಗೂ ಕೋಚ್ ಅವರ ಸುಂದರ್ ಆಯ್ಕೆ ನಿಜಕ್ಕೂ ಚಿಂತಿಸುವಂತದ್ದು. ಕುಲದೀಪ್​ರನ್ನು ಕೆಳಗಿಳಿಸಿ ಸುಂದರ್​ಗೆ ಸ್ಥಾನ ಕೊಡುವಂತ ನಿರ್ಧಾರ ಇಲ್ಲಿ ಬೇಕಿರಲಿಲ್ಲ. ರನ್​ನತ್ತ ಓಡುವವರನ್ನು ಕಟ್ಟಿಹಾಕುವಲ್ಲಿ ಕುಲದೀಪ್​ ಮುಂದಿದ್ದಾರೆ. ಕೇವಲ ಬಾಲ್ ಮಾತ್ರವಲ್ಲ, ತಮ್ಮ ಬ್ಯಾಟ್​ನಿಂದಲೂ ಉತ್ತಮ ಕೊಡುಗೆ ಕೊಡಬಲ್ಲ ಆಟಗಾರ ಯಾದವ್​ ಅವರು. ಹೌದು, ಸುಂದರ್ ಸಹ ಒಳ್ಳೆಯ ಬ್ಯಾಟರ್​ ಅದರ ಬಗ್ಗೆ ಮಾತಿಲ್ಲ. ಆದರೆ, ಕುಲದೀಪ್ ಪಂದ್ಯ ಆಡಬೇಕಿತ್ತು. ವಾಷಿಂಗ್ಟನ್ ಸುಂದರ್​ಗಿಂತ ಅಕ್ಷರ್ ಪಟೇಲ್ ಕೂಡ ಉತ್ತಮ ಆಯ್ಕೆಯಾಗಿದ್ದರು" ಎಂದು ಗವಾಸ್ಕರ್​ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net