ಯಾವುದೇ ಕಾರಣಕ್ಕೂ ಭಾರತ ಗೆಲ್ಲಲ... Champions Trophy ಫೈನಲ್ ಪಂದ್ಯದ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಮಾಜಿ ನಾಯಕ

Team India
Published on

ನವದೆಹಲಿ: ಫೆಬ್ರವರಿ 19ರಂದು ಆರಂಭವಾದ ಚಾಂಪಿಯನ್ಸ್ ಟ್ರೋಫಿಯು (Champions Trophy) ಇಂದು (ಮಾರ್ಚ್ 09) ಅಂತ್ಯವಾಗಲಿದ್ದು, ಫೈನಲ್ ಪಂದ್ಯದಲ್ಲಿ ಭಾರತ ಹಾಗೂನ್ಯೂಜಿಲೆಂಡ್​ ಸೆಣಸಾಡಲಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ ತಂಡ ಪ್ರಥಮ ಸ್ಥಾನದಲ್ಲಿದ್ದು, ಬಹುತೇಕರು ಭಾರತ ಗೆಲ್ಲಲಿ ಎಂದು ಆಶಿಸಿದ್ದಾರೆ. ಆದರೆ, ಭಾರತ ತಂಡವು ಫೈನಲ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಅನಪೇಕ್ಷಿತ ದಾಖಲೆಯನ್ನು ಹೊಂದಿದ್ದು, ಇಂದಿನ ಪಂದ್ಯದಲ್ಲಿ ಗೆದ್ದರೆ ಹೊಸ ಇತಿಹಾಸವನ್ನು ರಚಿಸಲಿದೆ.

ಇಂದಿನ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದರೆ 37 ವರ್ಷಗಳ ಹಳೆಯ ಶಾಪದಿಂದ ವಿವೋಚನೆಗೊಳ್ಳುತ್ತದೆ. ಇದರ ಜೊತೆಗೆ ಹೊಸ ಇತಿಹಾಸವನ್ನು ನಿರ್ಮಿಸುವ ಸುವರ್ಣ ಅವಕಾಶ ಭಾರತ ತಂಡದ ಮುಂದಿದ್ದು, ಟೀಮ್ ಇಂಡಿಯಾ ಗೆಲ್ಲಲಿ ಎಂದು ಅಭಿಮಾನಿಗಳು ಆಶಿಸಿ ದೇವರ ಮೊರೆ ಹೋಗಿದ್ದಾರೆ. ಆದರೆ, ಭಾರತ ತಂಡ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲವೆಂದು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಭವಿಷ್ಯ ನುಡಿದಿದ್ದುಮ ಕಾರಣವನ್ನು ಉಲ್ಲೇಖಿಸಿದ್ದಾರೆ.

Ind VS Nz

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತಾಗಿ ಮಾತನಾಡಿರುವ ನಾಸರ್ ಹುಸೇನ್, ಅವರು ಯಾವುದೇ ಕಾರಣಕ್ಕೂ ನ್ಯೂಜಿಲೆಂಡ್ ಸೋಲುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆರನ್ ಫಿಂಚ್ ಮನೆಯಲ್ಲಿ ನಡೆದ ಔತಣಕೂಟದಲ್ಲೂ ಎಲ್ಲರೂ ಇದರ ಬಗ್ಗೆಯೇ ಮಾತನಾಡಿದ್ದೆವು. ಅಲ್ಲಿ ಬಂದಿದ್ದ ಬಹುತೇಕರು ನ್ಯೂಜಿಲೆಂಡ್ ಗೆಲ್ಲುತ್ತದೆ ಎಂದು ಹೇಳಿದರು. ಈ ಮೂಲಕ ನ್ಯೂಜಿಲೆಂಡ್​ ತಂಡವು ಇಂದಿನ ಫೈನಲ್ ಪಂದ್ಯದಲ್ಲಿ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಲಿದೆ.

ನ್ಯೂಜಿಲೆಂಡ್ ತಂಡದ ಪ್ರದರ್ಶನ ನೋಡುವುದಾದರೆ ಟೂರ್ನಿಯುದ್ಧಕ್ಕೂ ಆಟಗಾರರು ಉತ್ತಮ ಪ್ರದರ್ಶನವನ್ನು ನೀಡಿದ್ದು, ಈ ಕಾರಣಕ್ಕಾಗಿಯೇ ಅವರು ಫೈನಲ್ ಅಥವಾ ಸೆಮಿಫೈನಲ್​ ಪ್ರವೇಶಿಸುತ್ತಾರೆ. ಆಟಗಾರರ ನಡುವೆ ಉತ್ತಮ ಹೊಂದಾಣಿಕೆಯಿದ್ದು, ನನ್ನ ಪ್ರಕಾರ ನ್ಯೂಜಿಲೆಂಡ್ ತಂಡದ ಗೆಲುವು ಫಿಕ್ಸ್ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಸರ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ನ್ಯೂಜಿಲೆಂಡ್ ಮತ್ತು ಭಾರತ ತಮ್ಮ ಕೊನೆಯ ಗ್ರೂಪ್ ಎ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಭಾರತ ನೀಡಿದ್ದ 249 ರನ್​ಗಳ ಗುರಿಯನ್ನು ಬೆನ್ನಟ್ಟುವಲ್ಲಿ ನ್ಯೂಜಿಲೆಂಡ್ ತಂಡವು ವಿಫಲವಾಗಿತ್ತು. ಇದೀಗ ಈ ಎರಡು ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದು, ಟಾಸ್​ ಮೇಲೆ ಸಂಪೂರ್ಣ ಪಂದ್ಯದ ದಿಕ್ಕು ನಿಂತುಕೊಂಡಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net