ಪ್ರೀತಿಯಿಂದ ಕಾಲೂ ಎನ್ನುತ್ತಿದ್ದರು! ಕ್ಷಮೆಯಾಚನೆಯ ಬೇಡಿಕೆ ಕೈಬಿಟ್ಟ ಡರೇನ್ ಸ್ಯಾಮ್ಮಿ

page 10 2
Published on

ಕಿಂಗ್​ಸ್ಟನ್: ಡರೇನ್ ಸ್ಯಾಮ್ಮಿ ಅವರನ್ನು ಪ್ರೀತಿಯಿಂದಲೇ ‘ಕಾಲೂ’ (ಕರಿಯ) ಎಂದು ಕರೆಯುತ್ತಿದ್ದೆವು. ಜನಾಂಗೀಯ ನಿಂದನೆಯ ಉದ್ದೇಶ ಇರಲಿಲ್ಲ ಎಂದು ಸನ್​ರೈಸರ್ಸ್ ಆಟಗಾರನೊಬ್ಬ ತಿಳಿಸಿದ್ದಾನೆ. ಈ ಬಗ್ಗೆ ವೆಸ್ಟ್ ಇಂಡೀಸ್ ಮಾಜಿ ನಾಯಕನಿಗೇ ಕರೆ ಮಾಡಿ ಸ್ಪಷ್ಟನೆ ನೀಡಿದ್ದಾನೆ.

ಇದರ ಬೆನ್ನಲ್ಲೇ ಸ್ಯಾಮ್ಮಿ, ಕಾಲೂ ಎಂದು ಕರೆದಿದ್ದಕ್ಕೆ ಕ್ಷಮೆ ಯಾಚಿಸಬೇಕು ಎಂಬ ಬೇಡಿಕೆಯನ್ನು ಕೈಬಿಟ್ಟಿದ್ದಾರೆ. ‘ನನ್ನನ್ನು ಕಾಲೂ ಎಂದು ಕರೆಯುತ್ತಿದ್ದ ಸನ್​ರೈಸರ್ಸ್ ತಂಡದ ಆಟಗಾರನೊಬ್ಬ ಕರೆ ಸ್ಪಷ್ಟನೆ ನೀಡಿದ್ದಾನೆ. ನಾವು ಪ್ರೀತಿಯಿಂದಲೇ ಹಾಗೆ ಕರೆಯುತ್ತಿದ್ದೆವು ಎಂದು ಹೇಳಿದ್ದಾನೆ.

ನಾನು ಆತನ ಮಾತನ್ನು ನಂಬುತ್ತೇನೆ. ಕ್ಷಮೆ ಕೇಳಿ ಎಂದು ನಾನು ಹೇಳಲೇಬಾರದಾಗಿತ್ತು. ಉದ್ದೇಶಪೂರ್ವಕವಾಗಿ ಏನನ್ನೂ ಮಾಡಿಲ್ಲ ಎಂದಾದರೆ, ನಾನು ಈಗ ಅದಕ್ಕೆ ಬೇರೆಯೇ ಅರ್ಥ ಕಲ್ಪಿಸಿ ನೋವುಂಟುಮಾಡಿದಂತಾಗುತ್ತದೆ’ ಎಂದು ಸ್ಯಾಮ್ಮಿ ಐಪಿಎಲ್​ನಲ್ಲಿ ಜನಾಂಗೀಯ ನಿಂದನೆ ಎದುರಾಗಿತ್ತು ಎಂಬ ತಮ್ಮ ಆರೋಪದ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಆದರೆ ಆ ಆಟಗಾರ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net