ಅವರನ್ನು ನಾವು... Team India ಕುರಿತು New Zealand ಆಟಗಾರನ ಹೇಳಿಕೆ ವೈರಲ್​

New Zealand
Published on

ಮುಂಬೈ: ತವರು ನೆಲದಲ್ಲಿ ನ್ಯೂಜಿಲೆಂಡ್​ (New Zealand) ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ (Test Series) ಭಾರತ (Team India) ತಂಡವು 2-0 ಅಂತರದಿಂದ ಸೋಲುಂಡಿದ್ದು, 12 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಒಂದನ್ನು ಸೋಲುವ ಮೂಲಕ ಟೀಕೆಗೆ ಗುರಿಯಾಗಿದೆ. ಭಾರತದ (Team India) ನೆಲದಲ್ಲಿ ಬಹು ವರ್ಷಗಳ ಬಳಿಕ ಸರಣಿ ಗೆಲ್ಲುವ ಮೂಲಕ ನ್ಯೂಜಿಲೆಂಡ್​ ತಂಡವು ಹೊಸ ದಾಖಲೆಯೊಂದನ್ನು ಬರೆದಿದ್ದು, ಪ್ರವಾಸಿ (New Zealand) ತಂಡದ ಆಟಗಾರರು ನೀಡುತ್ತಿರುವ ಹೇಳಿಕೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗುತ್ತಿದೆ.

ನವೆಂಬರ್​ 01ರಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸರಣಿಯ ಅಂತಿಮ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ನ್ಯೂಜಿಲೆಂಡ್​ (New Zealand) ತಂಡದ ವಿಕೆಟ್​ ಕೀಪರ್​-ಬ್ಯಾಟರ್​ ಟಾಮ್ ಬ್ಲಂಡೆಲ್ (Tom Blundell)ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗುತ್ತಿದ್ದು, ಭಾರತೀಯ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. 

ಈ ಮೊದಲು ನಾವು ಟಿವಿ ನೋಡುವಾಗ ಸರಣಿ ಕ್ಲೀನ್​ ಸ್ವೀಪ್​ ಮಾಡಿದ್ದಾರೆ ಎಂದೆಲ್ಲಾ ಪ್ರಸಾರ ಮಾಡುತ್ತಿದ್ದರು. ಆದರೆ, ಶ್ರೀಲಂಕಾ ವಿರುದ್ಧದ ಸರಣಿಯಿಂದ ಸ್ವಲ್ಪ ಬದಲಾಗಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಆತಿಥೇಯರು ಶೆಲ್​ ಶಾಲ್​ ಆಗಿದ್ದಾರೆ ಎಂಬುದು ನಮಗೆ ಖಚಿತವಾಗಿದೆ. ಅವರನ್ನು ಸೋಲಿಸಲು ನಾವು ಹೇಗೆ ಹೊರಬಂದಿದ್ದೇವೆ ಎಂಬುದು ತಿಳಿದಿದೆ. ವಿಶ್ವದ ಅತ್ಯುತ್ತಮ ತಂಡಗಳಲ್ಲಿ ಒಂದಾದ ಭಾರತ ಸೋಲುಂಡಿರುವುದು ಅವರನ್ನು ಖಂಡಿತವಾಗಿಯೂ ಆಘಾತಕ್ಕೆ ಒಳಪಡಿಸಿದೆ.

ನೀವು ಇನ್ನೂ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ಗೆ ಅರ್ಹತೆ ಪಡೆದುಕೊಂಡಿದ್ದೀರಾ. ಇದು ನಮಗೆ (New Zealand) ಪ್ರೇರಣೆಯಾಗಿದೆ. ಇದು ಎಲ್ಲೋ ಭಾರತ ತಂಡದ ಮೇಲೆ ಪ್ರಭಾವ ಬೀರುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಇಲ್ಲಿ ಸಾಧಿಸಿರುವುದು ಬಹಳ ಅಗಾಧವಾಗಿದೆ, ಇದು ಬಹುಶಃ ನನ್ನ ವೃತ್ತಿಜೀವನದ ಅತಿದೊಡ್ಡ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ನಾವು ಅವರನ್ನು 3-0 ಅಂತರದಿಂದ ಸೋಲಿಸಲು ಉತ್ಸುಕರಾಗಿದ್ದೇವೆ ಎಂದು ನ್ಯೂಜಿಲೆಂಡ್​ (New Zealand) ತಂಡದ ವಿಕೆಟ್​ ಕೀಪರ್​-ಬ್ಯಾಟರ್​ ಟಾಮ್ ಬ್ಲಂಡೆಲ್ (Tom Blundell) ಹೇಳಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net