

ಸಿಡ್ನಿ: ಜೂನ್ 11ರಿಂದ ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ 3ನೇ ಆವೃತ್ತಿಯ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೆಲಿಯಾ ಮತ್ತು ದಣ ಆಫ್ರಿಕಾ ತಂಡಗಳ ಮುಖಾಮುಖಿ ಖಚಿತಗೊಂಡಿದೆ. ದಣ ಆಫ್ರಿಕಾ (ಶೇ.66.67) ಅಗ್ರಸ್ಥಾನದೊಂದಿಗೆ ಈಗಾಗಲೆ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿದ್ದರೆ, ಆಸ್ಟ್ರೆಲಿಯಾ (ಶೇ. 63.73) ಸಿಡ್ನಿ ಟೆಸ್ಟ್ ಗೆಲುವಿನೊಂದಿಗೆ ಫೈನಲ್ ಸ್ಥಾನ ಒಲಿಸಿಕೊಂಡಿದೆ. ಇನ್ನು ಆಸೀಸ್-ಲಂಕಾ ಸರಣಿಯ ಫಲಿತಾಂಶ ಡಬ್ಲ್ಯುಟಿಸಿಯಲ್ಲಿ ನಗಣ್ಯವೆನಿಸಿದೆ. ಸಿಡ್ನಿ ಟೆಸ್ಟ್ ಸೋಲಿನೊಂದಿಗೆ ಭಾರತ ತಂಡ (ಶೇ.50) ಫೈನಲ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. 2 ಬಾರಿಯ ರನ್ನರ್ಅಪ್ ಭಾರತ ಇದೇ ಮೊದಲ ಬಾರಿಗೆ ಡಬ್ಲ್ಯುಟಿಸಿ ಫೈನಲ್ನಿಂದ ವಂಚಿತವಾಗಿದೆ.
ಆಸೀಸ್ ಬಳಿ 7 ದ್ವಿಪಯ ಟ್ರೋಫಿ!
ಆಸ್ಟ್ರೆಲಿಯಾ ತಂಡವೀಗ ವಿಶ್ವ ನಂ.1 ರ್ಯಾಂಕ್ ಟೆಸ್ಟ್ ತಂಡ, ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟದೊಂದಿಗೆ 7 ಪ್ರಮುಖ ದ್ವಿಪಕ್ಷೀಯ ಟೆಸ್ಟ್ ಸರಣಿಗಳಲ್ಲಿ ಹಾಲಿ ಚಾಂಪಿಯನ್ ತಂಡವೆನಿಸಿದೆ. ಬಾರ್ಡರ್-ಗಾವಸ್ಕರ್ ಟ್ರೋಫಿ ಜತೆಗೆ ಆಶಸ್ (ಇಂಗ್ಲೆಂಡ್), ಫ್ರಾಂಕ್ವೊರೆಲ್ ಟ್ರೋಫಿ (ವಿಂಡೀಸ್), ಟಾನ್ಸ್-ಟಾಸ್ಮನ್ ಟ್ರೋಫಿ (ನ್ಯೂಜಿಲೆಂಡ್), ಸದರ್ನ್ ಕ್ರಾಸ್ ಟ್ರೋಫಿ (ಜಿಂಬಾಬ್ವೆ), ವಾರ್ನ್&ಮುರಳೀಧರನ್ ಟ್ರೋಫಿ (ಶ್ರೀಲಂಕಾ) ಮತ್ತು ಬೆನೌಡ್-ಖಾದಿರ್ ಟ್ರೋಫಿ (ಪಾಕಿಸ್ತಾನ) ಆಸೀಸ್ ಬಳಿ ಇದೆ.