

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ (ಬಿಡಬ್ಲ್ಯುಎಫ್) ಮುಂದಿನ ವರ್ಷದಿಂದ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸಿಂಥೆಟಿಕ್ ಷಟಲ್ಕಾಕ್ ಬಳಕೆಗೆ ಕಳೆದ ಜನವರಿಯಲ್ಲೇ ನಿರ್ಧರಿಸಿತ್ತು. ಆದರೆ, ಕರೊನಾ ಭೀತಿಯಿಂದಾಗಿ ಈಗ ಬ್ಯಾಡ್ಮಿಂಟನ್ ಚಟುವಟಿಕೆಗಳೇ ನಿಂತಿರುವುದರಿಂದಾಗಿ ಸಿಂಥೆಟಿಕ್ ಷಟಲ್ಕಾಕ್ ಜತೆಗೆ ಅಭ್ಯಾಸ ನಡೆಸಿ ಅದಕ್ಕೆ ಒಗ್ಗಿ ಕೊಳ್ಳಲು ಸಮಯದ ಅಭಾವ ಇದೆ.
ಹೀಗಾಗಿ ಅದರ ಬಳಕೆ ವಿಳಂಬವಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಈಗಿರುವ ಬಾತುಕೋಳಿ ಗರಿಗಳ ಷಟಲ್ ಬಳಕೆ ಮುಂದುವರಿಯಲಿದೆ. ಗರಿಗಳ ಷಟಲ್ಗಿಂತ ಅಗ್ಗಮತ್ತು ದೀರ್ಘಬಾಳಿಕೆ ಸಿಂಥೆಟಿಕ್ ಬಳಕೆಯತ್ತ ಒಲವು ತೋರಲು ಕಾರಣವಾಗಿದೆ.