BENGALURU: ಚಿನ್ನಸ್ವಾಮಿ ಸ್ಟೇಡಿಯಂ ಸ್ಟ್ಯಾಂಡ್​ಗಳಿಗೆ ರಾಜ್ಯದ ದಿಗ್ಗಜರ ಹೆಸರು ನಾಮಕರಣ!

New Project (1)
Published on

ಬೆಂಗಳೂರು: ಉದ್ಯಾನನಗರಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರ ಸ್ಟಾೃಂಡ್‌ಗಳಿಗೆ ರಾಜ್ಯದ 10 ದಿಗ್ಗಜ ಆಟಗಾರರ ಹೆಸರುಗಳನ್ನು ಕೆಎಸ್‌ಸಿಎ ಅಧಿಕೃತವಾಗಿ ನಾಮಕರಣಗೊಳಿಸಿದೆ. ಹಾಲಿ ಡಬ್ಲುೃಪಿಎಲ್ ಟೂರ್ನಿಯಿಂದ ರಾಜ್ಯದ ಮಾಜಿ ಕ್ರಿಕೆಟಿಗರ ಹೆಸರುಗಳನ್ನು ಪ್ರತಿಷ್ಠಿತ ಸ್ಟಾೃಂಡ್‌ಗಳಲ್ಲಿ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಕಾಣಬಹುದಾಗಿದೆ.

ಕಳೆದ ನವೆಂಬರ್‌ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆ ರಾಜ್ಯದ ಅಗ್ರ 10 ದಿಗ್ಗಜ ಕ್ರಿಕೆಟಿಗರನ್ನು ಗೌರವಿಸುವುದರ ಜತೆಗೆ ಮುಂದಿನ ಪೀಳಿಗೆಯೂ ಅವರ ಸಾಧನೆಯನ್ನು ಸ್ಮರಿಸುವ ದೃಷ್ಟಿಯಿಂದ 2024ರ ವಾರ್ಷಿಕ ಮಹಾಸಭೆಯಲ್ಲಿ ಕೆಎಸ್‌ಸಿಎ ಈ ನಿರ್ಣಯ ಕೈಗೊಂಡಿತ್ತು. ಇದರಲ್ಲಿ ಚೊಚ್ಚಲ ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡ ಐವರು ಆಟಗಾರರ ಹೆಸರಿದೆ. ಆದರೆ ಮಹಿಳಾ ಕ್ರಿಕೆಟಿಗರ ಹೆಸರನ್ನು ಪರಿಗಣಿಸದಿರುವುದು ಮಹಿಳಾ ಆಟಗಾರ್ತಿಯರ ಅಸಮಾಧಾನಕ್ಕೆ ಕಾರಣವಾಗಿತ್ತು. ಡಬ್ಲುೃಪಿಎಲ್ ಟೂರ್ನಿಯ ಸಿದ್ಧತೆಯ ಭಾಗವಾಗಿ ಕಳೆದ ಎರಡು ದಿನಗಳಿಂದ ಸ್ಟಾೃಂಡ್‌ಗಳಿಗೆ ದಿಗ್ಗಜರ ಹೆಸರುಗಳ ಬೋರ್ಡ್ ಅಳವಡಿಕೆ ಕಾರ್ಯ ನಡೆಸಲಾಗಿದೆ.

ಸ್ಟಾೃಂಡ್‌ಗಳ ನೂತನ ಹೆಸರು: ಎರ‌್ರಪಳ್ಳಿ ಪ್ರಸನ್ನ (ಹಿಂದಿನ ಹೆಸರು: ಪಿ1 ಸ್ಟಾೃಂಡ್), ಜಿ.ಆರ್. ವಿಶ್ವನಾಥ್ (ಪಿ2 ಸ್ಟಾೃಂಡ್), ಬಿ.ಎಸ್. ಚಂದ್ರಶೇಖರ್ (ಪಿ ಟೆರೆಸ್), ಬ್ರಿಜೇಶ್ ಪಟೇಲ್ (ಎಂ1 ಸ್ಟಾೃಂಡ್), ಸಯ್ಯದ್ ಕೀರ್ಮಾನಿ (ಪಿ ಕಾರ್ಪೋರೇಟ್), ರೋಜರ್ ಬಿನ್ನಿ (ಎಂ-2 ಸ್ಟಾೃಂಡ್), ಅನಿಲ್ ಕುಂಬ್ಳೆ ಡೈಮಂಡ್ ಬಾಕ್ಸ್, ರಾಹುಲ್ ದ್ರಾವಿಡ್ (ಎನ್ ಸ್ಟಾೃಂಡ್), ಜಾವಗಲ್ ಶ್ರೀನಾಥ್ (ಪಿ1-ಎ ಸ್ಟಾೃಂಡ್), ವೆಂಕಟೇಶ್ ಪ್ರಸಾದ್ (ಪಿ-4 ಸ್ಟಾೃಂಡ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net