

ಬೆಂಗಳೂರು: ಯುವ ಬ್ಯಾಟರ್ ಅನೀಶ್ವರ್ ಗೌತಮ್ (95* ರನ್, 58 ಎಸೆತ, 8 ಬೌಂಡರಿ, 5 ಸಿಕ್ಸರ್) ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ಶ್ರೀಜೀತ್ (77 ರನ್, 44 ಎಸೆತ, 6 ಬೌಂಡರಿ) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮಂಗಳೂರು ಡ್ರಾೃಗನ್ಸ್ ಎದುರು ರನ್ ಮಳೆಹರಿಸಿ 42 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
ಇದರೊಂದಿಗೆ ಮನೀಷ್ ಪಾಂಡೆ ಬಳಗ ಅಗ್ರಸ್ಥಾನಕ್ಕೆ ಮರಳಿದರೆ, ಶ್ರೇಯಸ್ ಗೋಪಾಲ್ ಸಾರಥ್ಯದ ಮಂಗಳೂರು ಸೆಮಿೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಮಂಗಳೂರು ತಂಡದ ಸೋಲಿನಿಂದ ಗುಲ್ಬರ್ಗಾ ಮಿಸ್ಟಿಕ್ಸ್ 3ನೇ ತಂಡವಾಗಿ ಸೆಮೀಸ್ ಪ್ರವೇಶ ಖಚಿತಪಡಿಸಿಕೊಂಡಿತು.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸೆಣಸಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಹುಬ್ಬಳ್ಳಿ ಟೈಗರ್ಸ್ ತಂಡ 13 ರನ್‌ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. ಆಗ ಜತೆಯಾದ ಶ್ರೀಜೀತ್ ಹಾಗೂ ಅನೀಶ್ವರ್ 3ನೇ ವಿಕೆಟ್‌ಗೆ ನಡೆಸಿದ ಬಿರುಸಿನ ಜತೆಯಾಟದಿಂದ ಹುಬ್ಬಳ್ಳಿ 3 ವಿಕೆಟ್‌ಗೆ 209 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ 10.1 ಓವರ್‌ಗಳಲ್ಲಿ 3 ವಿಕೆಟ್‌ಗೆ 100 ರನ್‌ಗಳಿಸಿ ಸುಸ್ಥಿತಿಯಲಿದ್ದ ಮಂಗಳೂರು ತಂಡ ನಂತರ ಚೇಸಿಂಗ್‌ನಲ್ಲಿ ಲಯ ತಪ್ಪಿತು. ವೇಗಿಗಳಾದ ನಿಶ್ಚಿತ್ ಪೈ (21ಕ್ಕೆ3), ರಿಷಿ ಬೋಪಣ್ಣ (28ಕ್ಕೆ 3) ದಾಳಿಗೆ ಕುಸಿದು ಅಂತಿಮವಾಗಿ 19.2 ಓವರ್‌ಗಳಲ್ಲಿ 167 ರನ್‌ಗಳಿಗೆ ಸರ್ವಪತನ ಕಂಡ ಮಂಗಳೂರು ಸತತ 4ನೇ ಸೋಲು ಅನುಭವಿಸಿತು.
ಹುಬ್ಬಳ್ಳಿ ಟೈಗರ್ಸ್: 3 ವಿಕೆಟ್‌ಗೆ 209 (ತಾಹ 0, ಕಾರ್ತಿಕೇಯ 9, ಕೆಎಲ್ ಶ್ರೀಜೀತ್ 77, ಅನೀಶ್ವರ್ ಗೌತಮ್ 95*, ಮನೀಷ್ ಪಾಂಡೆ 24*, ಅಭಿಲಾಷ್ ಶೆಟ್ಟಿ 18ಕ್ಕೆ 1).
ಮಂಗಳೂರು ಡ್ರಾೃಗನ್ಸ್: 19.2 ಓವರ್‌ಗಳಲ್ಲಿ 167 (ಮ್ಯಾಕ್ನೀಲ್ 14, ರೋಹನ್ ಪಾಟೀಲ್ 25, ತುಷಾರ್ 11, ಕೆ.ಸಿದ್ದಾರ್ಥ್ 30, ಲೋಚನ್ 35, ಶ್ರೇಯಸ್ ಗೋಪಾಲ್ 38,ನಿಶ್ಚಿತ್ ಪೈ 21ಕ್ಕೆ 3, ರಿಷಿ ಬೋಪಣ್ಣ 28ಕ್ಕೆ 3).