

ಟೋಕಿಯೊ: ಜಪಾನ್ನ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ತಂಡದ ನಾಯಕಿ ಶೋಕೊ ಮಿಯಾಟ ಧೂಮಪಾನ ಮಾಡುವ ಮೂಲಕ ತಂಡದ ನೀತಿಸಂಹಿತೆ ಉಲ್ಲಂಘಿಸಿದ ತಪ್ಪಿಗಾಗಿ ಪ್ಯಾರಿಸ್ ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ.
1964ರ ಟೋಕಿಯೊ ಒಲಿಂಪಿಕ್ಸ್ ಬಳಿಕ ಮೊದಲ ಬಾರಿ ಪದಕ ಗೆಲ್ಲುವ ಹಂಬಲದಲ್ಲಿರುವ ಜಪಾನ್ ಮಹಿಳಾ ಜಿಮ್ನಾಸ್ಟಿಕ್ಸ್ ತಂಡ ಮೊನಾಕೊದಲ್ಲಿ ತರಬೇತಿ ಶಿಬಿರದಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿತ್ತು. ಈ ವೇಳೆ 19 ವರ್ಷದ ಮಿಯಾಟ ಧೂಮಪಾನ ಮಾಡಿರುವುದಕ್ಕಾಗಿ ತವರಿಗೆ ಮರಳಿದ್ದು, ವಿಚಾರಣೆ ಎದುರಿಸಲಿದ್ದಾರೆ ಎಂದು ಜಪಾನ್ ಜಿಮ್ನಾಸ್ಟಿಕ್ಸ್ ಸಂಸ್ಥೆ ತಿಳಿಸಿದೆ.