Success Story: ಅಪ್ಪ ಸ್ಟಾರ್ ಕ್ರಿಕೆಟರ್, ಅಮ್ಮ ಡ್ಯಾನ್ಸರ್​..ಪುತ್ರಿ ವೃತ್ತಿ ಯಾವುದು ಗೊತ್ತಾ?

sana
Published on

ಕೋಲ್ಕತ್ತಾ: ಭಾರತ ತಂಡದ ಮಾಜಿ ಕ್ಯಾಪ್ಟನ್​ ಸೌರವ್ ಗಂಗೂಲಿ ಒಬ್ಬ ಸ್ಟಾರ್ ಕ್ರಿಕೆಟಿಗ. ಅವರ ಪತ್ನಿ ಡೊನ್ನಾ ಗಂಗೂಲಿ ಉತ್ತಮ ಒಡಿಸ್ಸಿ ನೃತ್ಯಗಾರ್ತಿ. ಇವರಿಬ್ಬರೂ ತಮ್ಮ ತಮ್ಮ ವೃತ್ತಿಗಳಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ, ಇವರ ಪುತ್ರಿ ಸನಾ ಗಂಗೂಲಿ ಪಾಲಕರ ವೃತ್ತಿ, ಖ್ಯಾತಿ ಲೆಕ್ಕಿಸದೆ ವಿಭಿನ್ನ ಮಾರ್ಗವನ್ನು ಆರಿಸಿಕೊಂಡಿದ್ದಾರೆ.

ಸನಾ ಗಂಗೂಲಿ 2001ರ ನವೆಂಬರ್ 3 ರಂದು ಜನಿಸಿದರು. ಪ್ರಖ್ಯಾತಿಯ ಉತ್ತುಂಗದಲ್ಲಿರುವ ಪಾಲಕರ ವೃತ್ತಿ ಜೀವನವನ್ನು ಅನುಸರಿಸದೆ ಶೈಕ್ಷಣಿಕ ಅಗತ್ಯತೆಗನುಗುಣವಾಗಿ ತನ್ನದೇ ಆದ ಪ್ರತ್ಯೇಕ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಆಕೆ ಕಾರ್ಪೋರೇಟ್​ ವಲಯದ ಕಡೆ ಮುಂದುವರಿಯುತ್ತಿರುವುದು ಕಂಡುಬರುತ್ತಿದೆ.

ಸನಾ ತನ್ನ ಶಾಲಾ ಶಿಕ್ಷಣವನ್ನು ಅತ್ಯಂತ ಹಳೆಯ ಸಂಸ್ಥೆಯಾದ ಲೊರೆಟೊ ಹೈನಲ್ಲಿ ಪೂರ್ಣಗೊಳಿಸಿದ್ದು, ಶೇ 98 ಅಂಕ ಪಡೆದಿದ್ದಳು. ಬೋರ್ಡ್ ಪರೀಕ್ಷೆಗಳಲ್ಲೂ ಪ್ರತಿಭಾವಂತೆ ಎನಿಸಿಕೊಂಡಿದ್ದಳು. ಇದು ಮುಂದೆ ಆಕೆಗೆ ಅತ್ಯಂತ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಯುಕೆಯ ಯೂನಿವರ್ಸಿಟಿ ಕಾಲೇಜ್ ಲಂಡನ್ ನಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಅನುಕೂಲವಾಯಿತು. ಅಲ್ಲಿ ಸನಾ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

ಸನಾ, ಪಿಡಬ್ಲ್ಯೂಸಿ ಮತ್ತು ಡೆಲಾಯ್ಟ್‌ನಲ್ಲಿ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ್ದಾರೆ. ನಂತರ ಇನ್ನೋವರ್ವ್‌ನಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಬಳಿಕ ಮಾರ್ಗನ್ ಸ್ಟಾನ್ಲಿ ವೆಲ್ತ್ ಮ್ಯಾನೇಜ್‌ಮೆಂಟ್‌ನಲ್ಲಿ ವಿಶ್ಲೇಷಕರಾಗಿಯೂ ಕೆಲಸ ಮಾಡಿದ್ದಾರೆ. ಮತ್ತು ಸನಾ ಗಂಗೂಲಿ ಕೂಡ ತನ್ನ ತಾಯಿಯಂತೆ ಉತ್ತಮ ಒಡಿಸ್ಸಿ ನೃತ್ಯಗಾರ್ತಿಯೂ ಆಗಿದ್ದಾರೆ.

ಕ್ರಿಕೆಟ್ ಆಟಗಾರರ ಕುಟುಂಬದ ಪರಂಪರೆಯಿಂದ ಕಾರ್ಪೊರೇಟ್ ಯಶಸ್ಸಿನತ್ತ ಸಾಗುವ ಮೂಲಕ ವೃತ್ತಿಪರ ಜಗತ್ತಿನಲ್ಲಿ ತನ್ನ ದಾರಿಯನ್ನು ಕಂಡುಕೊಳ್ಳುವ ಸಾಮರ್ಥ್ಯವನ್ನು ಸನಾ ಸಾಬೀತುಪಡಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net