16ಕ್ಕೆ ಐಪಿಎಲ್ ಫ್ರಾಂಚೈಸಿ ಮಾಲೀಕರ ಜತೆಗೆ ಮಹತ್ವದ ಸಭೆ ಕರೆದ ಬಿಸಿಸಿಐ: ಕಾರಣ ಏನು ಗೊತ್ತಾ!

New-Project-1
Published on

ನವದೆಹಲಿ: ಐಪಿಎಲ್‌ನಲ್ಲಿ ಆಡುವ ಎಲ್ಲ 10 ್ರಾಂಚೈಸಿಗಳ ಮಾಲೀಕರ ಜತೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಏಪ್ರಿಲ್ 16ರಂದು ಅಹಮದಾಬಾದ್‌ನಲ್ಲಿ ಮಹತ್ವದ ಸಭೆ ನಿಗದಿಪಡಿಸಿದೆ. ಐಪಿಎಲ್ 18ನೇ ಆವೃತ್ತಿಗೆ ಮುನ್ನ ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಚರ್ಚಿಸಲು ಈ ಆಹ್ವಾನ ನೀಡಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಏ. 16ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ಸಭೆ ನಡೆಯಲಿದೆ. ಸಭೆಗೆ ಯಾವುದೇ ನಿಗದಿತ ಅಜೆಂಡಗಳಿಲ್ಲ. ಆದರೆ ಆಟಗಾರರ ರೀಟೇನ್ ಹಾಗೂ ಹರಾಜಿನಲ್ಲಿ ತಂಡದ ಆಟಗಾರರ ಖರೀದಿಯ ಒಟ್ಟು ಬಜೆಟ್ ನಿಗದಿ ಸೇರಿ ಇತರ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಗಳಿವೆ.

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಷಾ ಹಾಗೂ ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಚರ್ಚೆಯ ವಿಷಯಗಳನ್ನು ್ರಾಂಚೈಸಿ ಮಾಲೀಕರ ಜತೆಗೆ ಗೌಪ್ಯವಾಗಿರಿಸಲಾಗಿದೆ. ಆದರೆ 2025ರ ಮೆಗಾ ಹರಾಜಿಗೆ ಮುನ್ನ ತಂಡಗಳು ರಿಟೇನ್ ಮಾಡಿಕೊಳ್ಳುವ ಆಟಗಾರರ ಸಂಖ್ಯೆ 8ಕ್ಕೇರಿಸುವಂತೆ ಕೆಲ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇನ್ನು ಕೆಲವರು ಇದಕ್ಕೆ ಅಸಮಾಧಾನ ಹೊಂದಿದ್ದಾರೆ. ಗರಿಷ್ಠ ಆಟಗಾರರನ್ನು ಉಳಿಸಿಕೊಂಡು ತಂಡದ ಬ್ರ್ಯಾಂಡ್ ಹಾಗೂ ಅಭಿಮಾನಿ ಬಳಗ ಉಳಿಸಿಕೊಳ್ಳುವ ಬಗ್ಗೆ ಮಾಲೀಕರು ಆಸಕ್ತಿ ಹೊಂದಿದ್ದಾರೆ. ಜತೆಗೆ ರೈಟು ಮ್ಯಾಚ್ ಕಾರ್ಡ್ ಮರು ಜಾರಿ, ಸಭೆಯಲ್ಲಿ ಚರ್ಚೆಯಾಗುವ ಮತ್ತೊಂದು ಪ್ರಮುಖ ವಿಷಯವಾಗಿದೆ. 2022ರಲ್ಲಿ ಕೊನೆಯದಾಗಿ ಮೆಗಾ ಹರಾಜು ನಡೆದಿತ್ತು.

ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲ ತಂಡಗಳಿಗೂ ಒಟ್ಟು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಇದರಲ್ಲಿ 3 ಭಾರತೀಯರು, ಇಬ್ಬರು ವಿದೇಶಿ ಆಟಗಾರರು ಒಳಗೊಂಡಿರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net